ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ

ಮೀರಾ ಚೋಪ್ರಾ ಟಾಲಿವುಡ್​ನಲ್ಲಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್​ ಕಲ್ಯಾಣ್​ ನಟನೆಯ ಬಂಗಾರಮ್ ಸೇರಿ ಕೆಲ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • TV9 Web Team
  • Published On - 16:29 PM, 29 Apr 2021
ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ
ಪ್ರಿಯಾಂಕಾ ಚೋಪ್ರಾ ಮತ್ತು ಮೀರಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಲ್ಲಿ ಮಾತ್ರವಲ್ಲ ಹಾಲಿವುಡ್​ನಲ್ಲೂ ಗುರುತಿಸಿಕೊಂಡವರು. ಖ್ಯಾತ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್​ ಆಗಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಅದು ಅವರ ಸೋದರ ಸಂಬಂಧಿಯಿಂದಲೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಮೀರಾ ಚೋಪ್ರಾ ಟಾಲಿವುಡ್​ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವನ್​ ಕಲ್ಯಾಣ್​ ನಟನೆಯ ಬಂಗಾರಮ್ ಸೇರಿ ಕೆಲ ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗಲೇ ಇಲ್ಲ. ಬಾಲಿವುಡ್ ಕೂಡ ಅವರ ಕೈ ಹಿಡಿಯಲಿಲ್ಲ. ಇದೆಲ್ಲವುದಕ್ಕೂ ಪ್ರಿಯಾಂಕಾ ಚೋಪ್ರಾ ಅವರೇ ಕಾರಣ ಎಂದು ಮೀರಾ ಚೋಪ್ರಾ ಆರೋಪಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮೀರಾ ಈ ಬಗ್ಗೆ ಮಾತನಾಡಿದ್ದಾರೆ. ನಾನು ಬಾಲಿವುಡ್​ಗೆ ಕಾಲಿಟ್ಟಾಗ ಪ್ರಿಯಾಂಕಾ ಚೋಪ್ರಾ ಸಂಬಂಧಿ ಎಂದು ನನ್ನನ್ನು ಗುರುತಿಸುತ್ತಿದ್ದರು. ನನ್ನನ್ನು ಪ್ರಿಯಾಂಕಾಗೆ ಹೋಲಿಕೆ ಮಾಡುತ್ತಿದ್ದರು. ಆದರೆ, ನನಗೆ ಸಿನಿಮಾ ಆಫರ್​ ಸಿಗದಿರಲು ಅವರೇ ಕಾರಣ. ನನ್ನ ಸಿನಿಮಾಗೆ ಹಣ ಹಾಕಲು ಯಾರೂ ಮುಂದೆ ಬರುತ್ತಿರಲಿಲ್ಲ. ಪ್ರಿಯಾಂಕಾ ಎಂದಿಗೂ ನನ್ನ ಸಹಾಯಕ್ಕೆ ಬಂದಿಲ್ಲ ಎಂದು ಮೀರಾ ಹೇಳಿಕೊಂಡಿದ್ದಾರೆ.

ನಾನು ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದಿದ್ದೇನೆ ಎನ್ನುವುದು ಮಾತ್ರ ನನ್ನ ಪಾಲಿಗೆ ಇದ್ದಿದ್ದು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅದರಿಂದ ಉಂಟಾದ ತೊಂದರೆಯೇ ಹೆಚ್ಚು. ನಾನು ಚಿತ್ರರಂಗದಲ್ಲಿ ತುಂಬಾನೇ ಕಷ್ಟಪಟ್ಟಿದ್ದೇನೆ ಎಂದು ಮೀರಾ ಹೇಳಿಕೊಂಡಿದ್ದಾರೆ.

ಮೀರಾ ಚೋಪ್ರಾ ಬಾಲಿವುಡ್​ನಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿರಬೇಕಾದರೆ ಪ್ರಿಯಾಂಕಾ ಹಾಲಿವುಡ್​ಗೆ ಹಾರಿದ್ದರು. ಈ ವಿಚಾರದಲ್ಲೂ ಮೀರಾ ಅವರಿಗೆ ಬೇಸರ ಇದೆ. ಪರಿಣೀತಿ ಚೋಪ್ರಾ ಕೂಡ ಪ್ರಿಯಾಂಕಾ ಚೋಪ್ರಾ ಕುಟುಂಬದಿಂದಲೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ:  Priyanka Chopra: ಅಮೆರಿಕದಲ್ಲಿ ತಾವು ಸೇಫ್​ ಆಗಿದ್ರೂ ಭಾರತಕ್ಕಾಗಿ ಕಷ್ಟಪಡುತ್ತಿರುವ ಪ್ರಿಯಾಂಕಾ ಚೋಪ್ರಾ