ಹಸಿ-ಬಿಸಿ ದೃಶ್ಯಗಳಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ; ತೆಲುಗು ಚಿತ್ರದ ವಿರುದ್ಧ ದೂರು ದಾಖಲು

ಹಸಿ-ಬಿಸಿ ದೃಶ್ಯಗಳಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ; ತೆಲುಗು ಚಿತ್ರದ ವಿರುದ್ಧ ದೂರು ದಾಖಲು
ಹಸಿ-ಬಿಸಿ ದೃಶ್ಯಗಳಿಂದ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ; ತೆಲುಗು ಚಿತ್ರದ ಮೇಲೆ ದೂರು ದಾಖಲು

ವಿವಾದಕ್ಕೆ ಸಂಬಂಧಿಸಿದಂತೆ ‘ಇಪ್ಪುಡು ಕಾಕ ಇಂಕೆಪ್ಪುಡು’ ಚಿತ್ರದ ನಿರ್ದೇಶಕ ಯುಗಂಧರ್​ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

TV9kannada Web Team

| Edited By: Madan Kumar

Aug 04, 2021 | 3:48 PM


ಇತ್ತೀಚಿನ ದಿನಗಳಲ್ಲಿ ಹಲವು ಸಿನಿಮಾಗಳಿಂದ ಹಿಂದೂಗಳ (Hindu) ಧಾರ್ಮಿಕ ಭಾವನೆಗೆ ನೋವುಂಟುಮಾಡುವ ಕೆಲಸ ಆಗುತ್ತಿದೆ. ಓಟಿಟಿ ಪ್ಲಾಟ್​ಫಾರ್ಮ್​ಗಳ ಮೂಲಕ ಸಿನಿಮಾ ಬಿಡುಗಡೆ ಮಾಡುವ ಟ್ರೆಂಡ್​ ಹೆಚ್ಚಾದಾಗಿನಿಂದ ಈ ಹಾವಳಿ ಶುರುವಾಗಿದೆ. ಇತ್ತೀಚೆಗೆ ಕೆಲವು ವೆಬ್​ ಸಿರೀಸ್​ಗಳು ಹಿಂದೂಗಳ ಕೆಂಗಣ್ಣಿಗೆ ಗುರಿ ಆಗಿದ್ದವು. ಈಗ ತೆಲುಗು ಚಿತ್ರವೊಂದು ಅಂಥದ್ದೇ ತಪ್ಪು ಮಾಡಿದೆ. ‘ಇಪ್ಪುಡು ಕಾಕ ಇಂಕೆಪ್ಪುಡು’ (Ippudu Kaaka Inkeppudu) ಸಿನಿಮಾ ತಂಡದ ಮೇಲೆ ವಿಶ್ವ ಹಿಂದೂ ಪರಿಷತ್​ (VHP) ಸೇರಿದಂತೆ ಕೆಲವು ಸಂಘಟನೆಗಳು ಗರಂ ಆಗಿವೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಪೊಲೀಸ್ ಠಾಣೆಯಲ್ಲಿ​ ದೂರು ನೀಡಲಾಗಿದೆ.

ಇತ್ತೀಚೆಗಷ್ಟೇ ‘ಇಪ್ಪುಡು ಕಾಕ ಇಂಕೆಪ್ಪುಡು’ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಇದರಲ್ಲಿ ನಾಯಕ-ನಾಯಕಿ ನಡುವೆ ಸಾಕಷ್ಟು ಹಸಿಬಿಸಿ ದೃಶ್ಯಗಳನ್ನು ಇರಿಸಲಾಗಿದೆ. ಪಡ್ಡೆಗಳನ್ನೇ ಟಾರ್ಗೆಟ್​ ಆಗಿಟ್ಟುಕೊಂಡು ನಿರ್ಮಿಸಿದಂತಿರುವ ಈ ಸಿನಿಮಾದ ಟ್ರೇಲರ್​ನಲ್ಲಿ ಕಿಸ್ಸಿಂಗ್​ ದೃಶ್ಯಗಳು ಹೇರಳವಾಗಿವೆ. ಅದರಲ್ಲೇನು ಸಮಸ್ಯೆ? ಹಿನ್ನೆಲೆಯಲ್ಲಿ ದೇವರ ಕೀರ್ತನೆ ಮೊಳಗುತ್ತಿರುವ ಸಂದರ್ಭದಲ್ಲಿ ಇಂಥ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಈ ಸಿನಿಮಾದಿಂದ ಶ್ರೀಕೃಷ್ಣ ಪರಮಾತ್ಮ ಮತ್ತು ತುಳಸಿ ಮಾತೆಗೆ ಅಪಮಾನ ಆಗಲಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ವನಸ್ತಲಿಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯುಗಂಧರ್​ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ‘ಟ್ರೇಲರ್​ ರಿಲೀಸ್​ ಮಾಡುವಾಗ ತಪ್ಪಾಗಿದೆ. ಒಂದು ರೊಮ್ಯಾಂಟಿಕ್​ ದೃಶ್ಯದಲ್ಲಿ ಭಜಗೋವಿಂದಂ ಹಾಡು ಬಂದಿದೆ. ಆದರೆ ಸಿನಿಮಾದಲ್ಲಿ ಬೇರೆ ಸನ್ನಿವೇಶದಲ್ಲಿ ಬರುತ್ತದೆ. ಟ್ರೇಲರ್​ ರಿಲೀಸ್​ ಆಗುವುದಕ್ಕೂ ಮುನ್ನ ನಾನು ಅದನ್ನು ಗಮನಿಸಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಅಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುತ್ತೇವೆ’ ಎಂದು ಅವರು ಹೇಳಿದ್ದಾರೆ.

(‘ಇಪ್ಪುಡು ಕಾಕ ಇಂಕೆಪ್ಪುಡು’ ಟ್ರೇಲರ್​)

‘ಇಪ್ಪುಡು ಕಾಕ ಇಂಕೆಪ್ಪುಡು’ ಸಿನಿಮಾದಲ್ಲಿ ನಮ್ರತಾ ದಾರೆಕರ್​, ಹಸ್ವಂತ್​ ವಂಗಾ ಮುಂತಾದವರು ನಟಿಸಿದ್ದಾರೆ. ಆ.6ರಂದು ಈ ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ:

ಕರೀನಾ ಕಪೂರ್​ ಸೀತೆ ಪಾತ್ರ ಮಾಡುವಂತಿಲ್ಲ; ಇದಕ್ಕೂ ಸೈಫ್​ ಅಲಿ ಖಾನ್​ಗೂ ಏನು ಸಂಬಂಧ?

ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್​ ಅಲಿ ಖಾನ್​; ಈ ಪೋಸ್ಟರ್​ನಲ್ಲಿ ಇರುವ ವಿವಾದ ಏನು?

Follow us on

Related Stories

Most Read Stories

Click on your DTH Provider to Add TV9 Kannada