ಖ್ಯಾತ ಹಾಸ್ಯ ನಟ ಪರೇಶ್​ ರಾವಲ್​ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?

Paresh Rawal | Death Hoax: ‘ಇಂದು ಮುಂಜಾನೆ 7 ಗಂಟೆಗೆ ಹಿಂದಿ ಚಿತ್ರರಂಗದ ಖ್ಯಾತ ನಟ ಪರೇಶ್​ ರಾವಲ್​ ನಿಧನರಾದರು’ ಎಂದು ಲಾಫ್ಟರ್​ ಹೌಸ್​ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಸುದ್ದಿ ಪೋಸ್ಟ್​ ಮಾಡಲಾಗಿತ್ತು. ಅದಕ್ಕೆ ಕಂಡು ಒಮ್ಮೆಲೇ ಎಲ್ಲರಿಗೂ ಶಾಕ್​ ಆಯಿತು. ಕೆಲವೇ ಕ್ಷಣಗಳಲ್ಲಿ ಆ ಪೋಸ್ಟ್​ ವೈರಲ್​ ಆಯಿತು.

ಖ್ಯಾತ ಹಾಸ್ಯ ನಟ ಪರೇಶ್​ ರಾವಲ್​ ಸಾವಿನ ವದಂತಿ; ಬೆಳಗ್ಗೆ 7 ಗಂಟೆಗೆ ಏನಾಗಿತ್ತು?
ಪರೇಶ್ ರಾವಲ್

ಕೊರೊನಾ ವೈರಸ್​ ಸೃಷ್ಟಿಸಿರುವ ಅನಾಹುತದಿಂದಾಗಿ ಪ್ರತಿದಿನ ಕೆಟ್ಟ ಸುದ್ದಿಗಳು ಕೇಳಿಬರುತ್ತಿರುವುದು ನಿಜ. ಸೆಲೆಬ್ರಿಟಿಗಳ ವಲಯದಲ್ಲಿ ಅನೇಕರು ಸಾವಿನ ಮನೆ ಸೇರುತ್ತಿದ್ದಾರೆ. ಆದರೆ ಈ ಸಂದರ್ಭವನ್ನು ಕೆಲವು ಕಿಡಿಗೇಡಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹೆಚ್ಚು ಲೈಕ್ಸ್​ ಮತ್ತು ಫಾಲೋವರ್ಸ್​ ಪಡೆಯುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳ ನಿಧನದ ವದಂತಿಯನ್ನು ಹರಡಿಸಲಾಗುತ್ತಿದೆ. ಇತ್ತೀಚೆಗೆ ನಟ ಪರೇಶ್​ ರಾವಲ್​ ಬಗ್ಗೆ ಒಂದು ಸುಳ್ಳು ಸುದ್ದಿ ಹಬ್ಬಿತ್ತು. ಅದಕ್ಕೆ ಸ್ವತಃ ಪರೇಶ್​ ರಾವಲ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಇಂದು ಮುಂಜಾನೆ 7 ಗಂಟೆಗೆ ಹಿಂದಿ ಚಿತ್ರರಂಗದ ಖ್ಯಾತ ನಟ ಪರೇಶ್​ ರಾವಲ್​ ನಿಧನರಾದರು’ ಎಂದು ಲಾಫ್ಟರ್​ ಹೌಸ್​ ಎಂಬ ಫೇಸ್​ಬುಕ್​ ಪೇಜ್​ನಲ್ಲಿ ಸುದ್ದಿ ಪೋಸ್ಟ್​ ಮಾಡಲಾಗಿತ್ತು. ಅದಕ್ಕೆ ಕಂಡು ಒಮ್ಮೆಲೇ ಎಲ್ಲರಿಗೂ ಶಾಕ್​ ಆಯಿತು. ಕೆಲವೇ ಕ್ಷಣಗಳಲ್ಲಿ ಆ ಪೋಸ್ಟ್​ ವೈರಲ್​ ಆಯಿತು. ಅದು ಸುಳ್ಳು ಸುದ್ದಿ ಎಂಬುದು ಗೊತ್ತಾಗುತ್ತಿದ್ದಂತೆಯೇ ಕಮೆಂಟ್​ ಮೂಲಕ ಎಲ್ಲರೂ ಎಚ್ಚರಿಕೆ ನೀಡಿದ್ದಾರೆ. ಇಂತ ವದಂತಿ ಹಬ್ಬಿಸುವವರ ವಿರುದ್ಧ ದೂರು ದಾಖಲಿಸುವುದಾಗಿ ಪರೇಶ್​ ರಾವಲ್​ ಅಭಿಮಾನಿಗಳು ತಿಳಿಸಿದ್ದಾರೆ.

ಈ ಪೋಸ್ಟ್​ ಪರೇಶ್​ ರಾವಲ್​ ಗಮನಕ್ಕೂ ಬಂದಿದೆ. ಅದರ ಸ್ಕ್ರೀನ್​ ಶಾಟ್​ ಶೇರ್ ಮಾಡಿಕೊಂಡಿರುವ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ‘7 ಗಂಟೆ ನಂತರ ನಾನು ಮಲಗಿಕೊಂಡಿದ್ದೆ. ಅದನ್ನೇ ತಪ್ಪು ತಿಳಿದುಕೊಂಡಿದ್ದೀರಿ’ ಎಂದು ಹಾಸ್ಯದ ದಾಟಿಯಲ್ಲೇ ಅವರು ಉತ್ತರ ನೀಡಿದ್ದಾರೆ.

ಪರೇಶ್​ ರಾವಲ್​ ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳ ವಿಚಾರದಲ್ಲೂ ಹೀಗೆಯೇ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ನಟ ಅನುಪಮ್​ ಖೇರ್​ ಅವರ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ನಂತರ ಅದನ್ನು ಅನುಪಮ್​ ಖೇರ್​ ತಳ್ಳಿ ಹಾಕಿದರು. ಗಾಯಕ ಲಕ್ಕಿ ಅಲಿ, ಶಕ್ತಿಮಾನ್​ ಖ್ಯಾತಿಯ ನಟ ಮುಕೇಶ್​ ಖನ್ನಾ ಸಾವಿನ ಬಗ್ಗೆಯೂ ವದಂತಿ ಹಬ್ಬಿಸಲಾಗಿತ್ತು.

ಇದನ್ನೂ ಓದಿ:

Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​

Lucky Ali Death Hoax: ಗಾಯಕ ಲಕ್ಕಿ ಅಲಿ ನಿಧನರಾಗಿದ್ದಾರೆ ಎಂಬುದು ಸುಳ್ಳುಸುದ್ದಿ: ನಫೀಸಾ ಅಲಿ