‘ಜಗಳ ಇದ್ದಲ್ಲಿ ನಾನು ಇರಬೇಕು’; ಇಬ್ಬರ ಮಧ್ಯೆ ತಂದಿಟ್ಟು ಮಜಾ ತೆಗೆದುಕೊಂಡ ಚೈತ್ರಾ

ಚೈತ್ರಾ ಕುಂದಾಪುರ ಅವರು ಹೊರಗೆ ಸಾಕಷ್ಟು ಕಾರಣಕ್ಕೆ ಚರ್ಚೆಗೆ ಒಳಗಾದವರು. ಅವರು ಹೊರಗೆ ಸಾಕಷ್ಟು ಟೀಕೆ ಎದುರಿಸಬೇಕಾದ ಪರಿಸ್ಥಿತಿ ಇತ್ತು. ಆದರೆ, ದೊಡ್ಮನೆಯಲ್ಲಿ ಅವರ ಆಟ ಸಂಪೂರ್ಣ ಬದಲಾಗಿತ್ತು. ಅವರು ಏರು ಧ್ವನಿಯಲ್ಲಿ ಮಾತನಾಡುತ್ತಾ ಗಮನ ಸೆಳೆದರು. ಈಗ ಅವರು ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜ ತೆಗೆದುಕೊಂಡಿದ್ದಾರೆ.

‘ಜಗಳ ಇದ್ದಲ್ಲಿ ನಾನು ಇರಬೇಕು’; ಇಬ್ಬರ ಮಧ್ಯೆ ತಂದಿಟ್ಟು ಮಜಾ ತೆಗೆದುಕೊಂಡ ಚೈತ್ರಾ
ಚೈತ್ರಾ-ಧನರಾಜ್
Follow us
ರಾಜೇಶ್ ದುಗ್ಗುಮನೆ
|

Updated on: Dec 11, 2024 | 9:00 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ. ಅವರು ಜೋರು ಧ್ವನಿಯಲ್ಲಿ ಮಾತನಾಡುತ್ತಾ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ರಜತ್ ಜೊತೆಗಿನ ಜಗಳದ ಕಾರಣಕ್ಕೂ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರು ಒಂದು ಕಾರಣಕ್ಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದಾರೆ. ಅವರು ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜಾ ತೆಗೆದುಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರು ಹೊರಗೆ ಸಾಕಷ್ಟು ಕಾರಣಕ್ಕೆ ಚರ್ಚೆಗೆ ಒಳಗಾದವರು. ಅವರು ಹೊರಗೆ ಸಾಕಷ್ಟು ಟೀಕೆ ಎದುರಿಸಬೇಕಾದ ಪರಿಸ್ಥಿತಿ ಇತ್ತು. ಆದರೆ, ದೊಡ್ಮನೆಯಲ್ಲಿ ಅವರ ಆಟ ಸಂಪೂರ್ಣ ಬದಲಾಗಿತ್ತು. ಅವರು ಏರು ಧ್ವನಿಯಲ್ಲಿ ಮಾತನಾಡುತ್ತಾ ಗಮನ ಸೆಳೆದರು. ಈಗ ಅವರು ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜ ತೆಗೆದುಕೊಂಡಿದ್ದಾರೆ.

ಧನರಾಜ್ ಹಾಗೂ ರಜತ್ ಮಧ್ಯೆ ನಾಮಿನೇಷನ್ ವಿಚಾರದಲ್ಲಿ ಜಗಳ ಆಗಿತ್ತು. ಅದು ಅಲ್ಲಿಗೆ ತಣ್ಣಗಾಗಿತ್ತು. ಆದರೆ, ಚೈತ್ರಾ ಇದನ್ನು ನೋಡಿ ಸುಮ್ಮನೆ ಉಳಿದಿಲ್ಲ. ಅವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅವರು ಧನರಾಜ್​ನ ಎತ್ತಿ ಕಟ್ಟಿದ್ದಾರೆ. ‘ನೀನು ಸುಮ್ಮನೆ ಇರಬಾರದು ಧನರಾಜ್​ ಅಣ್ಣ. ಅವರು ಏನೇ ಹೇಳಿದರೂ ತಿರುಗೇಟು ಕೊಡಬೇಕು’ ಎಂದು ಧನರಾಜ್​ಗೆ ಪಾಠ ಮಾಡಿದ್ದರು.

ಇದನ್ನು ಧನರಾಜ್ ಅವರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಅವರು ರಜತ್ ವಿರುದ್ಧ ಸಿಡಿದೆದ್ದಿದ್ದಾರೆ. ರಜತ್ ಜೊತೆ ಮಾತಿನ ಸಮರಕ್ಕೆ ಇಳಿದಿದ್ದಾರೆ. ‘ನಾಮಿನೇಷನ್​ಗೆ ನೀನು ಕೊಟ್ಟ ಕಾರಣ ಸರಿ ಇಲ್ಲ’ ಎಂದು ಹೇಳಿದರು ರಜತ್. ಈ ವಿಚಾರಕ್ಕೆ ರಜತ್ ಹಾಗೂ ಧನರಾಜ್ ಮಧ್ಯೆ ಕಿರಿಕ್ ಆಗಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಧನರಾಜ್ ಅವರು ರಜತ್ ಕೆನ್ನೆ ಮುಟ್ಟಿ ಮಾತನಾಡಿದರು. ಇದರಿಂದ ಜಗಳ ಜೋರಾಯಿತು.

ಇದನ್ನೂ ಓದಿ: ‘ಹೆರಿಗೆ ನೋವು ಹೇಗಿರಬಹುದು ಅಂತ ಆ ಒಂದು ಘಟನೆಯಿಂದ ಗೊತ್ತಾಯ್ತು’; ಚೈತ್ರಾ ಕುಂದಾಪುರ

ಇದೆಲ್ಲ ನಡೆಯುವಾಗ ಚೈತ್ರಾ ಅವರು ದೊಡ್ಮನೆ ಒಳಗೆ ಅಡುಗೆ ಮಾಡುತ್ತಾ ಇದ್ದರು. ಅವರು ಹೊರಗೆ ಕೂಗಾಟ ಕೇಳುತ್ತಿದ್ದಂತೆ, ‘ಜಗಳ ಇದ್ದಲ್ಲಿ ಚೈತ್ರಾ ಇರಬೇಕು’ ಎಂದು ಕೂಗುತ್ತಾ ಬಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಬಿಜೆಪಿ ಶಾಸಕ ಪ್ರಭು ಚವ್ಹಾಣ್​ಗೆ ಮಹಾರಾಷ್ಟ್ರ ಶಿವಸೇನೆ ಪುಂಡರಿಂದ ಕಿರಿಕ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಯತ್ನಾಳ್ ಹೆಸರೇಳದೆ ನಾಯಿ-ಕುರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಕಾಶಪ್ಪನವರ್
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ಅವಿವಾಹಿತ ಜಯಣ್ಣ ನಾಳೆ ಗೃಹಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು!
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ರಾಜ್ ಕುಮಾರ್, ಅಂಬರೀಶ್ ಅಂತ್ಯಕ್ರಿಯೆಗೂ ಶ್ರೀಗಂಧದ ಕಟ್ಟಿಗೆ ಬಳಸಲಾಗಿತ್ತು
ಸಂಬಂಧ ಬೆಳೆಸುವಾಗಲೂ ಕೃಷ್ಣ ನಮ್ಮನ್ನು ಮನೆಗೆ ಕರೆಸಿ ಮಾತಾಡಿದ್ದರು: ಸುರೇಶ್
ಸಂಬಂಧ ಬೆಳೆಸುವಾಗಲೂ ಕೃಷ್ಣ ನಮ್ಮನ್ನು ಮನೆಗೆ ಕರೆಸಿ ಮಾತಾಡಿದ್ದರು: ಸುರೇಶ್
ನಿನ್ನೆ ಶಿವಕುಮಾರ್ ಹೇಳಿದಂತೆ ಕೃಷ್ಣ ಜೊತೆ ಅವರದ್ದು ತಂದೆ ಮಗನ ಸಂಬಂಧ
ನಿನ್ನೆ ಶಿವಕುಮಾರ್ ಹೇಳಿದಂತೆ ಕೃಷ್ಣ ಜೊತೆ ಅವರದ್ದು ತಂದೆ ಮಗನ ಸಂಬಂಧ
KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​
KSRTC ಬಸ್​ ಚಾಲನೆ ವೇಳೆ ಮೊಬೈಲ್​ ಬಳಕೆ: ಚಾಲಕ ಅರೆಸ್ಟ್​