ಸಿನಿಪ್ರಿಯರಿಗೆ ವಿಶೇಷವಾದ ನವರಾತ್ರಿ ಹಬ್ಬ; ಒಂದೇ ದಿನ ನಾಲ್ಕು ದೊಡ್ಡ ಚಿತ್ರಗಳು ರಿಲೀಸ್

ನವರಾತ್ರಿ ಹಬ್ಬ ಆರಂಭ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಹಲವು ಚಿತ್ರತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಕನ್ನಡದ ‘ಕಾಂತಾರ’, ‘ತೋತಾಪುರಿ’, ಹಿಂದಿಯಲ್ಲಿ ‘ವಿಕ್ರಮ್ ವೇದ’ ಹಾಗೂ ತಮಿಳಿನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಲಿದೆ.

ಸಿನಿಪ್ರಿಯರಿಗೆ ವಿಶೇಷವಾದ ನವರಾತ್ರಿ ಹಬ್ಬ; ಒಂದೇ ದಿನ ನಾಲ್ಕು ದೊಡ್ಡ ಚಿತ್ರಗಳು ರಿಲೀಸ್
ಸಿನಿಪ್ರಿಯರಿಗೆ ವಿಶೇಷವಾದ ನವರಾತ್ರಿ ಹಬ್ಬ
TV9kannada Web Team

| Edited By: Rajesh Duggumane

Sep 28, 2022 | 8:07 PM

ಹಬ್ಬ ಅಥವಾ ವಿಶೇಷ ದಿನಗಳಂದು ಬಿಗ್ ಬಜೆಟ್​ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಆಸಕ್ತಿ ತೋರುತ್ತಾರೆ. ಇದಕ್ಕೆ ಕಾರಣ ಸಾಲು ಸಾಲು ರಜೆ. ಹಬ್ಬದ ಸಮಯದಲ್ಲಿ ಹಲವು ರಜೆಗಳು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಇದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುತ್ತದೆ. ಈ ಬಾರಿ ನವರಾತ್ರಿ  (Navaratri) ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ರಿಲೀಸ್ ಆಗುತ್ತಿವೆ. ಅದನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ.

ನವರಾತ್ರಿ ಹಬ್ಬ ಆರಂಭ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಹಲವು ಚಿತ್ರತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಕನ್ನಡದ ‘ಕಾಂತಾರ’, ‘ತೋತಾಪುರಿ’, ಹಿಂದಿಯಲ್ಲಿ ‘ವಿಕ್ರಮ್ ವೇದ’ ಹಾಗೂ ತಮಿಳಿನಲ್ಲಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗಲಿದೆ. ಪ್ರತಿ ಸಿನಿಮಾಗಳು ತಮ್ಮದೇ ಆದ ವಿಶೇಷತೆ ಹೊಂದಿದೆ.

ಕಾಂತಾರ:

ರಿಷಬ್ ಶೆಟ್ಟಿ ಅವರು ನಿರ್ದೇಶನ ಹಾಗೂ ನಟನೆ ಎರಡರಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈಗ ಅವರು ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಈ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಮೂಡಿ ಬಂದಿದೆ.

‘ತೋತಾಪುರಿ’

ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಅವರು ‘ತೋತಾಪುರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಚಿತ್ರಕ್ಕೆ ವಿಜಯ್ ಪ್ರಸಾದ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಭರಪೂರ ಮನರಂಜನೆ ಇರಲಿದೆ ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ, ದತ್ತಣ್ಣ ಮೊದಲಾದವರು ನಟಿಸಿದ್ದಾರೆ.

‘ಪೊನ್ನಿಯಿನ್ ಸೆಲ್ವನ್’

‘ಪೊನ್ನಿಯಿನ್​ ಸೆಲ್ವನ್’​ ಚಿತ್ರಕ್ಕೆ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್​ ರಾಜ್​ ಮುಂತಾದವರು ಅಭಿನಯಿಸಿದ್ದಾರೆ. ಎ.ಆರ್​. ರೆಹಮಾನ್​ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೊದಲು ರಿಲೀಸ್ ಆಗಿದ್ದ ಟ್ರೇಲರ್ ನಿರೀಕ್ಷೆ ಮೂಡಿಸಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ಶೂಟಿಂಗ್​ ಮಾಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada