ಹೃತಿಕ್ ರೋಷನ್ ಜೊತೆ ರೊಮ್ಯಾಂಟಿಕ್ ಇಷ್ಟ- ಮನದಾಳ ಬಿಚ್ಚಿಟ್ಟ ಸೋನಾಕ್ಷಿ ಸಿನ್ಹಾ

  • TV9 Web Team
  • Published On - 9:42 AM, 13 Dec 2019
ಹೃತಿಕ್ ರೋಷನ್ ಜೊತೆ ರೊಮ್ಯಾಂಟಿಕ್ ಇಷ್ಟ- ಮನದಾಳ ಬಿಚ್ಚಿಟ್ಟ ಸೋನಾಕ್ಷಿ ಸಿನ್ಹಾ

ಗಿಣಿಮೂಗಿನ ಬೆಡಗಿ ಸೋನಾಕ್ಷಿ ಸಿನ್ಹಾ, ದಬಾಂಗ್ ಮೂಲಕ ಎಂಟ್ರಿ ಕೊಟ್ರೂ, ರೌಡಿ ರಾಥೋರ್ ಮೂಲಕ ತನ್ನ ಖದರ್ ತೋರಿಸಿದ್ರು. ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚು ಮಿಂಚುತ್ತಿರೋ ಸೋನಾಕ್ಷಿ, ದಬಾಂಗ್ 3 ರಿಲೀಸ್​ಗೆ ರೆಡಿಯಾಗಿದೆ. ಆದ್ರೆ, ಇದೇ ವೇಳೆ ಅವ್ರು ಮತ್ತೊಂದು ವಿಚಾರಕ್ಕೆ ಬಿಟೌನ್​ನಲ್ಲಿ ಸುದ್ದಿಯಾಗಿದ್ದಾರೆ.

ಸೋನಾಕ್ಷಿ ಸಿನ್ಹಾ.. ಬಾಲಿವುಡ್​ನಲ್ಲಿ ಬಬ್ಲಿ ಹೀರೋಯಿನ್.. ಬಿಟೌನ್​ನಲ್ಲಿ 10 ವರ್ಷಗಳನ್ನ ಪೂರ್ಣಳಿಸೋ ಅಂಚಿನಲ್ಲಿದ್ದಾರೆ. ಆದ್ರೆ, ಅದ್ಯಾಕೋ ಇತ್ತೀಚೆಗೆ ಸೋನಾಕ್ಷಿಗೆ ಸಿನಿಮಾ ಆಫರ್​ಗಳು ಕಡಿಮೆ ಆಗಿವೆಯಂತೆ. ಬಿಟೌನ್​ ನಿರ್ದೇಶಕರು ಸೋನಾಕ್ಷಿಯನ್ನ ಹುಡುಕಿ ಬರ್ತಿರೋದು ಕಡಿಮೆಯಾಗಿದೆ. ಆದ್ರೀಗ, ಸೋನಾಕ್ಷಿ ನೀಡಿರೋ ಹೇಳಿಕೆಯೊಂದು ಬಾಲಿವುಡ್​ನಲ್ಲಿ ಹಲ್​ಚಲ್ ಎಬ್ಬಿಸಿದೆ.

ಬಾಲಿವುಡ್ ಬ್ಯಾಡ್ ಬಾಯ್​ ಸಲ್ಮಾನ್​ರ ದಬಾಂಗ್ ಚಿತ್ರದ ಮೂಲಕ ಬಾಲಿವುಡ್​ನಲ್ಲಿ ನೆಲೆ ಕಂಡು ಕೊಂಡ ಸೋನಾಕ್ಷಿ ಸಿನ್ಹಾ, ಅದ್ಯಾಕೋ ಅಷ್ಟಾಗಿ ಮಿಂಚಲೇ ಇಲ್ಲ. ಇನ್ನೇನು ದಬಾಂಗ್ 3 ಕೂಡ ರಿಲೀಸ್ ಆಗ್ತಿದೆ. ಸದ್ಯ ಟ್ರೇಲರ್ ಮತ್ತು ಸಾಂಗ್​ನಲ್ಲೇ ಚಿತ್ರ ಸದ್ದು ಮಾಡ್ತಿದೆ. ಆದ್ರೀಗ, ಅಷ್ಟರಲ್ಲೇ ಸೋನಾಕ್ಷಿ ಕೊಟ್ಟಿರೋ ಸ್ಟೇಟ್​ಮೆಂಟ್​ ಕೊಟ್ಟಿರೋದು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಹೌದು, ನಾನು ರೊಮ್ಯಾಂಟಿಕ್ ಸಿನಿಮಾ ಮಾಡಬೇಕು ಅಂದ್ರೆ, ಆ ಚಿತ್ರದಲ್ಲಿ ಹೃತಿಕ್ ರೋಷನ್ ಇರಲೇಬೇಕು ಅಂತಾ ಹೇಳಿದ್ದಾರೆ. ಆದ್ರೀಗ, ಇದೇ ಹೇಳಿಕೆ ಸೋನಾಕ್ಷಿಗೇ ಉಲ್ಟಾ ಹೊಡೆದಿದೆ. ಸಿನಿಮಾಗಳ ಅವಕಾಶ ಸಿಗಬೇಕು ಅನ್ನೋ ಕಾರಣಕ್ಕೇನೆ ಸೋನಾಕ್ಷಿ ಈಗೆಲ್ಲಾ ಹೇಳ್ತಿದ್ದಾರೆ ಅನ್ನೋ ಚರ್ಚೆ ಹುಟ್ಟಿಕೊಂಡಿದೆ.

ಇನ್ನೂ ಈ ಹಿಂದೆ ನಟಿ ತಮನ್ನಾ ಕೂಡ ಹೃತಿಕ್​ಗಾಗಿ ತಮ್ಮ ಲಿಪ್​ಲಾಕ್​ ರೂಲ್ಸ್ ಬ್ರೇಕ್​ ಮಾಡ್ತಿನಿ ಅಂತಾ ಹೇಳಿಕೊಂಡಿದ್ರು. ಆದ್ರೆ, ಅವಕಾಶ ಇರ್ಲಿ, ತಮನ್ನಾ ಹೇಳಿಕೆಗೆ ಹೃತಿಕ್​ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಈಗ ಸೋನಾಕ್ಷಿ ಸರದಿ. ಈ ಹೇಳಿಕೆಯ ನಂತ್ರ ಸೋನಾಕ್ಷಿಗೆ ಹೃತಿಕ್​ ಸಿನಿಮಾದಲ್ಲಿ ಅಭಿನಯಿಸೋ ಅವಕಾಶ ಸಿಗುತ್ತಾ ನೋಡಬೇಕಿದೆ.