‘ಪೃಥ್ವಿರಾಜ್’ ಟ್ರೇಲರ್​ನಲ್ಲಿ ಮಿಂಚಿದ ಅಕ್ಷಯ್​ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್​?

‘ಪೃಥ್ವಿರಾಜ್’ ಟ್ರೇಲರ್​ನಲ್ಲಿ ಮಿಂಚಿದ ಅಕ್ಷಯ್​ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್​?
ಅಕ್ಷಯ್ ಕುಮಾರ್

ಡಾ. ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿರುವ ‘ಪೃಥ್ವಿರಾಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಮಾನುಷಿ ಚಿಲ್ಲರ್​ ನಟಿಸಿದ್ದಾರೆ. ಮಾನುಷಿ ಚಿಲ್ಲರ್​ ಅವರಿಗೆ ಇದು ಮೊದಲ ಸಿನಿಮಾ.

TV9kannada Web Team

| Edited By: Rajesh Duggumane

May 09, 2022 | 5:41 PM

ಸಿನಿಮಾ ಕೆಲಸಗಳಲ್ಲಿ ನಟ ಅಕ್ಷಯ್​ ಕುಮಾರ್​ ಅವರು (Akshay Kumar) ಸದಾ ಕಾಲ ಬ್ಯುಸಿ ಆಗಿರುತ್ತಾರೆ. ಪ್ರತಿವರ್ಷ ಅವರ ನಟನೆಯ ಮೂರು ಸಿನಿಮಾಗಳು ತೆರೆಗೆ ಬರುತ್ತವೆ. ಕೊವಿಡ್ ಕಾರಣದಿಂದ ಅವರ ವೇಗಕ್ಕೆ ಕೊಂಚ ಹಿನ್ನಡೆ ಆಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಸೂರ್ಯವಂಶಿ’ ಸಿನಿಮಾ (Sooryavanshi Movie) ಗೆದ್ದು ಬೀಗಿತ್ತು. ಈಗ ಅವರ ನಟನೆಯ ‘ಪೃಥ್ವಿರಾಜ್​’ ಚಿತ್ರ (Prithviraj Trailer) ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರ ಭಾಗವಾಗಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಪೃಥ್ವಿರಾಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಸಂಜಯ್​ ದತ್​ ಮತ್ತು ಸೋನು ಸೂದ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಟ್ರೇಲರ್​​ ಮೂಲಕ ಅವರೆಲ್ಲರ ಪಾತ್ರಗಳು ಹೇಗಿವೆ ಎನ್ನುವ ಝಲಕ್ ಸಿಕ್ಕಿದೆ.

ಡಾ. ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿರುವ ‘ಪೃಥ್ವಿರಾಜ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಮಾನುಷಿ ಚಿಲ್ಲರ್​ ನಟಿಸಿದ್ದಾರೆ. ಮಾನುಷಿ ಚಿಲ್ಲರ್​ ಅವರಿಗೆ ಇದು ಮೊದಲ ಸಿನಿಮಾ. ಈ ಚಿತ್ರಕ್ಕೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಿದೆ. ಈ ಪ್ರತಿಷ್ಠಿತ ಬ್ಯಾನರ್​ನಲ್ಲಿ ಮೂಡಿಬರುತ್ತಿರುವ ಮೊದಲ ಐತಿಹಾಸಿಕ ಕಥಾಹಂದರದ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಅವರು ಸಾಮ್ರಾಟ್​ ಪೃಥ್ವಿರಾಜ್​ ಚೌಹಾಣ್​ ಪಾತ್ರವನ್ನು ನಿಭಾಯಿಸಿದ್ದಾರೆ. ಯುದ್ಧದ ದೃಶ್ಯಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಪೃಥ್ವಿರಾಜ್ ಆಗಿ ಅಕ್ಷಯ್​ ಕುಮಾರ್ ಗಮನ ಸೆಳೆಯುತ್ತಾರೆ.

ಅದ್ದೂರಿ ಸೆಟ್​ಗಳು ಟ್ರೇಲರ್​ನಲ್ಲಿ ಹೈಲೈಟ್ ಆಗಿದೆ. ಬಾಲಿವುಡ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡುತ್ತಿಲ್ಲ. ‘ಕೆಜಿಎಫ್​ 2’ ಹಾಗೂ ‘ಆರ್​ಆರ್​ಆರ್​’ ಚಿತ್ರದಿಂದ ಹಿಂದಿ ಸಿನಿಮಾ ರಂಗ ಮಂಕಾಗಿದೆ. ಈ ಚಿತ್ರದಿಂದ ಬಾಲಿವುಡ್ ಮತ್ತೆ ಚೇತರಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅದ್ದೂರಿ ಬಜೆಟ್​ನಲ್ಲಿ ‘ಪೃಥ್ವಿರಾಜ್​’ ಚಿತ್ರ ಮೂಡಿಬಂದಿದೆ. ಯುದ್ಧದ ಸನ್ನಿವೇಶಗಳಿಗಾಗಿ ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗಿದೆ. ಜೂನ್​ 3ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ‘ಪೃಥ್ವಿರಾಜ್​’ ಮಾತ್ರವಲ್ಲದೆ ‘ರಕ್ಷಾ ಬಂಧನ್​’, ‘ಗೋರ್ಕಾ’, ‘ರಾಮ್​ ಸೇತು’ ಮುಂತಾದ ಸಿನಿಮಾಗಳಲ್ಲಿ ಅಕ್ಷಯ್​ ಕುಮಾರ್ ನಟಿಸುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada