ಭಗವದ್ಗೀತೆ, ಆಪನ್​ಹೈಮರ್ ಮತ್ತು ಹಿಂದೆಂದೂ ನೋಡಿರದಂಥಹಾ ಸಿನಿಮಾ

J Robert Oppenheimer: ವಿನಾಶಕಾರಿ ಅಟೊಮಿಕ್ ಬಾಂಬ್ ಸಿಡಿಯುವುದು ಕಂಡು ಭಗವದ್ಗೀತೆ ಶ್ಲೋಕ ನೆನಪಿಸಿಕೊಂಡಿದ್ದ ವಿಜ್ಞಾನಿಯ ಬಗ್ಗೆ ಬರುತ್ತಿದೆ ಸಿನಿಮಾ.

ಭಗವದ್ಗೀತೆ, ಆಪನ್​ಹೈಮರ್ ಮತ್ತು ಹಿಂದೆಂದೂ ನೋಡಿರದಂಥಹಾ ಸಿನಿಮಾ
ಆಪನ್​ಹೈಮರ್
Follow us
ಮಂಜುನಾಥ ಸಿ.
|

Updated on: Jul 16, 2023 | 5:32 PM

”ನಾನೇ ಮರಣ, ನಾನೇ ಜಗತ್ ಸಂಹಾರಿ” ಭಗವದ್ಗೀತೆಯಲ್ಲಿನ ಈ ಸಾಲನ್ನು 1945 ರ ಜುಲೈ ತಿಂಗಳಲ್ಲಿ ಅಮೆರಿಕದ ಅಣುವಿಜ್ಞಾನಿ ಜೆ ರಾಬರ್ಟ್ ಆಪನ್​ಹೈಮರ್ (Oppenheimer) ಹೇಳಿದ್ದರು. ಅದಾದ ಮೂರು ವಾರಗಳ ಒಳಗಾಗಿ ಆಫನ್​ಹೈಮರ್ ಅವರೇ ಕಂಡುಹಿಡಿದಿದ್ದ ಅಣುಬಾಂಬ್ ಜಪಾನಿನ ಹಿರೋಷಿಮಾ ಮೇಲೆ ಬಿದ್ದು ವಿಧ್ವಂಸವನ್ನು ಸೃಷ್ಟಿಸಿತು ಅದಾದ ಮೂರೇ ದಿನದ ಬಳಿಕ ಮತ್ತೆ ನಾಗಸಾಕಿಯ ಮೇಲೆ ಬಾಂಬು ಬಿತ್ತು. ಮಾನವ ಇತಿಹಾಸದ ಅತ್ಯಂತ ಕ್ರೂರ, ಅಮಾನುಷ, ಅಮಾಯಕರ ಮಾರಣಹೋಮ ನಡೆದು ಹೋಯ್ತು.

ಸಂಸ್ಕೃತ ಕಲಿತಿದ್ದ ವಿಜ್ಞಾನಿ ಆಪನ್​ಹೈಮರ್​ ಭಗವದ್ಗೀತೆಯನ್ನು ಮೂಲ ಸಂಸ್ಕೃತದಲ್ಲೇ ಓದಿ ತಿಳಿದಿದ್ದರು. 1945ರ ಇದೇ ದಿನ (ಜುಲೈ 16) ಮೊದಲ ಬಾರಿಗೆ ಅಣು ಬಾಂಬ್ ಪ್ರಯೋಗಾತ್ಮಕ ಪರೀಕ್ಷೆಯನ್ನು ಕಣ್ಣಾರೆ ಕಂಡು ಅದು ಸೃಷ್ಟಿಸಬಹುದಾದ ವಿನಾಶದ ಕುರಿತು ಆಪನ್​ಹೈಮರ್ ಅಂದು ಭಗವದ್ಗೀತೆಯ ”ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ ಋತೇಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇವಸ್ಥಿತಾಃ ಪ್ರತ್ಯನೀಕೇಷು ಯೋಧಾಃ” ಶ್ಲೋಕವನ್ನು ಸರಳವಾಗಿ ”ನಾನೇ ಮರಣ, ನಾನೇ ಲೋಕ ಸಂಹಾರಿ” ಎಂದಿದ್ದರು.

ಹಲವರ ಪಾಲಿನ ಹೀರೋ, ಹಲವರ ಪಾಲಿಗೆ ಸಾವಿನ ವ್ಯಾಪಾರಿ ಎರಡೂ ಆಗಿರುವ ಆಪನ್​ಹೈಮರ್​ ಬಗ್ಗೆ ಇದೀಗ ಸಿನಿಮಾ ಒಂದು ನಿರ್ಮಾಣವಾಗಿದೆ. ಜಗತ್ತಿನ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ಕ್ರಿಸ್ಟೊಫರ್ ನೋಲನ್, ಆಪನ್​ಹೈಮರ್​ ಅಣುಬಾಂಬ್ ಸಂಶೋಧಿಸಿ, ಅದರ ಪರೀಕ್ಷಾತ್ಮಕ ಪ್ರಯೋಗ ಮಾಡಿದ ಘಟನೆಯನ್ನು ತೆರೆಗೆ ತಂದಿದ್ದಾರೆ. ಸಿನಿಮಾದಲ್ಲಿ ಅಣುಬಾಂಬ್ ತಯಾರಿಸುವ ಅವಶ್ಯಕತೆ ನಿರ್ಮಾಣವಾಗಿದ್ದು ಹೇಗೆ? ವಿನಾಶಕಾರಿ ಅಣುಬಾಂಬ್ ನಿರ್ಮಾಣದ ಅವಶ್ಯಕತೆ, ಬಾಂಬ್ ತಯಾರಿಕೆಯಲ್ಲಿ ಎದುರಾದ ಸಂಕಷ್ಟ, ಆಪನ್​ಹೈಮರ್​ ಹಾಗೂ ಅವರ ಸುತ್ತಲೂ ಇದ್ದವರ ಮನಸ್ಥಿತಿ, ಪ್ರಯೋಗದ ಬಳಿಕ ಮನಸ್ಥಿತಿ, ಎದುರಿಸಬೇಕಾದ ವಿಮರ್ಶೆ ಇನ್ನಿತರೆ ಅಂಶಗಳನ್ನು ನೋಲನ್ ತಮ್ಮ ಸಿನಿಮಾದಲ್ಲಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ‘ಆಪನ್​ಹೈಮರ್’ ಎಂದೇ ಹೆಸರಿಟ್ಟಿದ್ದಾರೆ.

ಇದನ್ನೂ ಓದಿ:ಮಹಾ ಮುಷ್ಕರಕ್ಕೆ ತತ್ತರಿಸಿದ ಹಾಲಿವುಡ್​; ಬಿಗ್ ಬಜೆಟ್ ಚಿತ್ರದ ನಿರ್ಮಾಪಕರಿಗೆ ಆತಂಕ

ಸಿನಿಮಾದಲ್ಲಿ ಆಪನ್​ಹೈಮರ್ ಪಾತ್ರದಲ್ಲಿ ನಟಿಸಿರುವ ಸಿಲಿಯಾನ್ ಮರ್ಫಿ ಸಹ ತಾವು ಆಪನ್​ಹೈಮರ್ ಪಾತ್ರಕ್ಕೆ ತಯಾರಾಗುವ ಹಂತದಲ್ಲಿ ಭಗವದ್ಗೀತೆಯನ್ನು ಓದಿಕೊಂಡೆ ಎಂದು ಹೇಳಿದ್ದರು. ವಿಜ್ಞಾನಿ ಆಪನ್​ಹೈಮರ್ ಭಗವದ್ಗೀತೆಯನ್ನು ಮಾತ್ರವೇ ಅಲ್ಲದೆ ಶಾಸ್ತ್ರಗಳ, ಉಪನಿಷತ್ತುಗಳ ಅಧ್ಯಯನ ಮಾಡಿದ್ದರು. ಭಾರತೀಯ ಖಗೋಲ ವಿಜ್ಞಾನದ ಬಗ್ಗೆ ಅತೀವ ಆಸಕ್ತಿ ಆಪನ್​ಹೈಮರ್ ಅವರಿಗಿತ್ತು.

‘ಆಪನ್​ಹೈಮರ್’ ವಿಶ್ವ ಸಿನಿಮಾ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ನೆಡಲು ಸಹ ಸಜ್ಜಾಗಿದೆ. ಈವರೆಗಿನ ಅತ್ಯುತ್ತಮ ಗುಣಮಟ್ಟದ ದೃಶ್ಯಗಳುಳ್ಳ ಸಿನಿಮಾ ಆಪನ್​ಹೈಮರ್​ ಆಗಿದೆ. ಮಾನವನ ಬರಿ ಕಣ್ಣುಗಳು ನೋಡುವಷ್ಟರ ಮಟ್ಟಿಗಿನ ಗುಣಮಟ್ಟದ, ಕ್ಲಿಯರ್, ಕ್ಲಾರಿಟಿ ಹೊಂದಿರುವ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ಸೆರೆ ಹಿಡಿದಿದ್ದಾರೆ. ಇದಕ್ಕಾಗಿಯೆಂದೇ ವಿಶೇಷ ಐಮ್ಯಾಕ್ಸ್ ಕ್ಯಾಮೆರಾ ಹಾಗೂ ಫಿಲಂಗಳನ್ನು ಕ್ರಿಸ್ಟೊಫರ್ ಬಳಸಿದ್ದಾರೆ.

ಈವರೆಗೆ ಅಸ್ಥಿತ್ವದಲ್ಲೇ ಇಲ್ಲದ 70 ಎಂಎಂ ಕಪ್ಪು-ಬಿಳುಪು ಹಾಗೂ ಕಲರ್ ಫಿಲಂ ರೀಲುಗಳನ್ನು ಉತ್ಪಾದಿಸಿ ವಿಶೇಷ ಐಮ್ಯಾಕ್ಸ್ ಕ್ಯಾಮೆರಾ ಬಳಸಿ ಸಿನಿಮಾವನ್ನು ಸೆರೆ ಹಿಡಿಯಲಾಗಿದ್ದು, ಅದ್ಭುತವಾದ ಸಿನಿಮ್ಯಾಟಿಕ್ ಅನುಭವವನ್ನು ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದೆ ಚಿತ್ರತಂಡ. ಸಿನಿಮಾದ ಸಂಪೂರ್ಣ ಅನುಭವ ಪಡೆಯಲು ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿಯೇ ಸಿನಿಮಾ ನೋಡಿ ಎಂದು ಕ್ರಿಸ್ಟೊಫರ್ ನೋಲನ್ ಮನವಿ ಮಾಡಿದ್ದಾರೆ. ಸಿನಿಮಾ ಜುಲೈ 21ಕ್ಕೆ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್