ನಟ ಧನುಷ್ ಎಂಥ ಪ್ರತಿಭಾನ್ವಿತ ಕಲಾವಿದ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಅವರು ಮಾಡಿದ ‘ಕರ್ಣನ್’, ‘ಅಸುರನ್’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದೂ ಅಲ್ಲದೆ, ಅವರಿಗೆ ಪ್ರಶಸ್ತಿಯನ್ನೂ ತಂದುಕೊಟ್ಟಿವೆ. ಹಾಗಾಗಿ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದೆ. ಧನುಷ್ ನಟಿಸುವ ಎಲ್ಲ ಸಿನಿಮಾಗಳಲ್ಲೂ ಒಂದು ಮೆಸೇಜ್ ಇರುತ್ತದೆ ಎಂಬ ನಿರೀಕ್ಷೆ ಸಿನಿಪ್ರಿಯರದ್ದು. ಹಾಗಾಗಿ ಅವರ ಮುಂದಿನ ಸಿನಿಮಾ ಮೇಲೆ ಹೆಚ್ಚು ಕಾತರ ಸೃಷ್ಟಿ ಆಗಿದೆ.
ಧನುಷ್ ಅಭಿನಯಿಸಲಿರುವ 44ನೇ ಚಿತ್ರದ ಬಗ್ಗೆ ಹಲವು ಅಪ್ಡೇಟ್ಗಳು ಕೇಳಿಬರುತ್ತಿವೆ. ಈ ಸಿನಿಮಾದಲ್ಲಿ ಮೂವರು ಹೀರೋಯಿನ್ಗಳು ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅವರು ಯಾರು ಎಂಬುದು ಕೂಡ ತಿಳಿದು ಬಂದಿದೆ. ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿಯರಾದ ನಿತ್ಯಾ ಮೆನನ್, ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಅವರು ಈ ಸಿನಿಮಾದಲ್ಲಿ ನಟಿಸಲಿರುವುದು ವಿಶೇಷ. ಮೂವರು ಹೀರೋಯಿನ್ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಈ ಚಿತ್ರದ ಕಥೆ ಏನಿರಬಹುದು ಎಂದು ಅಭಿಮಾನಿಗಳು ಊಹಿಸಲು ಆರಂಭಿಸಿದ್ದಾರೆ.
ಸದ್ಯಕ್ಕೆ ಈ ಚಿತ್ರವನ್ನು ತಾತ್ಕಾಲಿಕವಾಗಿ ಡಿ44 ಎಂದು ಕರೆಯಲಾಗುತ್ತಿದೆ. ಇಂದು (ಆ.5) ಚಿತ್ರದ ಶೀರ್ಷಿಕೆ ಘೋಷಣೆ ಆಗಲಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣ ಆಗಲಿದೆ. ಇಂದು ಸಂಜೆ 6 ಗಂಟೆಗೆ ಟೈಟಲ್ ಲಾಂಚ್ ಮಾಡಲಾಗುವುದು ಎಂದು ಸನ್ ಪಿಕ್ಚರ್ಸ್ ಸೋಶಿಯಲ್ ಮೀಡಿಯಾ ಮೂಲಕ ಸುದ್ದಿ ನೀಡಿದೆ. ಅದಕ್ಕಾಗಿ ಧನುಷ್ ಅಭಿಮಾನಿಗಳು ಕಾತರರಾಗಿದ್ದಾರೆ.
.@MenenNithya joins the cast of #D44.@dhanushkraja @anirudhofficial @prakashraaj pic.twitter.com/wyUx16agxl
— Sun Pictures (@sunpictures) August 4, 2021
.@dhanushkraja’s #D44 title will be revealed tomorrow at 6 PM.#D44TitleRevealTomorrow@anirudhofficial @RaashiiKhanna_ @MenenNithya @priya_Bshankar @prakashraaj #Bharathiraja pic.twitter.com/6OzTZ5TAdk
— Sun Pictures (@sunpictures) August 4, 2021
ಈ ಸಿನಿಮಾದಲ್ಲಿ ಪ್ರಕಾಶ್ ರೈ ಮತ್ತು ಭಾರತಿರಾಜ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಹಾಗಾಗಿ ಪಾತ್ರವರ್ಗದ ಕಾರಣದಿಂದಲೂ ಈ ಸಿನಿಮಾ ಮಹತ್ವ ಪಡೆದುಕೊಂಡಿದೆ. ಈ ಚಿತ್ರಕ್ಕೆ ಮಿತ್ರನ್ ಜವಹಾರ್ ಅವರು ನಿರ್ದೇಶನ ಮಾಡಲಿದ್ದಾರೆ. ಆಗಸ್ಟ್ 6ರಂದು ಮುಹೂರ್ತ ನೆರವೇರಲಿದ್ದು, ಇದೇ ತಿಂಗಳಲ್ಲಿ ಶೂಟಿಂಗ್ ಶುರುವಾಗುವ ನಿರೀಕ್ಷೆ ಇದೆ. ಸದ್ಯ ಮಾರನ್ ಸಿನಿಮಾ ಚಿತ್ರೀಕರಣದಲ್ಲಿ ಧನುಷ್ ಬ್ಯುಸಿ ಆಗಿದ್ದಾರೆ. ಆ ಚಿತ್ರದ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇದನ್ನೂ ಓದಿ:
150 ಕೋಟಿ ರೂ. ಬಂಗಲೆ ಕಟ್ಟಿಸುತ್ತಿರುವ ನಟ ಧನುಷ್; ಈ ಮನೆಯ ವಿಶೇಷ ಏನು?
Dhanush: ‘ಕರ್ಣನ್’ ಗೆದ್ದ ಬಳಿಕ ಧನುಷ್ ಸಂಭಾವನೆ ಏರಿಕೆ; ಖ್ಯಾತ ನಟನಿಗೆ ಈಗ ಸಿಗುತ್ತಿರುವ ಹಣ ಎಷ್ಟು?
ಸೋಲಿನ ಸುಳಿಯಲ್ಲಿದ್ದ ನಟ ಧನುಷ್ ಯಶಸ್ಸನ್ನು ಪಡೆಯಲು ಕಾರಣವಾದ ಸಂಗತಿಗಳು ನಿಮಗೆ ಗೊತ್ತೇ?