ಸ್ಯಾಂಡಲ್​ವುಡ್​ನಲ್ಲಿ ಮುಗಿಯದ ವಿವಾದ; ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧ ಯುವ ನಟನಿಂದ ಧಮ್ಕಿ ಆರೋಪ

ರಾಮನಗರದ ಅಕ್ಕೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ಹಾಗೂ ಯುವ ನಟ ಶಬರೀಶ್​ ದೂರು ನೀಡಿದವರು.ಆದರೆ, ಈ ಆರೋಪವನ್ನು ಪ್ರಶಾಂತ್​ ರಾಜ್​ ಅಲ್ಲಗಳೆದಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮುಗಿಯದ ವಿವಾದ; ನಿರ್ದೇಶಕ ಪ್ರಶಾಂತ್ ರಾಜ್ ವಿರುದ್ಧ ಯುವ ನಟನಿಂದ ಧಮ್ಕಿ ಆರೋಪ
Director Prashanth Raj Started Threatening Alleged Young Actor Shabareesh
TV9kannada Web Team

| Edited By: Rajesh Duggumane

Jul 20, 2021 | 4:19 PM

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​ವುಡ್​ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ವಿವಾದಗಳ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ದಿನ ಬೆಳಗಾದರೆ ಸ್ಯಾಂಡಲ್​ವುಡ್​ನಲ್ಲಿ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ನಟ ದರ್ಶನ್​ ಹಾಗೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ನಡುವಿನ ತಿಕ್ಕಾಟ ತಣ್ಣಗಾಗುವುದರೊಳಗೆ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ವಿವಾದ ಹುಟ್ಟಿಕೊಳ್ಳುವ ಲಕ್ಷಣ ಗೋಚರವಾಗಿದೆ. ‘ಜೂಮ್​’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್​ ರಾಜ್​ ವಿರುದ್ಧ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಯುವ ನಟ ಶಬರೀಶ್ ಎಂಬುವವರು ಈ ಆರೋಪ ಮಾಡಿದ್ದಾರೆ.

ರಾಮನಗರದ ಅಕ್ಕೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರ ಹಾಗೂ ಯುವ ನಟ ಶಬರೀಶ್​ ದೂರು ನೀಡಿದವರು. ‘ರಾಮನಗರದಲ್ಲಿ ಪ್ರಶಾಂತ್ ರಾಜ್ ತೋಟ ಖರೀದಿಸಿದ್ದರು. ನನ್ನಿಂದ ಪ್ರಶಾಂತ್​ ರಾಜ್​ ಕೆಲಸ ಮಾಡಿಸಿಕೊಂಡಿದ್ದಾರೆ. ಆದರೆ, ಹಣ ಕೇಳಿದಾಗ ಕೊಟ್ಟಿರಲಿಲ್ಲ. ನಂತರ ಪ್ರಶಾಂತ್​ ಕಾರನ್ನು ನೀಡಿದ್ದರು. ಸಿನಿಮಾದಲ್ಲಿ ಚಾನ್ಸ್​ ನೀಡುವುದಾಗಿಯೂ ನಂಬಿಸಿದ್ದರು. ಈಗ ಕಾರನ್ನು ವಾಪಸ್ ಕೊಡುವಂತೆ ಪ್ರಶಾಂತ್​ ಧಮ್ಕಿ ಹಾಕಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ, ಈ ಆರೋಪವನ್ನು ಪ್ರಶಾಂತ್​ ರಾಜ್​ ಅಲ್ಲಗಳೆದಿದ್ದಾರೆ. ಈ ಪ್ರಕರಣದ ಬಗ್ಗೆ ಅವರು ಹೇಳೋದೇ ಬೇರೆ. ‘ಒಂದು ವರ್ಷದ ಹಿಂದೆ ತೋಟದಲ್ಲಿ ಫಾರ್ಮ್ ಹೌಸ್ ಸೆಟಪ್​ ಕೆಲಸವನ್ನು ಶಬರೀಶ್​ಗೆ ನೀಡಿದ್ದೆವು. ಆದರೆ, ಅವರು ಕಳಪೆ ಕಾಮಗಾರಿ‌ ಮಾಡಿದ್ದರು. 30 ರಿಂದ 40 ಲಕ್ಷ ಹಣ ಮತ್ತು ಓಡಾಡೋಕೆ ಕಾರನ್ನು ಕೊಟ್ಟಿದ್ದೆವು. ಆದರೆ, ಒಂದು ವರ್ಷದಿಂದ ಕೆಲಸ‌ ಮಾಡಿಲ್ಲ. ಈ ವಿಚಾರವಾಗಿ ಬೆಂಗಳೂರು ಹಾಗೂ ಚೆನ್ನಪಟ್ಟಣದಲ್ಲಿ ದೂರು ಕೊಟ್ಡಿದ್ದೇವೆ. ಆದರೆ, ಶಬರೀಶ್​ ಕೆಲಸವನ್ನೂ ಮಾಡಿಲ್ಲ, ಕಾರನ್ನು ನೀಡಿಲ್ಲ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ’ ಎಂದಿದ್ದಾರೆ ಪ್ರಶಾಂತ್​ ರಾಜ್​.

ಇದನ್ನೂ ಓದಿ: ‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ

ಕನ್ನಡಿಗ ಎಂದು ಪ್ರಕಾಶ್​ ರಾಜ್​ರನ್ನು ಹೊರಗೆ ಇಡುತ್ತಿರುವ ಟಾಲಿವುಡ್​; ‘ನಮ್ಮವನಲ್ಲ’ ಎಂದವರಿಗೆ ನಟನ ಉತ್ತರ ಏನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada