ಯೂ ಆರ್​ ಎ ಹೀರೋ; ಸಾರಾ ಅಲಿ ಖಾನ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನು ಸೂದ್​

ಸಹಾಯ ಕೇಳಿ ಸಾಕಷ್ಟು ಜನರು ಸಾರಾ ಅಲಿ ಖಾನ್​ಗೆ ಮೆಸೇಜ್​ ಮಾಡಿದ್ದಾರೆ. ಈ ಸಂದೇಶಗಳನ್ನು ಸಾರಾ ಅಲಿ ಖಾನ್​ ಇನ್​​ಸ್ಟಾಗ್ರಾಂ ಸ್ಟೇಟಸ್​ಗೆ ಹಾಕಿ ಪ್ರತಿಯೊಂದನ್ನು ಸೋನು ಸೂದ್​ಗೆ ಟ್ಯಾಗ್​ ಮಾಡುತ್ತಿದ್ದರು.

ಯೂ ಆರ್​ ಎ ಹೀರೋ; ಸಾರಾ ಅಲಿ ಖಾನ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೋನು ಸೂದ್​
ಸಾರಾ ಅಲಿ ಖಾನ್​-ಸೋನು ಸೂದ್​

ಕೊರೊನಾ ವೈರಸ್​ ಎರಡನೇ ಅಲೆ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಈ ವೇಳೆ ನಟ ಸೋನು ಸೂದ್​ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಜನರ ಸಂಕಷ್ಟಕ್ಕೆ ಕಿವಿಯಾಗುತ್ತಿದ್ದಾರೆ. ಸೋನು ಸೂದ್​ ಜತೆ ಟೊಂಕ ಕಟ್ಟಿ ನಿಂತ ಅದೆಷ್ಟೋ ಸೆಲೆಬ್ರಿಟಿಗಳಿದ್ದಾರೆ. ಅದರಲ್ಲಿ ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ಕೂಡ ಒಬ್ಬರು. ಕೊವಿಡ್​ ಸಂದರ್ಭದಲ್ಲಿ ಸಾರಾ ಅಲಿ ಖಾನ್​ ಮಾಡಿದ ಸಹಾಯಕ್ಕೆ ಈಗ ಸೋನು ಸೂದ್​ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಹಾಯ ಕೇಳಿ ಸಾಕಷ್ಟು ಜನರು ಸಾರಾ ಅಲಿ ಖಾನ್​ಗೆ ಮೆಸೇಜ್​ ಮಾಡಿದ್ದಾರೆ. ಈ ಸಂದೇಶಗಳನ್ನು ಸಾರಾ ಅಲಿ ಖಾನ್​ ಇನ್​​ಸ್ಟಾಗ್ರಾಂ ಸ್ಟೇಟಸ್​ಗೆ ಹಾಕಿ ಪ್ರತಿಯೊಂದನ್ನು ಸೋನು ಸೂದ್​ಗೆ ಟ್ಯಾಗ್​ ಮಾಡುತ್ತಿದ್ದರು. ಈ ಮೂಲಕ ಕಷ್ಟದಲ್ಲಿರುವ ಸಾಮಾನ್ಯರಿಗೆ ಸಹಾಯ ಮಾಡಲು ಅವರು ಸಹಾಯ ಮಾಡಿದ್ದರು. ಇದರ ಜತೆಗೆ ಸೋನು ಸೂದ್​ ಫೌಂಡೇಷನ್​ಗೆ ಹಣ ನೀಡಿದ್ದಾರೆ. ಇದು ಸೋನು ಸೂದ್​ಗೆ ಖುಷಿ ನೀಡಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸೋನು, ಸಾರಾ ಅವರನ್ನು ಹೀರೋ ಎಂದಿದ್ದಾರೆ.

ಸೋನು ಸೂದ್​ ಫೌಂಡೇಷನ್​ಗೆ ನೀವು ನೀಡಿದ ಕೊಡುಗೆಗಾಗಿ ತುಂಬಾ ಧನ್ಯವಾದಗಳು. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಒಳ್ಳೆಯ ಕೆಲಸವನ್ನು ಹೀಗೆಯೇ ಮಾಡುತ್ತಿರಿ. ಈ ಕಷ್ಟದ ಸಮಯದಲ್ಲಿ ರಾಷ್ಟ್ರದ ಯುವಕರು ಮುಂದೆ ಬಂದು ಸಹಾಯ ಮಾಡಲು ನೀವು ಸ್ಫೂರ್ತಿ ನೀಡಿದ್ದೀರಿ. ಯೂ ಆರ್ ಎ ಹೀರೋ’ಎಂದು ಬರೆದುಕೊಂಡಿದ್ದಾರೆ.

ಕೊರೊನಾ ಸೋಂಕು ಇಡೀ ಭಾರತವನ್ನು ಇನ್ನಿಲ್ಲದಂತೆ ಪೀಡಿಸುತ್ತಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಹೆಚ್ಚಾಗಿದೆ. ಇತ್ತೀಚೆಗೆ ಕ್ರಿಕೆಟಿಗ ಸುರೇಶ್ ರೈನಾ ಕೂಡ ಆಕ್ಸಿಜನ್​ಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟಿದ್ದರು. 65 ವರ್ಷದ ಚಿಕ್ಕಮ್ಮ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರಿಗೆ ಆಕ್ಸಿಜನ್ ಸಿಲಿಂಡರ್‌ನ ಅವಶ್ಯಕತೆಯಿದೆ. ಅವರನ್ನು ಪ್ರಸ್ತುತ ಮೀರಠ್​​ನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಸುರೇಶ್ ರೈನಾ ಟ್ವೀಟ್ ಮಾಡಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜನರ ಸಹಾಯ ಕೇಳಿದ್ದರು. ಇದಕ್ಕೆ ಸೋನು ಸೂದ್​ ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಅವರು ರೈನಾ ಚಿಕ್ಕಮ್ಮಗೆ ಸಹಾಯ ಕೂಡ ಮಾಡಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ಅಂದು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಯ್ತೇ?