Allu Arjun Arrest: ಅಲ್ಲು ಅರ್ಜುನ್ ಪ್ರಕರಣಕ್ಕೆ ಟ್ವಿಸ್ಟ್, ದೂರು ಹಿಂಪಡೆಯಲು ರೆಡಿ ಎಂದ ಮೃತಳ ಪತಿ

Allu Arjun Arrest: ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಭೇಟಿ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನವಾಗಿದೆ. ಮೃತ ಮಹಿಳೆಯ ಪತಿಯ ದೂರು ಆಧರಿಸಿ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿದೆ. ಆದರೆ ಈಗ ಮಹಿಳೆಯ ಪತಿ ದೂರು ಹಿಂಪಡೆಯಲು ಸಿದ್ಧವಿರುವುದಾಗಿ ಹೇಳಿದ್ದಾರೆ.

Allu Arjun Arrest: ಅಲ್ಲು ಅರ್ಜುನ್ ಪ್ರಕರಣಕ್ಕೆ ಟ್ವಿಸ್ಟ್, ದೂರು ಹಿಂಪಡೆಯಲು ರೆಡಿ ಎಂದ ಮೃತಳ ಪತಿ
ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Dec 13, 2024 | 5:27 PM

ಅಲ್ಲು ಅರ್ಜುನ್​ಗೆ ನಾಂಪಲ್ಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಡಿಸೆಂಬರ್ 4 ರ ರಾತ್ರಿ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ‘ಪುಷ್ಪ 2’ ಸಿನಿಮಾದ ಬೆನಿಫಿಟ್ ಶೋ ವೀಕ್ಷಿಸಲು ಅಲ್ಲು ಅರ್ಜುನ್ ತೆರಳಿದ್ದರು. ಈ ವೇಳೆ ಅಲ್ಲು ಅರ್ಜುನ್ ಅನ್ನು ನೋಡಲು ಜನ ಮುಗಿಬಿದ್ದ ಕಾರಣ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬುವರು ನಿಧನ ಹೊಂದಿದ್ದರು. ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದ. ಡಿಸೆಂಬರ್ 5 ರಂದು ರೇವತಿಯ ಪತಿ ಭಾಸ್ಕರ್ ಹೈದರಾಬಾದ್​ನ ಚೀಕಡಪಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಇದೀಗ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್, ‘ಕಾಲ್ತುಳಿತಕ್ಕೂ ಅಲ್ಲು ಅರ್ಜುನ್​ಗೂ ಸಂಬಂಧವಿಲ್ಲ. ನಾನು ಅಲ್ಲು ಅರ್ಜುನ್ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಲು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನ ಆಗುತ್ತಿರುವ ವಿಷಯ ನನಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

‘ನಾನು ಆಸ್ಪತ್ರೆಯಲ್ಲಿದ್ದೆ, ಅಲ್ಲು ಅರ್ಜುನ್ ಬಂಧನದ ವಿಷಯ ಮಾಧ್ಯಮಗಳಿಂದ ಗೊತ್ತಾಯ್ತು, ಅಲ್ಲು ಅರ್ಜುನ್ ಇಂದಾಗಿ ನನ್ನ ಪತ್ನಿ ಸಾಯಲಿಲ್ಲ. ನಾನು ಬೇಕಾದರೆ ಈಗ ನೀಡಿರುವ ದೂರನ್ನು ಹಿಂಪಡೆದುಕೊಳ್ಳುತ್ತೇನೆ’ ಎಂದಿದ್ದಾರೆ. ಅಂದಹಾಗೆ ಅಲ್ಲು ಅರ್ಜುನ್, ಮೃತ ಮಹಿಳೆ ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಅವರ ಪುತ್ರನ ಚಿಕಿತ್ಸೆಗೆ ಸಂಪೂರ್ಣ ಧನ ಸಹಾಯ ಮಾಡುವ ಭರವಸೆಯನ್ನು ಮೊದಲೇ ನೀಡಿದ್ದರು.

ಇದನ್ನೂ ಓದಿ:‘ಅಲ್ಲು ಅರ್ಜುನ್ ಬಂಧನದಲ್ಲಿ ನನ್ನ ಹಸ್ತಕ್ಷೇಪ ಇಲ್ಲ’; ಸಿಎಂ ರೇವಂತ್ ರೆಡ್ಡಿ ಸ್ಪಷ್ಟನೆ

ಆದರೆ ಅಲ್ಲು ಅರ್ಜುನ್​ಗೆ ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣಗಳಲ್ಲಿ ನೀಡಿರುವ ದೂರನ್ನು ಹಿಂಪಡೆದರೂ ತನಿಖೆ, ವಿಚಾರಣೆ ನಡೆಯುತ್ತಲೇ ಇರುತ್ತದೆ. ಹಾಗಾಗಿ ಈಗ ದೂರುದಾರರು ನೀಡಿರುವ ದೂರು ಹಿಂಪಡೆದರು ಪ್ರಕರಣದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ