‘ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರ ನಂಬಬೇಡಿ’; ಹುಡುಗರಿಗೆ ಶಕ್ತಿಮಾನ್ ಕೊಟ್ರು ಟಿಪ್ಸ್

ಇನ್​ಸ್ಟಾಗ್ರಾಮ್​, ಫೇಸ್​ಬುಕ್​ನಲ್ಲಿ ಹಲವು ಖಾತೆಗಳು ಹುಟ್ಟಿಕೊಂಡಿವೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳು ಇರುತ್ತವೆ. ಬೆತ್ತಲೆ ದೇಹ ನೋಡಬೇಕಾದರೆ ಹಣ ಪೇ ಮಾಡಿ ವಿಡಿಯೋ ಕಾಲ್ ಮಾಡಿ ಎಂದು ಆ ಖಾತೆಗಳಿಗೆ ಕ್ಯಾಪ್ಶನ್ ಇರುತ್ತದೆ.

‘ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರ ನಂಬಬೇಡಿ’; ಹುಡುಗರಿಗೆ ಶಕ್ತಿಮಾನ್ ಕೊಟ್ರು ಟಿಪ್ಸ್
ಮುಕೇಶ್
TV9kannada Web Team

| Edited By: Rajesh Duggumane

Aug 10, 2022 | 4:14 PM

ಇದು ಸೋಶಿಯಲ್ ಮೀಡಿಯಾ ಕಾಲ. ಯಾರು ಯಾವಾಗ ಹೇಗೆ ಬೇಕಿದ್ದರೂ ಪರಿಚಯ ಆಗಬಹುದು. ಅದೇ ರೀತಿ ಯಾರು ಹೇಗೆ ಬೇಕಿದ್ದರೂ ಮೋಸಕ್ಕೆ ಒಳಗಾಗಬಹುದು. ಅದರಲ್ಲೂ ಹುಡುಗಿಯರನ್ನು ಇಟ್ಟುಕೊಂಡು ಹನಿಟ್ರ್ಯಾಪ್ ಮಾಡುವ ಅನೇಕರಿದ್ದಾರೆ. ಈ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಶಕ್ತಿಮಾನ್ ಅಲಿಯಾಸ್ ಮುಕೇಶ್ ಖನ್ನಾ (Mukesh Khanna) ಹುಡುಗರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರನ್ನು ನಂಬಲೇಬೇಡಿ ಎಂದಿದ್ದಾರೆ ಮುಕೇಶ್.

ಇನ್​ಸ್ಟಾಗ್ರಾಮ್​, ಫೇಸ್​ಬುಕ್​ನಲ್ಲಿ ಹಲವು ಖಾತೆಗಳು ಹುಟ್ಟಿಕೊಂಡಿವೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳು ಇರುತ್ತವೆ. ಬೆತ್ತಲೆ ದೇಹ ನೋಡಬೇಕಾದರೆ ಹಣ ಪೇ ಮಾಡಿ ವಿಡಿಯೋ ಕಾಲ್ ಮಾಡಿ ಎಂದು ಆ ಖಾತೆಗಳಿಗೆ ಕ್ಯಾಪ್ಶನ್ ಇರುತ್ತದೆ. ಈ ರೀತಿಯ ಜನರನ್ನು ನಂಬಲೇಬಾರದು ಎಂಬುದು ಮುಕೇಶ್ ಅವರ ಎಚ್ಚರಿಕೆ. ಅವರ ಈ ಹೇಳಿಕೆಯನ್ನು ಅನೇಕರು ಬೆಂಬಲಿಸಿದ್ದಾರೆ.

ಮುಕೇಶ್ ಅವರು ತಮ್ಮ ಯೂಟ್ಯೂಬ್​ ಚಾನೆಲ್​​ನಲ್ಲಿ ವಿಡಿಯೋ ಒಂದನ್ನು ಅಪ್​​ಲೋಡ್ ಮಾಡಿದ್ದಾರೆ. ‘ಅಂತಹ ಹುಡುಗಿಯರು ನಿಮಗೂ ಆಮಿಷ ಒಡ್ಡಬಹುದು’ ಎಂದು ಮುಕೇಶ್ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ. ‘ಯಾವುದಾದರೂ ಹುಡುಗಿ ಬಂದು ನಿಮ್ಮ ಜತೆ ನನಗೆ ಸೆ*ಕ್ಸ್ ಮಾಡಬೇಕು ಎಂದರೆ ಆಕೆ ಸೆಕ್ಸ್ ದಂಧೆ ನಡೆಸುತ್ತಿದ್ದಾಳೆ ಎಂದೇ ಅರ್ಥ. ಸಾಮಾನ್ಯ ಹುಡುಗಿಯರು ಈ ನಾಗರಿಕ ಸಮಾಜದಲ್ಲಿ ಆ ರೀತಿ ಎಂದಿಗೂ ಹೇಳುವುದಿಲ್ಲ’ ಎಂದಿದ್ದಾರೆ ಅವರು. ಈ ಮೂಲಕ ಸೋಶಿಯಲ್ ಮೀಡಿಯಾ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

‘ನನಗೆ ವಾಟ್ಸ್​​ಆ್ಯಪ್​ನಲ್ಲೂ ಈ ರೀತಿಯ ಮೆಸೇಜ್​ಗಳು ಬರುತ್ತವೆ. ಆ ರೀತಿಯ ಹುಡುಗಿಯರು ಈಗಲೂ ಇದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ತೊಂದರೆ ಕಟ್ಟಿಟ್ಟಬುತ್ತಿ’ ಎಂದು ಆತಂಕ ಹೊರಹಾಕಿದ್ದಾರೆ ಅವರು. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಮುಕೇಶ್​ ಹೇಳಿಕೆಯನ್ನು ಅನೇಕರು ಒಪ್ಪಿದ್ದಾರೆ.

ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ಇದನ್ನೂ ಓದಿ

1997ರ ಸಮಯದಲ್ಲಿ ‘ಶಕ್ತಿಮಾನ್​’ ಹೆಸರಿನ ಧಾರಾವಾಹಿ ಪ್ರಸಾರವಾಗೋಕೆ ಆರಂಭವಾಯಿತು. ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ರಕ್ಷಿಸುವ ಕೆಲಸವನ್ನು ಮಾಡುವವನೇ ಶಕ್ತಿಮಾನ್​. ಈ ಧಾರಾವಾಹಿ ಮಕ್ಕಳಿಗೆ ಸಖತ್​ ಥ್ರಿಲ್​ ನೀಡಿತ್ತು. ಹೀಗಾಗಿ ಈ ‘ಶಕ್ತಿಮಾನ್​’ ಸಾಕಷ್ಟು ಫೇಮಸ್​ ಆಯಿತು. ಒಟ್ಟೂ, 520 ಕಂತುಗಳು ಪ್ರಸಾರವಾದವು. ಶಕ್ತಿಮಾನ್ ಪಾತ್ರವನ್ನು ಮುಕೇಶ್ ಮಾಡಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada