85 ಲಕ್ಷ ರೂಪಾಯಿ ಪಡೆದು ಮಹಾ ವಂಚನೆ ಮಾಡಿದ ಖ್ಯಾತ ನಿರ್ಮಾಪಕ?; ಪ್ರೊಡ್ಯೂಸರ್ ವಿರುದ್ಧ ಕೇಸ್​

ವಿ.ಎಲ್.​ ಶ್ರವಣ್​ ಕುಮಾರ್ ಹೆಸರಿನ ಫೈನಾನ್ಸರ್ ದೂರು ದಾಖಲು ಮಾಡಿದ ವ್ಯಕ್ತಿ. ಬಂಜಾರಾ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಸುರೇಶ್ ವಿರುದ್ಧ ಇವರು ಕೇಸ್​ ದಾಖಲು ಮಾಡಿದ್ದಾರೆ. ‘ಸುರೇಶ್​ ಹಾಗೂ ಮಗ ಸಾಯಿ ಶ್ರೀನಿವಾಸ್​ 2018ರಲ್ಲಿ 85 ಲಕ್ಷ ರೂಪಾಯಿ ಹಣ ಪಡೆದಿದ್ದರು.

85 ಲಕ್ಷ ರೂಪಾಯಿ ಪಡೆದು ಮಹಾ ವಂಚನೆ ಮಾಡಿದ ಖ್ಯಾತ ನಿರ್ಮಾಪಕ?; ಪ್ರೊಡ್ಯೂಸರ್ ವಿರುದ್ಧ ಕೇಸ್​
ಶ್ರೀನಿವಾಸ್​- ಸುರೇಶ್
TV9kannada Web Team

| Edited By: Rajesh Duggumane

Mar 12, 2022 | 12:38 PM

ತೆಲುಗಿನ ಹಿರಿಯ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ (Bellamakonda Srinivas)​ ಅವರು ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರ ಮಗ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ (Sai Srinivas)​ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಛತ್ರಪಥಿ’ ಸಿನಿಮಾದ (Chatrapathi Movie) ಹಿಂದಿ ರಿಮೇಕ್​ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈಗ ಬೆಲ್ಲಂಕೊಂಡ ಸುರೇಶ್​ ವಿರುದ್ಧ ಕೇಸ್​ ದಾಖಲಾಗಿದೆ. 85 ಲಕ್ಷ ರೂಪಾಯಿ ಪಡೆದು ಅವರು ವಂಚನೆ ಮಾಡಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ದಾಖಲು ಮಾಡಿದ್ದಾರೆ.

ವಿ.ಎಲ್.​ ಶ್ರವಣ್​ ಕುಮಾರ್ ಹೆಸರಿನ ಫೈನಾನ್ಸರ್ ದೂರು ದಾಖಲು ಮಾಡಿದ ವ್ಯಕ್ತಿ. ಬಂಜಾರಾ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ಸುರೇಶ್ ವಿರುದ್ಧ ಇವರು ಕೇಸ್​ ದಾಖಲು ಮಾಡಿದ್ದಾರೆ. ‘ಸುರೇಶ್​ ಹಾಗೂ ಮಗ ಸಾಯಿ ಶ್ರೀನಿವಾಸ್​ 2018ರಲ್ಲಿ 85 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ, ಅದನ್ನು ಹಿಂದಿರುಗಿಸಿಲ್ಲ. ಹಣ ಕೇಳಲು ಹೋದರೆ ಇಬ್ಬರೂ ಬೆದರಿಕೆ ಹಾಕಿದ್ದಾರೆ’ ಎಂದು ಶ್ರವಣ್​ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಎಸ್ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 (ನಂಬಿಕೆ ದ್ರೋಹ), 417, 420 (ವಂಚನೆ), ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಭಾಗವಾಗಿ, ಪೊಲೀಸರು ದೂರುದಾರರಿಗೆ ಸೂಕ್ತ ದಾಖಲೆ ನೀಡುವಂತೆ ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ಸೂಚಿಸಿದ್ದಾರೆ.

‘ಲಕ್ಷ್ಮೀ ನರಸಿಂಹ’, ‘ಜಯ ಜಾನಕಿ ನಾಯಕ’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಸುರೇಶ್​ಗೆ ಇದೆ.  ಈಗ ಅವರ ವಿರುದ್ಧ ದೂರು ದಾಖಲಾಗಿರುವುದರಿಂದ ಸಂಕಷ್ಟ ಎದುರಾಗಿದೆ. ಶ್ರವಣ್​ ಕುಮಾರ್ ಅವರು ಹೇಳಿರುವುದು ನಿಜವೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬೆಲ್ಲಂಕೊಂಡ ಸುರೇಶ್​ ಅವರ ಕಿರಿಯ ಮಗ ಗಣೇಶ್​ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಲಕ್ಷ್ಮಣ್​ ಕೆ. ಕೃಷ್ಣ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ವರ್ಷಾ ಬೊಲ್ಲಮ್ಮ ಅವರು ಹೀರೋಯಿನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಛತ್ರಪಥಿ’ ರಿಮೇಕ್ಅನ್ನು ವಿವಿ ವಿನಾಯಕ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೊನ್ನೆ ರಶ್ಮಿಕಾ, ನಿನ್ನೆ ಸಮಂತಾ; ದಕ್ಷಿಣ ಭಾರತದ ಬೆಡಗಿಯರ ಜತೆ ವರುಣ್​ ಧವನ್​ ಸುತ್ತಾಟ

ರಶ್ಮಿಕಾ ರೀತಿಯಲ್ಲಿ ಸೂಪರ್ ಆಗಿ​ ಡಾನ್ಸ್ ಮಾಡಿದ ವಂಶಿಕಾ; ‘ಪುಷ್ಪ ಪಾರ್ಟ್​ 10’ನಲ್ಲಿ ನೀನೇ ಇರ್ತೀಯಾ ಎಂದ ಸೃಜನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada