ಜೂ ಎನ್​ಟಿಆರ್​ ಅಭಿಮಾನಿಗಳ ಮೇಲೆ ಲಾಠಿ ಬೀಸಿದ ಪೊಲೀಸರು

‘ದೇವರ’ ಸಿನಿಮಾದ ಬಿಡುಗಡೆ ಇಂದು ಆಗಿದ್ದು, ಕೆಲವೆಡೆ ಅಭಿಮಾನಿಗಳು ಹಾಗೂ ಚಿತ್ರಮಂದಿರ ಸಿಬ್ಬಂದಿ ನಡುವೆ ಜಗಳಗಳು ಸಹ ನಡೆದಿವೆ. ಕಡಪ ಜಿಲ್ಲೆಯಲ್ಲಿ ಅಭಿಮಾನಿಗಳು ಟಿಕೆಟ್ ಖರೀದಿಸದೆ ಸಿನಿಮಾ ನೋಡಲು ನುಗ್ಗಿದ್ದರು, ಅವರನ್ನು ಹೊರಗಟ್ಟಿ ಸಿನಿಮಾ ಪ್ರದರ್ಶಿಸಲಾಗಿದೆ.

ಜೂ ಎನ್​ಟಿಆರ್​ ಅಭಿಮಾನಿಗಳ ಮೇಲೆ ಲಾಠಿ ಬೀಸಿದ ಪೊಲೀಸರು
Follow us
|

Updated on: Sep 27, 2024 | 12:59 PM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವೆಡೆ ಮಧ್ಯ ರಾತ್ರಿಯಿಂದಲೇ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ ಕಾದು ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಕೆಲವು ಚಿತ್ರಮಂದಿರಗಳಲ್ಲಿ ನಿರೀಕ್ಷೆಯಂತೆಯೇ ಅಭಿಮಾನಿಗಳ ಅಬ್ಬರದಿಂದ ಗಲಾಟೆಗಳು ಸಹ ನಡೆದಿವೆ. ಕೆಲವೆಡೆ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆಂಧ್ರ-ತೆಲಂಗಾಣಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ವರದಿಯಾಗಿವೆ.

ಕಡಪ ಜಿಲ್ಲೆಯಲ್ಲಿ ಜೂ ಎನ್​ಟಿಆರ್ ಅಭಿಮಾನಿಗಳು ಹೆಚ್ಚಿಗಿದ್ದು, ‘ದೇವರ’ ಸಿನಿಮಾದ ಮಧ್ಯ ರಾತ್ರಿ ಶೋಗೆ ಟಿಕೆಟ್ ಇಲ್ಲದೆ ಹಲವು ಅಭಿಮಾನಿಗಳು ನುಗ್ಗಲು ಯತ್ನಿಸಿದ್ದಾರಂತೆ. ಈ ವೇಳೆ ಚಿತ್ರಮಂದಿರದ ಸಿಬ್ಬಂದಿ ಹಾಗೂ ಅಭಿಮಾನಿಗಳ ನಡುವೆ ಜಗಳಗಳು ನಡೆದಿದ್ದು, ಕೊನೆಗೆ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದ್ದಾರೆ. ಇನ್ನೂ ಕೆಲವು ಚಿತ್ರಮಂದಿರಗಳ ಬಳಿಯೂ ಸಹ ಅಭಿಮಾನಿಗಳು ಹದ್ದು ಮೀರಿ ವರ್ತಿಸಿದ ಘಟನೆಗಳು ವರದಿಯಾಗಿವೆ.

ಇದನ್ನೂ ಓದಿ:‘ದೇವರ’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿದವರು ಹೇಳಿದ್ದೇನು?

ಕಡಪ ಜಿಲ್ಲೆಯ ರಾಜ ಚಿತ್ರಮಂದಿರದಲ್ಲಿ ‘ದೇವರ’ ಸಿನಿಮಾದ ಮಧ್ಯ ರಾತ್ರಿ ಶೋ ಪ್ರದರ್ಶಿಸಲಾಗಿತ್ತು, ಈ ವೇಳೆ ಟಿಕೆಟ್ ಇಲ್ಲದ ಹಲವು ಅಭಿಮಾನಿಗಳು ನುಗ್ಗಿದ್ದರು. ಸಿನಿಮಾ ಪ್ರದರ್ಶನಗೊಂಡ ಕೆಲ ಹೊತ್ತಿನ ಬಳಿಕ ಚಿತ್ರಮಂದಿರ ಮಾಲೀಕರು ಸಿನಿಮಾ ಪ್ರದರ್ಶನವನ್ನು ಕೆಲ ಕಾಲ ನಿಲ್ಲಿಸಿ, ಟಿಕೆಟ್ ಇಲ್ಲದೆ ಒಳಗೆ ಹೋಗಿದ್ದ ಅಭಿಮಾನಿಗಳನ್ನು ಹೊರಗಟ್ಟುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸಿಬ್ಬಂದಿಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದ್ದಾರೆ. ಅದಾದ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆದಿದೆ.

ಜೂ ಎನ್​ಟಿಆರ್ ಒಬ್ಬರೇ ಹೀರೋ ಆಗಿ ನಟಿಸಿದ ಸಿನಿಮಾ ಬಿಡುಗಡೆ ಸುಮಾರು ಆರು ವರ್ಷಗಳ ಬಳಿಕ ಈಗ ‘ದೇವರ’ ಸಿನಿಮಾ ಬಿಡುಗಡೆ ಆಗುತ್ತಿದೆ. ಇದಕ್ಕೆ ಮುಂಚೆ ‘ಆರ್​ಆರ್​ಆರ್’ ಸಿನಿಮಾ ಬಿಡುಗಡೆ ಆಗಿತ್ತಾದರೂ ಅದು ಮಲ್ಟಿಸ್ಟಾರರ್ ಸಿನಿಮಾ ಆಗಿತ್ತು. ಅದೇ ಕಾರಣಕ್ಕೆ ಜೂ ಎನ್​ಟಿಆರ್ ಅಭಿಮಾನಿಗಳು ಈ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಅಡ್ವಾನ್ಸ್ ಟಿಕೆಟ್ ಬುಕಿಂಗ್​ನಲ್ಲಿಯೇ ದಾಖಲೆ ಬರೆದಿದೆ. ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಸಹ ದೊರಕಿವೆ. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಇನ್ನೊಂದು ವರ್ಷದ ಬಳಿಕ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್