‘ವಾರಣಾಸಿ’ ಸಿನಿಮಾ ಶೂಟಿಂಗ್ ನೋಡುವ ಆಸೆ ವ್ಯಕ್ತಪಡಿಸಿದ ‘ಟೈಟಾನಿಕ್’ ನಿರ್ದೇಶಕ
James Cameron-SS Rajamouli: ‘ಟೈಟಾನಿಕ್’, ‘ಅವತಾರ್’, ‘ದಿ ಟರ್ಮಿನೇಟರ್’, ‘ರ್ಯಾಂಬೊ’, ‘ಟ್ರು ಲೈಸ್’, ‘ಅವತಾರ್’ ಅಂಥಹಾ ವಿಶ್ವ ಜನಪ್ರಿಯ ಬ್ಲಾಕ್ ಬಸ್ಟರ್ಗಳನ್ನು ನೀಡಿರುವ ಆಸ್ಕರ್ ವಿಜೇತ ನಿರ್ದೇಶಕ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅವರು ರಾಜಮೌಳಿಯ ನಿರ್ದೇಶನವನ್ನು ಮೆಚ್ಚಿಕೊಂಡಿದ್ದು, ‘ವಾರಣಾಸಿ’ ಸಿನಿಮಾ ಸೆಟ್ಗೆ ಭೇಟಿ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ.

ರಾಜಮೌಳಿ (Rajamouli) ಭಾರತದ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ ‘ಆರ್ಆರ್ಆರ್’ ಸಿನಿಮಾದ ಬಳಿಕ ಅವರೀಗ ಪ್ಯಾನ್ ವರ್ಲ್ಡ್ ನಿರ್ದೇಶಕ ಆಗಿದ್ದಾರೆ. ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ರಾಜಮೌಳಿಯ ಸಿನಿಮಾಕ್ಕಾಗಿ ಕಾಯುವಂತಾಗಿದೆ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ವಿಶ್ವ ಸಿನಿಮಾದ ದಿಗ್ಗಜ ನಿರ್ದೇಶಕರುಗಳು ಸಹ ರಾಜಮೌಳಿಯ ನಿರ್ದೇಶನ ಪ್ರತಿಭೆಯನ್ನು ಕೊಂಡಾಡುತ್ತಿದ್ದು, ಅವರ ಸಿನಿಮಾ ನೋಡಲು, ರಾಜಮೌಳಿ ಸಿನಿಮಾ ನಿರ್ದೇಶಿಸುವ ಟೆಕ್ನಿಕ್ ಅನ್ನು ಹತ್ತಿರದಿಂದ ನೋಡುವ, ಕಲಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶ್ವ ಸಿನಿಮಾದ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಜೇಮ್ಸ್ ಕ್ಯಾಮರನ್, ಇದೀಗ, ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಸೆಟ್ಗೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಟೈಟಾನಿಕ್’, ‘ಅವತಾರ್’, ‘ದಿ ಟರ್ಮಿನೇಟರ್’, ‘ರ್ಯಾಂಬೊ’, ‘ಟ್ರು ಲೈಸ್’, ‘ಅವತಾರ್’ ಅಂಥಹಾ ವಿಶ್ವ ಜನಪ್ರಿಯ ಬ್ಲಾಕ್ ಬಸ್ಟರ್ಗಳನ್ನು ನೀಡಿರುವ ಆಸ್ಕರ್ ವಿಜೇತ ನಿರ್ದೇಶಕ ನಿರ್ದೇಶಕ ಜೇಮ್ಸ್ ಕ್ಯಾಮರನ್ ಅವರು ರಾಜಮೌಳಿಯ ನಿರ್ದೇಶನವನ್ನು ಮೆಚ್ಚಿಕೊಂಡಿದ್ದು, ‘ಆರ್ಆರ್ಆರ್’ ಸಿನಿಮಾ ವೀಕ್ಷಿಸಿ, ಹಾಲಿವುಡ್ಗೆ ಬಂದು ಸಿನಿಮಾ ಮಾಡುವಂತೆ ರಾಜಮೌಳಿಗೆ ಆಫರ್ ಸಹ ನೀಡಿದ್ದರು.
ಇದೀಗ ಜೇಮ್ಸ್ ಕ್ಯಾಮರನ್ ಅವರ ವಿಶ್ವ ವಿಖ್ಯಾತ ‘ಅವತಾರ್’ ಸಿನಿಮಾ ಸರಣಿಯ ಮೂರನೇ ಸಿನಿಮಾ ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ರಾಜಮೌಳಿ ಅವರಿಗೆ ಈಗಾಗಲೇ ಜೇಮ್ಸ್ ಕ್ಯಾಮರನ್ ವಿಶೇಷ ಪ್ರದರ್ಶನ ಹಾಕಿ ತೋರಿಸಿದ್ದಾರೆ. ಬಳಿಕ ರಾಜಮೌಳಿ ಮತ್ತು ಜೇಮ್ಸ್ ಕ್ಯಾಮರನ್ ಅವರು ‘ಅವತಾರ್: ಫೈರ್ ಆಂಡ್ ಆಶ್’ ಸಿನಿಮಾ ಕುರಿತು ವಿಶೇಷ ಸಂವಾದ ಸಹ ನಡೆಸಿದರು. ಈ ವೇಳೆ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದ ದಿಗ್ಗಜ ನಿರ್ದೇಶಕ ಜೇಮ್ಸ್ ಕ್ಯಾಮರನ್, ತಮಗೆ ‘ವಾರಣಾಸಿ’ ಸಿನಿಮಾ ಸೆಟ್ಗೆ ಬರುವ ಆಸೆಯಿದೆಯೆಂದು ಹೇಳಿದರು.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ಹೀರೋಗೆ ಅವಕಾಶ ಕೊಟ್ಟ ರಾಜಮೌಳಿ
‘ನೀವು ‘ವಾರಣಾಸಿ’ ಸಿನಿಮಾನಲ್ಲಿ ಬ್ಯುಸಿ ಆಗಿರಬಹುದು. ನನಗೆ ನಿಮ್ಮ ಸಿನಿಮಾ ಸೆಟ್ಗೆ ಬರುವ ಬಯಕೆ ಇದೆ. ಏನಾದರೂ ವಿಶೇಷವಾದ ಸೀಕ್ವೆನ್ಸ್ನ ಶೂಟಿಂಗ್ ಇದ್ದಾಗ ದಯವಿಟ್ಟು ನನ್ನನ್ನು ಕರೆಯಿರಿ ನಾನು ಬರುತ್ತೇನೆ. ಅದರಲ್ಲೂ ನೀವು ಪ್ರಾಣಿಗಳನ್ನು ಚೆನ್ನಾಗಿ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತೀರಿ, ಆ ರೀತಿಯ ಸೀಕ್ವೆನ್ಸ್ಗಳು ಇದ್ದಾಗ ಕರೆಯಿರಿ, ನಮಗೆ ನಿಮ್ಮ ಕೆಲಸದ ಟೆಕ್ಸಿಕ್ ನೋಡುವ ಆಸೆಯಿದೆ’ ಎಂದರು. ಜೇಮ್ಸ್ ಅವರ ಮಾತಿಗೆ ಖುಷಿ ವ್ಯಕ್ತಪಡಿಸಿದ ರಾಜಮೌಳಿ, ‘ನೀವು ವ್ಯಕ್ತಪಡಿಸುತ್ತಿರುವ ನಂಬಿಕೆಗೆ, ನನ್ನ ಪ್ರತಿಭೆಗೆ ನೀವು ಕೊಡುತ್ತಿರುವ ಗೌರವಕ್ಕೆ ಋಣಿ. ಖಂಡಿತ ನಿಮ್ಮನ್ನು ಹೈದರಾಬಾದ್ಗೆ ಕರೆಸುತ್ತೇನೆ’ ಎಂದರು ರಾಜಮೌಳಿ.
ಮುಂದುವರೆದು ಮಾತನಾಡಿದ ಜೇಮ್ಸ್ ಕ್ಯಾಮರನ್, ‘ನಿಮ್ಮ ಶೂಟಿಂಗ್ ಸೆಟ್ಗೆ ಕರೆಯಿರಿ, ನನಗೆ ಒಂದು ಕ್ಯಾಮೆರಾ ಕೊಟ್ಟು ಬಿಡಿ, ನಾನು ನಿಮಗಾಗಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿ ಕೊಡುವೆ. ನನಗೆ ಕ್ಯಾಮೆರಾ ಹ್ಯಾಂಡಲ್ ಮಾಡುವುದು ಬಹಳ ಇಷ್ಟದ ಕೆಲಸ, ನಿಮಗಾಗಿ ನಾನು ಕೆಲವು ದೃಶ್ಯಗಳನ್ನು ಚಿತ್ರೀಕರಿಸಿ ಕೊಡುತ್ತೇನೆ’ ಎಂದರು. ಅದಕ್ಕೂ ಸಹ ರಾಜಮೌಳಿ ಅವರು ಖಂಡಿತ ಸರ್ ಎಂದಿದ್ದಾರೆ. ಬಹುಷಃ ‘ವಾರಣಾಸಿ’ ಸಿನಿಮಾದ ಮುಂದಿನ ಇವೆಂಟ್ಗೆ ಅತಿಥಿಯಾಗಿ ಜೇಮ್ಸ್ ಕ್ಯಾಮರನ್ ಬರುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




