ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಚಿತ್ರತಂಡಗಳು ಚಿತ್ರಗಳ ಬಗ್ಗೆ ಹೊಸ ಅಪ್ಡೇಟ್ಗಳನ್ನು ಘೋಷಿಸುತ್ತಿವೆ. ಈ ಪೈಕಿ ತೆಲುಗಿನ ಬಹುನಿರೀಕ್ಷಿತ ‘ಭೋಲಾ ಶಂಕರ್’ (Bhola Shankar) ಕೂಡ ಸೇರಿದೆ. ಹೌದು. ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಹಲವು ಕಾರಣಗಳಿಗೆ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಆದರೆ ಚಿತ್ರದ ಮೊದಲ ಲುಕ್ ಈವರೆಗೆ ತೆರೆಕಂಡಿರಲಿಲ್ಲ. ಚಿರಂಜೀವಿ (Chiranjeevi) ‘ಭೋಲಾ ಶಂಕರ್’ನಲ್ಲಿ ಹೇಗೆ ಕಾಣಿಸಿಕೊಂಡಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಚಿತ್ರತಂಡ ಮೊದಲ ಲುಕ್ ರಿಲೀಸ್ ಮಾಡಿದೆ. ಈ ಚಿತ್ರದಲ್ಲಿ ‘ಭೋಲಾ ಶಂಕರ್’ ಎಂಬ ಶೀರ್ಷಿಕೆ ಹೆಸರಿನ ಪಾತ್ರದಲ್ಲಿ ಚಿರಂಜೀವಿ ಬಣ್ಣಹಚ್ಚುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthy Suresh) ಚಿರಂಜೀವಿ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೋರ್ವ ಖ್ಯಾತ ನಟಿ ತಮನ್ನಾ ಭಾಟಿಯಾ ಕೂಡ ‘ಭೋಲಾ ಶಂಕರ್’ನಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಬಿಡುಗಡೆಯಾಗಿರುವ ಮೊದಲ ಲುಕ್ನಲ್ಲಿ ಹಲವು ವಿಚಾರಗಳು ಗಮನಸೆಳೆದಿವೆ. ಆಕ್ಷನ್- ಡ್ರಾಮಾ ಮಾದರಿಯ ಚಿತ್ರ ಇದಾಗಿದ್ದು, ಮೆಹೆರ್ ರಮೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ವರ್ಷ ‘ಭೋಲಾ ಶಂಕರ್’ ತೆರೆಕಾಣುವ ನಿರೀಕ್ಷೆ ಇದೆ.
ಭೋಲಾ ಶಂಕರ್ ಮೊದಲ ಲುಕ್ ಇಲ್ಲಿದೆ:
Happy #MahaSivaratri to All !🙏
Here goes the #VibeOfBHOLAA #BholaaShankarFirstLook #BholaaShankar 🔱@MeherRamesh @AnilSunkara1 @tamannaahspeaks @KeerthyOfficial @dudlyraj #MahathiSwaraSagar @AKentsOfficial @BholaaShankar pic.twitter.com/XVxVYP5316
— Chiranjeevi Konidela (@KChiruTweets) March 1, 2022
‘ಭೋಲಾ ಶಂಕರ್’ ಚಿತ್ರದ ಚಿತ್ರೀಕರಣ ಪ್ರಸ್ತುತ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಎಕೆ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಲ್ಲಿ ಅನಿಲ್ ಸುಂಕರಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮಹತಿ ಸ್ವರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
‘ಭೋಲಾ ಶಂಕರ್’ ತಮಿಳಿನ ಸೂಪರ್ ಹಿಟ್ ಚಿತ್ರ ವೇದಾಲಂನ ಅಧಿಕೃತ ರಿಮೇಕ್. ಅಜಿತ್ ನಟಿಸಿದ್ದ ವೇದಾಲಂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಚಿರಂಜೀವಿ ತೆಲುಗು ಅವತರಣಿಕೆಯಲ್ಲಿ ಬಣ್ಣಹಚ್ಚಲಿದ್ದಾರೆ. ಮೂಲ ಚಿತ್ರ ಗೆದ್ದಿರುವುದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಯಾವೆಲ್ಲಾ ಬದಲಾವಣೆಗಳೊಂದಿಗೆ ಚಿತ್ರ ತೆರೆಗೆ ಬರಬಹುದು ಎಂಬ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ.
ಇದನ್ನೂ ಓದಿ:
James: ಇದು ಅಪ್ಪು ‘ಟ್ರೇಡ್ಮಾರ್ಕ್’! ‘ಜೇಮ್ಸ್’ ಹಾಡಿನಲ್ಲಿ ಅಭಿಮಾನಿಗಳಿಗೆ ಹಲವು ಸರ್ಪ್ರೈಸ್
Adipurush: ‘ಆದಿಪುರುಷ್’ ಚಿತ್ರತಂಡದಿಂದ ಬಿಗ್ ಅಪ್ಡೇಟ್; ₹ 400 ಕೋಟಿ ಬಜೆಟ್ನ ಚಿತ್ರ ತೆರೆಗೆ ಬರೋದು ಯಾವಾಗ?