ನಮ್ಮ ಕಾಲದಲ್ಲಿ ಹೀರೋಯಿನ್​ಗಳು ವರ್ಜಿನ್​ ಆಗಿರಬೇಕಿತ್ತು; ಮಗಳ ಪರ್ಸನಲ್​ ಲೈಫ್​ ಕೆದಕಿದವರಿಗೆ ನಟಿಯ ಉತ್ತರ

ಬಾಲಾಸಾಹೇಬ್​ ಠಾಕ್ರೆ ಮೊಮ್ಮೊಗ ಐಶ್ವರಿ ಹಾಗೂ ಅಲಾಯಾ ರಿಲೇಶನ್​ನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ಅಲಾಯ ಹೇಳಿಕೊಂಡಿದ್ದರು.

ನಮ್ಮ ಕಾಲದಲ್ಲಿ ಹೀರೋಯಿನ್​ಗಳು ವರ್ಜಿನ್​ ಆಗಿರಬೇಕಿತ್ತು; ಮಗಳ ಪರ್ಸನಲ್​ ಲೈಫ್​ ಕೆದಕಿದವರಿಗೆ ನಟಿಯ ಉತ್ತರ
ಪೂಜಾ ಹಾಗೂ ಆಲಯ

ಚಿತ್ರರಂಗಕ್ಕೆ ಕಾಲಿಟ್ಟ ನಂತರದಲ್ಲಿ ನಟ-ನಟಿಯರ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರೂ ಹೋಟೆಲ್​ನಲ್ಲಿ ಒಟ್ಟಾಗಿ ಡಿನ್ನರ್​ ಮಾಡಿದರೆ, ಶೂಟಿಂಗ್​ನಲ್ಲಿ ನಗುತ್ತಾ ಮಾತನಾಡಿದರೆ, ನಟನ ಪೋಸ್ಟ್​ಗೆ ನಟಿ ಕಮೆಂಟ್​ ಮಾಡಿದರೆ ಹೀಗೆ ವದಂತಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಈಗ ನಟಿ ಪೂಜಾ ಬೇಡಿ ಮಗಳು ಅಲಾಯಾ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ಅವರ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ. ಇದಕ್ಕೆ ಪೂಜಾ ಬೇಡಿ ಖಡಕ್​ ಉತ್ತರ ನೀಡಿದ್ದಾರೆ.

ರಾಜಕೀಯ ಹಿನ್ನೆಲೆ ಹೊಂದಿರುವ ಠಾಕ್ರೆ ಕುಟುಂಬದ ಕುಡಿ ಐಶ್ವರಿ ಠಾಕ್ರೆ ಮತ್ತು ಅಲಾಯಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಆದರೆ, ಇದನ್ನು ಈ ವರೆಗೆ ಯಾರೊಬ್ಬರೂ ಅಧಿಕೃತಗೊಳಿಸಿಲ್ಲ. ಇತ್ತೀಚೆಗೆ ಪೂಜಾ ಬೇಡಿ ಮಾಧ್ಯಮವನ್ನು ಎದುರುಗೊಂಡರು. ಈ ವೇಳೆ ಅವರು ಮಗಳನ್ನು ವಹಿಸಿಕೊಂಡು ಮಾತನಾಡಿದ್ದಾರೆ.

ನಮ್ಮ ಕಾಲದಲ್ಲಿ ಪರಿಸ್ಥಿತಿಗಳು ಬೇರೆ ಇದ್ದವು. ನಟಿಗೆ ಬಾಯ್​ಫ್ರೆಂಡ್ ಇರಬಾರದಿತ್ತು. ಅವಳು ವರ್ಜಿನ್​ ಆಗಿರಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಟಿಯರಿಗೆ ಮದುವೆ ಆಗಿರಬಾರದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಪ್ರತಿಯೊಬ್ಬ ಜೀವಿಗೂ ಖಾಸಗಿ ಜೀವನ ತನ್ನಿಷ್ಟದಂತೆ ಬದುಕುವ ಹಕ್ಕಿದೆ ಎಂದು ಹೇಳುವ ಮೂಲಕ ಮಗಳು ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಪೂಜಾ ಬೇಡಿ ಪರೋಕ್ಷವಾಗಿ ಹೇಳಿದರು.

ಕರೀನಾ ಕಪೂರ್​ಗೆ ಮದುವೆ ಆಗಿದೆ. ಆದಾಗ್ಯೂ ಅವರು ಬೇಡಿಕೆ ಕಳೆದಕೊಂಡಿಲ್ಲ. ಪ್ರೇಕ್ಷಕರ ಮಸ್ಥಿತಿಯಲ್ಲಿ ಬದಲಾವಣೆ ಆಗಿರುವುದರಿಂದ ಇಂಡಸ್ಟ್ರಿಯಲ್ಲಿ ಒಂದು ಬದಲಾವಣೆ ಬಂದಿದೆ. ಸೋಶಿಯಲ್​ ಮೀಡಿಯಾಗೆ ಒಂದು ಥ್ಯಾಂಕ್ಸ್​ ಹೇಳಲೇಬೇಕು ಎಂದಿದ್ದಾರೆ ಪೂಜಾ.

ಬಾಲಾಸಾಹೇಬ್​ ಠಾಕ್ರೆ ಮೊಮ್ಮೊಗ ಐಶ್ವರಿ ಹಾಗೂ ಅಲಾಯಾ ರಿಲೇಶನ್​ನಲ್ಲಿದ್ದಾರೆ ಎನ್ನಲಾಗಿದೆ. ಆದರೆ, ನಮ್ಮಿಬ್ಬರ ನಡುವೆ ಇರೋದು ಕೇವಲ ಫ್ರೆಂಡ್​ಶಿಪ್​ ಎಂದು ಅಲಾಯ ಹೇಳಿಕೊಂಡಿದ್ದರು. ನಮ್ಮಿಬ್ಬರಿಗೆ ಮೊದಲಿನಿಂದಲೂ ಪರಿಯಚ ಇದೆ. ಐಶ್ವರಿ ನನಗೆ ಉತ್ತಮ ಗೆಳೆಯ. ನಾವಿಬ್ಬರೂ ಒಟ್ಟಿಗೇ ನಟನಾ ತರಬೇತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಅಲಾಯ ಹೇಳಿಕೊಂಡಿದ್ದರು.

ಕೊರೊನಾ ವೈರಸ್ ಎರಡನೇ ಅಲೆ ಹಬ್ಬುತ್ತಿದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಇರುವಂತೆ ಹಾಗೂ ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್​​ ಧರಿಸುವಂತೆ ಸರ್ಕಾರ ಕೇಳಿಕೊಳ್ಳುತ್ತಿವೆ. ಆದರೆ, ಅಲಾಯ ಗೋವಾಗೆ ತೆರಳಿ ಫೋಟೋ ಒಂದನ್ನು ಹಾಕಿದ್ದರು. ಇದರಲ್ಲಿ ಅವರು ಮಾಸ್ಕ್​ ಧರಿಸಿರಲಿಲ್ಲ. ಮಾಸ್ಕ್​ ಹಾಕಲೇ ಬೇಕು ಎಂದೇನಿಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್ ಹಾಕಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹಾಟ್​ ಡ್ಯಾನ್ಸ್​ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ ಬಿಗ್​ ಬಾಸ್​ ಸ್ಪರ್ಧಿ ರಶ್ಮಿ