ಸೋಶಿಯಲ್​ ಮೀಡಿಯಾದಲ್ಲಿ ಪ್ರಿಯಕರನನ್ನು ಪರಿಚಯಿಸಿದ ಕನ್ನಡದ ಕಿರುತೆರೆ ನಟಿ

ಅಭಿಮಾನಿಗಳಿಗೆ ಬಾಯ್​ ಫ್ರೆಂಡ್​ಅನ್ನು ಪರಿಚಯಿಸಿದ್ದು ಬೇರಾರು ಅಲ್ಲ ಕಿರುತೆರೆ ನಟಿ ಹಾಗೂ ಕನ್ನಡ ಬಿಗ್​ ಬಾಸ್​ ಸೀಸನ್​-4 ರ ಸ್ಪರ್ಧಿ ಕಾವ್ಯಾ ಶಾಸ್ತ್ರಿ. ಅವರು ತಮಗೆ ಬಾಯ್​ಫ್ರೆಂಡ್​ ಇರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಪ್ರಿಯಕರನನ್ನು ಪರಿಚಯಿಸಿದ ಕನ್ನಡದ ಕಿರುತೆರೆ ನಟಿ
ಬಾಯ್​ಫ್ರೆಂಡ್​ ಜತೆ ಕಾವ್ಯಾ ಶಾಸ್ತ್ರಿ
Rajesh Duggumane

| Edited By: Madan Kumar

Mar 18, 2021 | 4:26 PM

ಸಾಕಷ್ಟು ಸೆಲೆಬ್ರಿಟಿಗಳು ಪ್ರೀತಿಯಲ್ಲಿದ್ದರೂ ಪ್ರಿಯಕರ/ ಪ್ರಿಯತಮೆಯನ್ನು ಅಭಿಮಾನಿಗಳಿಗೆ ಪರಿಚಯಿಸಲು ಹಿಂದೇಟು ಹಾಕುತ್ತಾರೆ. ಕದ್ದು-ಮುಚ್ಚಿ ಡೇಟ್​ ಮಾಡುತ್ತಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ಆ ಬಗ್ಗೆ ಮೌನ ಮುರಿಯುವುದಿಲ್ಲ. ಆದರೆ, ಕೆಲವರು ಹಾಗಲ್ಲ. ಇವರೇ ನನ್ನ ಬಾಯ್​​ಫ್ರೆಂಡ್​/ಗರ್ಲ್​ಫ್ರೆಂಡ್​ ಎಂದು ಧೈರ್ಯದಿಂದ ಹೇಳಿಕೊಳ್ಳುತ್ತಾರೆ. ಕನ್ನಡದ ಕಿರುತೆರೆ ನಟಿ ಕೂಡ ಈಗ ಪ್ರಿಯಕರನ ಬಗ್ಗೆ ಹೇಳಿಕೊಂಡಿದ್ದಾರೆ. ಅಭಿಮಾನಿಗಳಿಗೆ ಬಾಯ್​ ಫ್ರೆಂಡ್​ಅನ್ನು ಪರಿಚಯಿಸಿದ್ದು ಬೇರಾರು ಅಲ್ಲ, ಕಿರುತೆರೆ ನಟಿ ಹಾಗೂ ಕನ್ನಡ ಬಿಗ್​ ಬಾಸ್​ ಸೀಸನ್​-4 ರ ಸ್ಪರ್ಧಿ ಕಾವ್ಯಾ ಶಾಸ್ತ್ರಿ. ಅವರು ತಮಗೆ ಬಾಯ್​ಫ್ರೆಂಡ್​ ಇರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇವರು ನನ್ನ ಕಾಲೇಜು ಫ್ರೆಂಡ್​. 15 ವರ್ಷಗಳ ಕಾಲ ನನಗೆ ಅವರಿಗೆ ಸಂಪರ್ಕ ಇರಲಿಲ್ಲ. ಆದರೆ, ಈಗ ಈತ ಪವಾಡಗಳಲ್ಲಿ ನಂಬಿಕೆ ಬರುವಂತೆ ಮಾಡಿದ್ದಾರೆ. ನನ್ನ ಆಶಾಕಿರಣ ಆಗಿರುವ ಸುಜಯ್​ಗೆ ಧನ್ಯವಾದ. ಹುಟ್ಟು ಹಬ್ಬದ ಶುಭಾಶಯ ಮತ್ತು ಲವ್​ ಯೂ ಎಂದು ಕಾವ್ಯಾ ಬರೆದುಕೊಂಡಿದ್ದಾರೆ.

ಇಷ್ಟೇ ಅಲ್ಲ, ತಾವು ಸಿಂಗಲ್​ ಅಲ್ಲ. ಸುಜಯ್​ ಜತೆ ಮಿಂಗಲ್​ ಆಗಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ಸಿಂಗಲ್ಲಾ ಎಂದು ಪ್ರಶ್ನೆ ಮಾಡಿದವರಿಗೆ ಇಲ್ಲಿದೆ ಉತ್ತರ ಎಂದು ಹೇಳುವ ಮೂಲಕ ತಾವು ಕಮಿಟೆಡ್​ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ಸದ್ಯ, ಈ ವಿಚಾರ ತಿಳಿದ ಅಭಿಮಾನಿಗಳು ಸಾಕಷ್ಟು ಖುಷಿಗೊಂಡಿದ್ದಾರೆ. ಅಕ್ಕ ಈ ವಿಚಾರ ತಿಳಿದು ಸಾಕಷ್ಟು ಖುಷಿ ಆಯಿತು. ನೀವಿಬ್ಬರು ಹೀಗೆ ಖುಷಿಯಿಂದ ಇರಿ. ಕಂಗ್ರಾಜ್ಯುಲೇಷನ್​ ಎಂದು ಬರೆದುಕೊಂಡಿದ್ದಾರೆ. ಕಾವ್ಯಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್ ನಾಲ್ಕರಲ್ಲಿ ಸ್ಪರ್ಧಿಯಾಗಿ ಕಾವ್ಯಾ ಮನೆ ಒಳಗೆ ತೆರಳಿದ್ದರು. ಆದರೆ, ಗೆಲ್ಲೋಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada