‘ದೇವರ’ ಚಿತ್ರದ ರಿಸಲ್ಟ್ ಮೇಲೆ ನಿಂತಿದೆ ಹಲವರ ಭವಿಷ್ಯ

| Updated By: ಮಂಜುನಾಥ ಸಿ.

Updated on: Sep 26, 2024 | 6:48 PM

‘ದೇವರ’ ಸಿನಿಮಾ ನಾಳೆ (ಸೆಪ್ಟೆಂಬರ್ 27) ಬಿಡುಗಡೆ ಆಗಲಿದ್ದು, ಸಿನಿಮಾದ ಗೆಲುವು ಹಲವರಿಗೆ ಬಹಳ ಪ್ರಮುಖವಾಗಿದೆ. ಈ ಸಿನಿಮಾ ಗೆಲ್ಲದೇ ಹೋದರೆ ಸಿನಿಮಾಕ್ಕೆ ಸಂಬಂಧಿಸಿದ ಕೆಲವರ ವೃತ್ತಿ ಬದುಕಿನ ಭವಿಷ್ಯ ಕಷ್ಟಕರವಾಗಲಿದೆ.

‘ದೇವರ’ ಚಿತ್ರದ ರಿಸಲ್ಟ್ ಮೇಲೆ ನಿಂತಿದೆ ಹಲವರ ಭವಿಷ್ಯ
Follow us on

ಜೂನಿಯರ್ ಎನ್ಟಿಆರ್ ನಟನೆಯ, ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಸೆಪ್ಟೆಂಬರ್ 27ರಂದು ಚಿತ್ರ ತೆರೆ ಕಾಣುತ್ತಿದೆ. ಬಾಲಿವುಡ್ ಕಲಾವಿದರಾದ ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಹೀಗಾಗಿ, ಈ ಐದು ವಿಚಾರಗಳನ್ನು ಸಿನಿಮಾ ಸಾಬೀತು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅನೇಕರ ಭವಿಷ್ಯವನ್ನು ಸಿನಿಮಾ ನಿರ್ಧರಿಸುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

ವಿಎಫ್ಎಕ್ಸ್

ಇಂಗ್ಲಿಷ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ ಸಿನಿಮಾಗೆ ಹಾಗೂ ‘ದೇವರ’ ಚಿತ್ರಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಕುರ್ಚಿಗಾಗಿ ನಡೆಯುವ ಕದನ ‘ಗೇಮ್ ಆಫ್ ಥ್ರೋನ್ಸ್’. ಈ ಸರಣಿ ಸಾಕಷ್ಟು ರಿಚ್ ಆಗಿ ಮೂಡಿ ಬಂದಿತ್ತು. ಸ್ವತಃ ನಿರ್ಮಾಪಕರು ‘ಗೇಮ್ ಥ್ರೋನ್ಸ್ಗಿಂತ ನಮ್ಮ ಸಿನಿಮಾ ಅದ್ಭುತವಾಗಿದೆ’ ಎಂದು ಹೇಳಿದ್ದರು. ಇದನ್ನು ಸಿನಿಮಾ ಸಾಬೀತು ಮಾಡಿಕೊಳ್ಳಬೇಕಿದೆ.

ಎನ್ಟಿಆರ್ ಸಾಬೀತು ಮಾಡಿಕೊಳ್ಳಬೇಕು

ಜೂನಿಯರ್ ಎನ್ಟಿಆರ್ ನಟನೆಯ ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಸಾವಿರ ಕೋಟಿ ಬಿಸ್ನೆಸ್ ಮಾಡಿತ್ತು. ಇದಕ್ಕೆ ಕಾರಣಕ್ಕೆ ಈ ಸಿನಿಮಾ ಮಲ್ಟಿ ಸ್ಟಾರರ್ ಆಗಿತ್ತು. ಆದರೆ, ಈ ಬಾರಿ ಜೂನಿಯರ್ ಎನ್ಟಿಆರ್ ಅವರು ‘ದೇವರ’ ಮೂಲಕ ಸೋಲೋ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ತಮ್ಮ ಪವರ್ನ ಸಾಬೀತುಪಡಿಸಬೇಕಿದೆ. ರಾಜಮೌಳಿ ಸಿನಿಮಾ ಮಾಡಿದ ಬಳಿಕ ಹೀರೋಗಳು ಸೋಲು ಕಾಣುತ್ತಾರೆ ಎಂಬುದನ್ನು ಸುಳ್ಳು ಮಾಡಬೇಕಿದೆ.

ಜಾನ್ವಿ ಕಪೂರ್ಗೆ ಅಗ್ನಿ ಪರೀಕ್ಷೆ

ಜಾನ್ವಿ ಕಪೂರ್ ಅವರಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಜಾನ್ವಿ ಕಪೂರ್ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಹಾಗೂ ಜೂನಿಯರ್ ಎನ್ಟಿಆರ್ ಕೆಮಿಸ್ಟ್ರಿ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಅವರು ಕೇವಲ ಗ್ಲಾಮರ್ಗೆ ಮಾತ್ರ ಸೀಮಿತವಾಗದೆ ಇರಬೇಕಾದ ಅನಿವಾರ್ಯತೆ ಇದೆ.

ಅನಿರುದ್ಧ್ ಮ್ಯೂಸಿಕ್

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಎಂದರೆ ಎಲ್ಲರಲ್ಲೂ ಒಂದು ನಿರೀಕ್ಷೆ ಮೂಡುತ್ತದೆ. ‘ಜೈಲರ್’ ಮೊದಲಾದ ಸಿನಿಮಾಗಳಲ್ಲಿ ಅವರು ನೀಡಿದ ಮ್ಯೂಸಿಕ್ ಗಮನ ಸೆಳೆದಿತ್ತು. ಅವರು ‘ದೇವರ’ ಚಿತ್ರಕ್ಕೂ ಮ್ಯೂಸಿಕ್ ಮಾಡಿದ್ದಾರೆ. ಅವರು ಈ ಚಿತ್ರದ ಮೂಲಕ ಮತ್ತೊಮ್ಮೆ ಮೆಚ್ಚುಗೆ ಪಡೆಯಬೇಕಾದ ಅನಿವಾರ್ಯತೆ ಇದೆ.

ಕೊರಟಾಲ ಶಿವಗೆ ಅಗ್ನಿ ಪರೀಕ್ಷೆ

‘ಆಚಾರ್ಯ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಸೋಲು ಕಂಡವರು ಕೊರಟಾಲ ಶಿವ. ಆ ಬಳಿಕ ಅವರು ‘ದೇವರ’ ಸಿನಿಮಾ ಕೈಗೆತ್ತಿಕೊಂಡರು. ಅವರು ‘ಮಿರ್ಚಿ’ ಅಂಥ ಹಿಟ್ ಸಿನಿಮಾ ನೀಡಿದವರು. ಹೀಗಾಗಿ ಕೊರಟಾಲ ಶಿವಗೆ ಒಂದು ದೊಡ್ಡ ಕಂಬ್ಯಾಕ್ ಬೇಕಿದೆ. ‘ದೇವರ’ ಮೂಲಕ ಅದು ಆಗಲೇಬೇಕಾದ ಅನಿವಾರ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ