AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಸ್ಟರ್ ಬಚ್ಚನ್​’ಗೆ ಕೊನೆ ಸಮಯದಲ್ಲಿ ಶಾಕ್, ಬಚ್ಚನ್ ಫೋಟೊ ತೆಗೆಯಲು ಸೂಚನೆ

ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಸಿನಿಮಾದ ವಿರುದ್ಧ ಸೆನ್ಸಾರ್ ಕ್ರಮ ಕೈಗೊಂಡಿದೆ. ಸಿನಿಮಾದಲ್ಲಿದ್ದ ಅಮಿತಾಬ್ ಬಚ್ಚನ್​ರ ಒಂದು ಚಿತ್ರವನ್ನು ಕಡ್ಡಾಯವಾಗಿ ತೆಗೆಯುವಂತೆ ಸೂಚಿಸಿದೆ. ಅಂದಹಾಗೆ ಯಾವುದು ಆ ಚಿತ್ರ? ತೆಗೆಯಲು ಸೂಚಿಸಿದ್ದು ಏಕೆ?

‘ಮಿಸ್ಟರ್ ಬಚ್ಚನ್​’ಗೆ ಕೊನೆ ಸಮಯದಲ್ಲಿ ಶಾಕ್, ಬಚ್ಚನ್ ಫೋಟೊ ತೆಗೆಯಲು ಸೂಚನೆ
ಮಂಜುನಾಥ ಸಿ.
|

Updated on: Aug 15, 2024 | 8:35 AM

Share

ರವಿತೇಜ ನಟಿಸಿರುವ ‘ಮಿಸ್ಟರ್ ಬಚ್ಚನ್’ ಹೆಸರಿನ ಸಿನಿಮಾ ಇಂದು (ಆಗಸ್ಟ್ 15) ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆ ಆಗುವ 24 ಗಂಟೆಗಳ ಮುಂಚೆ ಸೆನ್ಸಾರ್​ನವರು ಸಿನಿಮಾಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ‘ಮಿಸ್ಟರ್ ಬಚ್ಚನ್’ ಸಿನಿಮಾದಲ್ಲಿ ನಾಯಕ ನಟ ಅಮಿತಾಬ್ ಬಚ್ಚನ್​ರ ದೊಡ್ಡಅಭಿಮಾನಿ. ಇದೇ ವಿಷಯವನ್ನಿಟ್ಟುಕೊಂಡು ಸಿನಿಮಾದ ನಾಯಕನ ಪರಿಚಯ ಮಾಡಿಸಿದ್ದಾರೆ ನಿರ್ದೇಶಕ. ಆದರೆ ಸೆನ್ಸಾರ್​ನವರು ಶಾಕ್ ನೀಡಿದ್ದು ಬಚ್ಚನ್​ರ ಕೆಲವು ಚಿತ್ರಗಳನ್ನು ತೆಗೆಸಿ ಹಾಕಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಹಲವು ದೃಶ್ಯಗಳಿಗೆ ಕಟ್​ ಸೂಚಿಸಿದ್ದಾರೆ.

ರವಿತೇಜ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್​ರಿಗೆ ಸಂಬಂಧಿಸಿದ ಹಲವು ದೃಶ್ಯಗಳು, ಸಂಭಾಷಣೆಗಳು, ಹಾಡಿನ ಬಿಟ್​ಗಳೂ ಇವೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾರ ಚಿತ್ರವನ್ನು ಚಿತ್ರತಂಡ ಬಳಸಿತ್ತಂತೆ. ಆದರೆ ಈ ಪೋಸ್ಟರ್ ಬಳಕೆಗೆ ತಕರಾರು ವ್ಯಕ್ತಪಡಿಸಿರುವ ಸೆನ್ಸಾರ್ ಮಂಡಳಿ, ಬಚ್ಚನ್ ರೇಖಾ ಅವರ ಚಿತ್ರದ ಬದಲಿಗೆ ಬಚ್ಚನ್ ಹಾಗೂ ಜಯಾ ಬಚ್ಚನ್ ಅವರ ಫೋಟೊ ಬಳಸುವಂತೆ ಸೂಚಿಸಿದೆ. ಬಚ್ಚನ್ ಹಾಗೂ ರೇಖಾ ನಡುವೆ ಕೆಲವು ವಿವಾದಗಳಿವೆ. ಈ ಇಬ್ಬರೂ ಹಿಂದೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ತಮಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗಿನ ಫೋಟೊವನ್ನು ಬಳಸುವುದು ಅಮಿತಾಬ್ ಬಚ್ಚನ್​ಗೆ ಮಾಡುವ ಅಪಮಾನ ಎಂದು ಸೆನ್ಸಾರ್​ ಅಧಿಕಾರಿಗಳು ಪರಿಗಣಿಸಿದ್ದಾರೆ. ಇದೀಗ ಚಿತ್ರತಂಡವು ಅಮಿತಾಬ್-ರೇಖಾರ ಚಿತ್ರವನ್ನು ಅಮಿತಾಬ್ ಜಯಾ ಬಚ್ಚನ್ ಚಿತ್ರದೊಂದಿಗೆ ಬದಲಾವಣೆ ಮಾಡಿದ್ದಾರೆ.

ಇದನ್ನೂ ಓದಿ:ಪತಿ ಅಮಿತಾಬ್ ಬಚ್ಚನ್​ ಬಗ್ಗೆ ಜಯಾ ಬಚ್ಚನ್​ಗೆ ಇದೆ ಒಂದು ದೂರು

ಇದೊಂದು ಅಲ್ಲದೆ ಇನ್ನೂ ಹಲವು ದೃಶ್ಯಗಳಿಗೆ ಸೆನ್ಸಾರ್ ಕಟ್, ಮ್ಯೂಟ್ ಸೂಚಿಸಿದೆ. ‘ಮಿಸ್ಟರ್ ಬಚ್ಚನ್’ ಆಕ್ಷನ್ ದೃಶ್ಯವಾಗಿದ್ದು, ಸಿನಿಮಾದಲ್ಲಿ ಸಾಕಷ್ಟು ಹಿಂಸೆ ಇದೆ. ಹಲವು ಹಿಂಸಾತ್ಮಕ ದೃಶ್ಯಗಳಿಗೆ ಬ್ಲರ್ ಸೂಚಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಬಾಲಕನೊಬ್ಬ ಬೀಡಿ ಸೇದುವ ಸುಮಾರು ಒಂದು ನಿಮಿಷದ ದೃಶ್ಯವಿದೆಯಂತೆ ಆ ದೃಶ್ಯಕ್ಕೂ ಸಹ ಸೆನ್ಸಾರ್​ನವರು ಕಟ್ ಸೂಚಿಸಿದ್ದಾರೆ. ಆದರೆ ಚಿತ್ರತಂಡ ಬೀಡಿಯ ಬದಲಿಗೆ ಪೆನ್ಸಿಲ್ ಅನ್ನು ಬಳಸಿ ಸೆನ್ಸಾರ್​ನಿಂದ ಅನುಮತಿ ಪಡೆದಿದೆ ಎನ್ನಲಾಗುತ್ತಿದೆ. ಕೆಲವು ಅಶ್ಲೀಲ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಸೂಚಿಸಲಾಗಿದೆ. ಇದೆಲ್ಲದರ ಬಳಿಕ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.

‘ಮಿಸ್ಟರ್ ಬಚ್ಚನ್’ ಸಿನಿಮಾದಲ್ಲಿ ರವಿತೇಜ ಅಮಿತಾಬ್ ಬಚ್ಚನ್ ಅಭಿಮಾನಿ. ಈ ಹಿಂದೆಯೂ ಸಹ ರವಿತೇಜ, ಅಮಿತಾಬ್ ಬಚ್ಚನ್ ಅಭಿಮಾನಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗ ನಟಿಸುತ್ತಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದಲ್ಲಿ ರವಿತೇಜ ತೆರಿಗೆ ಅಧಿಕಾರಿ. ದುಷ್ಟರ ಮೇಲೆ ದಾಳಿ ಮಾಡಿ ಅಕ್ರಮ ಹಣವನ್ನು ಹೊರಗೆಳೆಯುವುದು ಅವನ ಕೆಲಸ. ಪಕ್ಕಾ ಆಕ್ಷನ್ ಸಿನಿಮಾ ಇದಾಗಿದ್ದು, ಆಗಸ್ಟ್ 15ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ