ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ

Sunny Leone: 2011ರಲ್ಲಿ ಡೇನಿಯಲ್​ ವೆಬರ್​ ಮತ್ತು ಸನ್ನಿ ಲಿಯೋನ್​ ಬಾಳ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಈ ಜೋಡಿಯ ಮಧ್ಯೆ ಯಾವುದೇ ಕಿರಿಕ್​ ಆಗಿಲ್ಲ.

  • TV9 Web Team
  • Published On - 17:27 PM, 1 May 2021
ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ
ಡೇನಿಯಲ್ ವೆಬರ್ ಮತ್ತು ಸನ್ನಿ ಲಿಯೋನ್

ಮಾದಕ ನಟಿ ಸನ್ನಿ ಲಿಯೋನ್​ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಪಡ್ಡೆಗಳ ನಿದ್ದೆ ಕದಿಯುವ ಈ ಮಾಜಿ ನೀಲಿ ತಾರೆ ಈಗ ಹಿಂದಿ ಸಿನಿಮಾದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಯಾಗಿ ದಾಂಪತ್ಯ ಜೀವನ ನಡೆಸುತ್ತಿರುವ ಸನ್ನಿ ಲಿಯೋನ್​ ಹಾಗೂ ಅವರ ಪತಿ ಡೇನಿಯಲ್​ ವೆಬರ್​ಗೆ ಈಗ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ.

2011ರಲ್ಲಿ ಡೇನಿಯಲ್​ ವೆಬರ್​ ಮತ್ತು ಸನ್ನಿ ಲಿಯೋನ್​ ಬಾಳ ಬಂಧನಕ್ಕೆ ಒಳಗಾದರು. ಅಂದಿನಿಂದ ಇಂದಿನವರೆಗೆ ಈ ಜೋಡಿ ಮಧ್ಯೆ ಯಾವುದೇ ಕಿರಿಕ್​ ಆಗಿಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಚೆನ್ನಾಗಿ ಸಂಸಾರ ನಡೆಸುತ್ತಿದ್ದಾರೆ. ಎಂತೆಂಥ ಸೆಲೆಬ್ರಿಟಿಗಳ ದಾಂಪತ್ಯದಲ್ಲಿ ಬಿರುಕು ಮೂಡಿದರೂ ಸನ್ನಿ ಲಿಯೋನ್​-ಡೇನಿಯಲ್​ ವೆಬರ್​ ಮಾತ್ರ ಅದಕ್ಕೆ ಆಸ್ಪದ ನೀಡಿಲ್ಲ. ಹಾಗಾದರೆ ಅವರ ಸುಖಿ ದಾಂಪತ್ಯದ ಗುಟ್ಟೇನು? ಈ ಬಗ್ಗೆ ಸ್ವತಃ ಸನ್ನಿ ಲಿಯೋನ್​ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಸನ್ನಿ ಲಿಯೋನ್​ ಮತ್ತು ಡೇನಿಯಲ್​ ವೆಬರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ದಾಂಪತ್ಯದ 5 ಸೀಕ್ರೆಟ್​ಗಳನ್ನು ಬಹಿರಂಗ ಪಡಿಸಿದ್ದಾರೆ. ಪತಿ-ಪತ್ನಿಯ ಬಂಧ ಸದಾ ಗಟ್ಟಿಯಾಗಿರಬೇಕು ಎಂದರೆ ಏನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, 1) ಸದಾ ಮಾತನಾಡುತ್ತ ಇರಬೇಕು. 2) ನೈಟ್​ ಡೇಟಿಂಗ್​ ಪ್ಲ್ಯಾನ್​ ಮಾಡಬೇಕು. 3) ಒಟ್ಟಿಗೆ ಅಡುಗೆ ಮಾಡಬೇಕು. 4) ಒಬ್ಬರನ್ನೊಬ್ಬರು ನಗಿಸಬೇಕು. 5) ಪರಸ್ಪರರಿಗೆ ಮೆಚ್ಚುಗೆ ಸೂಚಿಸಬೇಕು.

 

View this post on Instagram

 

A post shared by Sunny Leone (@sunnyleone)

2011ರ ಏ.9ರಂದು ಡೇನಿಯಲ್​ ವೇಬರ್​ ಮತ್ತು ಸನ್ನಿ ಲಿಯೋನ್​ ಮದುವೆಯಾದರು. 2017ರಲ್ಲಿ ನಿಶಾ ಎಂಬ ಹೆಣ್ಣುಮಗುವನ್ನು ಈ ಜೋಡಿ ದತ್ತು ಪಡೆದುಕೊಂಡಿತು. ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡುಮಕ್ಕಳನ್ನು ಪಡೆದುಕೊಂಡರು. ಬಾಲಿವುಡ್​ನ ಅನೇಕ ಐಟಂ ಸಾಂಗ್​ಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್​ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಹಾಡಿಗೆ ಮತ್ತೆ ಸೊಂಟ ಬಳುಕಿಸೋಕೆ ಬಂದ ಸನ್ನಿ ಲಿಯೋನ್​..

Sunny Leone : ಮೂರನೆ ಚಿತ್ರದ ಶೂಟಿಂಗ್​ಗೆ ನಟಿ ಸನ್ನಿ ಲಿಯೋನ್ ಕೇರಳದಲ್ಲಿ…!