ಕೋಲ್ಡ್ ಪ್ಲೇ: 2 ಸಾವಿರ ಬೆಲೆಯ ಟಿಕೆಟ್​ 3.5 ಲಕ್ಷಕ್ಕೆ ಮಾರಾಟ, ದೂರು ದಾಖಲು

ಕೋಲ್ಡ್ ಪ್ಲೇ ಮುಂಬೈ ಶೋನ ಟಿಕೆಟ್ ಗಳನ್ನು ಬ್ಲಾಕ್​ನಲ್ಲಿ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಬುಕ್​ ಮೈ ಶೋ ಇನ್ನಿತರೆ ಕೆಲವು ವೆಬ್​ ಸೈಟ್​ಗಳ ವಿರುದ್ಧ ದೂರು ದಾಖಲಾಗಿದೆ. ಕೋಲ್ಡ್​ ಪ್ಲೇ ಕಾನ್ಸರ್ಟ್​ನ 2000 ರೂಪಾಯಿ ಟಿಕೆಟ್​ 3.5 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಕೋಲ್ಡ್ ಪ್ಲೇ: 2 ಸಾವಿರ ಬೆಲೆಯ ಟಿಕೆಟ್​ 3.5 ಲಕ್ಷಕ್ಕೆ ಮಾರಾಟ, ದೂರು ದಾಖಲು
Follow us
|

Updated on:Sep 27, 2024 | 2:51 PM

ಕಳೆದೆರಡು ವಾರಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಮಾಧ್ಯಮಗಳಲ್ಲಿ ಕೋಲ್ಡ್​ಪ್ಲೇನದ್ದೇ ಚರ್ಚೆ. ಏನಿದು ಕೋಲ್ಡ್ ಪ್ಲೇ? ಕೋಲ್ಡ್ ಪ್ಲೇ ಬ್ರಿಟನ್​ ಮೂಲದ ವಿಶ್ವಜನಪ್ರಿಯ ಮ್ಯೂಸಿಕ್ ಬ್ಯಾಂಡ್. ಇದೀಗ ಈ ಬ್ಯಾಂಡ್​ನವರು ಭಾರತದಲ್ಲಿ ಲೈವ್ ಶೋ ಆಯೋಜನೆ ಮಾಡಿದ್ದಾರೆ. ಶೋನ ಟಿಕೆಟ್​ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಹಲವಾರು ಮಂದಿ ಶೋನ ಟಿಕೆಟ್ ಸಿಗದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದ ಕೋಲ್ಡ್ ಪ್ಲೇ ಒಂದು ಶೋ ಅನ್ನು ಹೆಚ್ಚುವರಿಯಾಗಿ ಘೋಷಿಸಿ ಟಿಕೆಟ್ ಮಾರಾಟ ಮಾಡಿತಾದರೂ ಅದರ ಟಿಕೆಟ್​ಗಳು ಸಹ ಕೆಲವೇ ನಿಮಿಷಗಳಲ್ಲಿ ಬಿಕರಿಯಾದವು. ಆದರೆ ಆ ಟಿಕೆಟ್​ಗಳನ್ನು ಕೆಲವು ಸಂಸ್ಥೆಗಳು ಭಾರಿ ಮೊತ್ತಕ್ಕೆ ಬ್ಲಾಕ್​ನಲ್ಲಿ ಮಾರಾಟ ಮಾಡಲು ಆರಂಭಿಸಿವೆ. ಈ ಬ್ಲಾಕ್ ಮಾರಾಟ ದೊಡ್ಡದಾಗಿ ಸದ್ದಾಗುತ್ತಿದ್ದಂತೆ ಟಿಕೆಟ್ ಮಾರಾಟ ಮಾಡಿದ್ದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬುಕ್​ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್​ಮೆಂಟ್ ಸಂಸ್ಥೆಗಳು ಕೋಲ್ಡ್​ ಪ್ಲೇ ಭಾರತದ ಕಾನ್ಸರ್ಟ್​ನ ಟಿಕೆಟ್ ಅನ್ನು ಆನ್​ಲೈನ್ ಮಾರಾಟ ಮಾಡಿದ್ದವು. ಆದರೆ ಈ ವೆಬ್​ಸೈಟ್​ಗಳಲ್ಲಿ ಕ್ಷಣದಲ್ಲಿ ಮಾರಾಟವಾದ ಟಿಕೆಟ್​ಗಳು ಕೆಲವು ಬೇರೆ ವೆಬ್​ಸೈಟ್​ಗಳಲ್ಲಿ ಮತ್ತೆ ಮಾರಾಟಕ್ಕೆ ಸಿಕ್ಕವು ಅದೂ ಸುಮಾರು 20-30 ಪಟ್ಟು ಹೆಚ್ಚು ದರದಲ್ಲಿ. ಇದು ಕೋಲ್ಡ್ ಪ್ಲೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದೀಗ ವಕೀಲರೊಬ್ಬರು ಕೋಲ್ಡ್ ಪ್ಲೇ ಟಿಕೆಟ್ ಮಾರಾಟ ಹಗರಣದ ವಿಷಯವಾಗಿ ಆರ್ಥಿಕ ಅಪರಾಧ ವಿಭಾಗಕ್ಕೆ ಬುಕ್ ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್​ಮೆಂಟ್ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದ್ದು ಟಿಕೆಟ್ ಮಾರಾಟದಲ್ಲಿ ಈ ಸಂಸ್ಥೆಗಳು ಅವ್ಯಹಾರ ಎಸಗಿವೆ ಎಂದು ಆರೋಪ ಮಾಡಿದ್ದಾರೆ. ಬುಕ್​ ಮೈ ಶೋ, ಟಿಕೆಟ್ ಖರೀದಿಸಲು ಮುಂದಾಗಿರುವ ನಿಜ ಗ್ರಾಹಕರನ್ನು ನಿರ್ಲಕ್ಷಿಸಿ ತಪ್ಪು ದಾರಿಯಲ್ಲಿ ಬ್ರೋಕರ್​​ಗಳಿಗೆ ಹೆಚ್ಚಿನ ಟಿಕೆಟ್ ಮಾರಾಟ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೋಲ್ಡ್ ಪ್ಲೇ ಭಾರತದ ಕಾನ್ಸರ್ಟ್​ನ ಅಧಿಕೃತ ಟಿಕೆಟಿಂಗ್ ಪಾರ್ಟನರ್ ಆಗಿದೆ ಬುಕ್​ ಮೈ ಶೋ. ಈ ಸಂಸ್ಥೆಯ ವೆಬ್​ಸೈಟ್​ನಿಂದ ಮಾರಾಟವಾದ ಟಿಕೆಟ್​ಗಳನ್ನೇ ಬೇರೆ ಕೆಲ ವೆಬ್​ಸೈಟ್​ಗಳಲ್ಲಿ ಭಾರಿ ದುಬಾರಿ ಮೊತ್ತಕ್ಕೆ ಬ್ಲಾಕ್​ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:Sony WF-C510: ಸೋನಿ ಲೇಟೆಸ್ಟ್ ಬಡ್ಸ್ ಮೂಲಕ ಬೆಸ್ಟ್ ಮ್ಯೂಸಿಕ್ ಅನುಭವ

ಕೋಲ್ಡ್​ ಪ್ಲೇ ಮ್ಯೂಸಿಕ್ ಬ್ಯಾಂಡ್ ಮುಂದಿನ ವರ್ಷ ಜನವರಿ 18 ರಿಂದ 21 ರವರೆಗೆ ಮುಂಬೈನಲ್ಲಿ ಮೂರು ಶೋಗಳನ್ನು ಮಾಡಲಿದೆ. ಈ ಶೋಗೆ 2500 ರೂಪಾಯಿಗಳಿಂದ ಟಿಕೆಟ್ ದರ ಪ್ರಾರಂಭವಾಗಿತ್ತು. ಬುಕ್​ ಮೈ ಶೋನಲ್ಲಿ ಹೆಚ್ಚಿನ ಬೆಲೆ ಎಂದರೆ ಸುಮಾರು 15 ರಿಂದ 20 ಸಾವಿರದ ವರೆಗೆ ಮಾತ್ರವೇ ಇತ್ತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಕೆಲವು ಬ್ರೋಕರ್​ಗಳು ಬುಕ್​ ಮೈ ಶೋನಿಂದ ದೊಡ್ಡ ಮೊತ್ತದಲ್ಲಿ ಟಿಕೆಟ್ ಖರೀದಿ ಮಾಡಿ ಆ ಟಿಕೆಟ್​ಗಳನ್ನು ಈಗ ಒಂದಕ್ಕೆ 35-40 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿವೆ. ಕೆಲವು ವಿಐಪಿ ಟಿಕೆಟ್​ಗಳು 3.5 ಲಕ್ಷ ರೂಪಾಯಿಗೆ ಸಹ ಮಾರಾಟವಾಗಿವೆ.

ಹೀಗೆ ಬ್ಲಾಕ್​ನಲ್ಲಿ ಕೋಲ್ಡ್ ಪ್ಲೇ ಕಾನ್ಸರ್ಟ್​ನ ಟಿಕೆಟ್ ಮಾರಾಟ ಮಾಡುತ್ತಿರುವ ವಿಯಾಗೊಗೊ ಮತ್ತು ಇನ್ನಿತರೆ ವೆಬ್ ಸೈಟ್​ಗಳ ವಿರುದ್ಧ ಬುಕ್ ಮೈ ಶೋ ಪ್ರತ್ಯೇಕ ದೂರು ದಾಖಲು ಮಾಡಿದೆ. ಆದರೆ ಈ ಪ್ರಕರಣವಾಗಿ ಪೊಲೀಸರು ಯಾವುದೇ ಕ್ರಮ ಇನ್ನೂ ಕೈಗೊಂಡಿಲ್ಲ. ಕೋಲ್ಡ್​ ಪ್ಲೇ ಕಾನ್ಸರ್ಟ್​ನಂತೆಯೇ ಪಂಜಾಬಿ ಗಾಯಕ ನಟ ದಿಲ್ಜಿತ್ ದುಸ್ಸಾಂಜ್​ರ ‘ದಿಲ್ಲುಮಿನಾಟಿ’ ಶೋನ ಟಿಕೆಟ್​ಗಳು ಸಹ ಭಾರಿ ಮೊತ್ತಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Fri, 27 September 24

ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ