Fact Check: ವಿದೇಶದಲ್ಲಿ ಪುಷ್ಪಾ 2 ಕ್ರೇಜ್ ಎಂದು ಫುಟ್ಬಾಲ್ ಪಂದ್ಯ ವೀಕ್ಷಣೆಯ ವಿಡಿಯೋ ವೈರಲ್
ಈ ವಿಡಿಯೋದಲ್ಲಿ ಪುಷ್ಪಾ 2 ಸಿನಿಮಾದ ದೃಶ್ಯವನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಗಿದೆ. ಇದನ್ನು ನೋಡಿದ ಜನರು ಖುಷಿಯಿಂದ ಕೇಕೆ ಹಾಕುತ್ತಿರುವುದನ್ನು ಕಾಣಬಹುದು. ವಿದೇಶದ ಸಿನಿಮಾ ಮಂದಿರಗಳಿಗೆ ಪುಷ್ಪಾ ಎಂಟ್ರಿ ಕೊಟ್ಟ ಮೇಲೆ ವಿದೇಶಿಗರೂ ಹುಚ್ಚೆದ್ದು ಕುಣಿದಿದ್ದಾರೆ ಎಂದು ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಸಿನಿಮಾ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದೆ. ಸಿನಿಮಾ 1800 ಕೋಟಿ ರೂಪಾಯಿ ವ್ಯಾಪಾರ ಮಾಡುವ ನಿರೀಕ್ಷೆಯಲ್ಲಿದೆ. ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ ಇದು ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ. ಇದರ ನಡುವೆ ಈ ಸಿನಿಮಾಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಷ್ಪಾ 2 ಸಿನಿಮಾದ ದೃಶ್ಯವನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಗಿದೆ. ಇದನ್ನು ನೋಡಿದ ಜನರು ಖುಷಿಯಿಂದ ಕೇಕೆ ಹಾಕುತ್ತಿರುವುದನ್ನು ಕಾಣಬಹುದು. ವಿದೇಶದ ಸಿನಿಮಾ ಮಂದಿರಗಳಿಗೆ ಪುಷ್ಪಾ ಎಂಟ್ರಿ ಕೊಟ್ಟ ಮೇಲೆ ವಿದೇಶಿಗರೂ ಹುಚ್ಚೆದ್ದು ಕುಣಿದಿದ್ದಾರೆ ಎಂದು ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ಪರಿಗಣಿಸಿ ವೈರಲ್ ಮಾಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಪುಷ್ಪಾ ಸಿನಿಮಾ ಆಗಮನದಿಂದ ವಿದೇಶಿಯರೂ ಹುಚ್ಚರಾದರು. ಫಾರಿನ್ನಲ್ಲಿ ಸಿನಿಮಾ ಹಾಲ್‌ಗಳು ಹೀಗಿವೆ’’ ಎಂದು ಬರೆದುಕೊಂಡಿದ್ದಾರೆ.
View this post on Instagram
Fact Check:
ವೈರಲ್ ಕ್ಲಿಪ್ ಕುರಿತು ಟಿವಿ9 ಕನ್ನಡ ತನಿಖೆ ನಡೆಸಿದೆ. ಈ ಸಂದರ್ಭ ಇದು ನಕಲಿ ಎಂಬುದು ಸಾಬೀತಾಗಿದೆ. 2016 ರ ಈ ವಿಡಿಯೋವನ್ನು ಎಡಿಟ್ ಮಾಡಿ ಸಿದ್ಧಪಡಿಸಲಾಗಿದೆ ಎಂಬುದು ತಿಳಿದುಬಂದಿದೆ. ಮೂಲ ವಿಡಿಯೋದಲ್ಲಿ ಜನರು ಸಿನಿಮಾ ನೋಡದೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ವೈರಲ್ ಕ್ಲಿಪ್ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನಾವು ಗೂಗಲ್ ಓಪನ್ ಸರ್ಚ್ ಟೂಲ್ ಅನ್ನು ಬಳಸಿದ್ದೇವೆ. ವಿಭಿನ್ನ ಕೀವರ್ಡ್‌ಗಳೊಂದಿಗೆ ಹುಡುಕಿದ ನಂತರ, ಹಾರ್ಟ್ ನ್ಯೂಸ್ ವೆಸ್ಟ್ ಕಂಟ್ರಿ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ನಾವು ಮೂಲ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಈ ವಿಡಿಯೋದಲ್ಲಿ ದೊಡ್ಡ ಪರದೆಯ ಮೇಲೆ ಫುಟ್ಬಾಲ್ ಪಂದ್ಯ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣಬಹುದಾಗಿದೆ. ಜೂನ್ 17, 2016 ರಂದು ಅಪ್‌ಲೋಡ್ ಮಾಡಿದ ಈ ವಿಡಿಯೋದಲ್ಲಿ, ಯೂರೋ 2016ರ ಫುಟ್ಬಾಲ್ ಪಂದ್ಯವು ನಡೆಯುತ್ತಿದೆ.
ಇನ್ನಷ್ಟು ಹುಡುಕಾಟ ನಡೆಸಿದಾಗ, ಬ್ರಿಸ್ಟಲ್ ಸಿಟಿ ಫುಟ್ಬಾಲ್ ಕ್ಲಬ್‌ನ ವೆಬ್‌ಸೈಟ್‌ನಲ್ಲಿ ಈ ಕುರಿತು ವರದಿ ಕಂಡುಬಂದಿದೆ. ಈ ವರದಿಯಲ್ಲಿ ವೈರಲ್ ಕ್ಲಿಪ್‌ನಂತಹ ಚಿತ್ರವೂ ಇದೆ. ಬ್ರಿಸ್ಟಲ್‌ನ ಆಷ್ಟನ್ ಗೇಟ್ ಸ್ಟೇಡಿಯಂನಲ್ಲಿ ವೇಲ್ಸ್ ಮತ್ತು ಇಂಗ್ಲೆಂಡ್ ನಡುವೆ ಫುಟ್ಬಾಲ್ ಪಂದ್ಯ ನಡೆದಿದೆ ಎಂದು ಹೇಳಲಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿತ್ತು. ಇಂಗ್ಲೆಂಡ್ ತಂಡ ಗೋಲು ಬಾರಿಸಿದಾಗ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಆ ಸಮಯದ್ದಾಗಿದೆ. ಈ ವರದಿಯನ್ನು 17 ಜೂನ್ 2016 ರಂದು ಪ್ರಕಟಿಸಲಾಗಿದೆ. ಮೂಲ ವಿಡಿಯೋವನ್ನು ಸಹ ಇಲ್ಲಿ ನೋಡಬಹುದು.
ಹೀಗಾಗಿ ಟಿವಿ9 ಕನ್ನಡ ತನಿಖೆಯಲ್ಲಿ, ವೈರಲ್ ವಿಡಿಯೋ ನಕಲಿ ಎಂದು ಸಾಬೀತಾಗಿದೆ. ಫುಟ್ಬಾಲ್ ಪಂದ್ಯಕ್ಕೆ ಸಂಬಂಧಿಸಿದ ವಿಡಿಯೋವನ್ನು ಪುಷ್ಪಾ 2 ಹೆಸರಿನಲ್ಲಿ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಅಲ್ಲು ಅರ್ಜುನ್ ಅರೆಸ್ಟ್:
ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಷ್ಪಾ 2 ಸಿನಿಮಾದ ನಾಯಕ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ (ಡಿಸೆಂಬರ್ 13) ಬಂಧನ ಮಾಡಲಾಯಿತು. ಈ ಬಂಧನದಿಂದ ಇಡೀ ಟಾಲಿವುಡ್ನಲ್ಲಿ ಸಂಚಲನ ಸೃಷ್ಟಿ ಆಗಿದೆ. ಕೆಳ ಹಂತದ ಕೋರ್ಟ್ ಅವರಿಗೆ 14 ದಿನ ನ್ಯಾಯಂಗ ಬಂಧನ ವಿಧಿಸಿದರೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಕೋರ್ಟ್ ಪ್ರತಿ ಜೈಲು ಸೇರದ ಹಿನ್ನೆಲೆಯಲ್ಲಿ ಅವರ ಬಿಡುಗಡೆ ತಡವಾಗಿದೆ. ಅಲ್ಲು ರಾತ್ರಿಯಿಡೀ ಜೈಲಿನಲ್ಲೇ ಕಳೆದಿದ್ದಾರೆ. ಮುಂಜಾನೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ