ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್

Kiccha Sudeep | ನಟ ಕಿಚ್ಚ ಸುದೀಪ್ ಇತ್ತೀಚೆಗೆ ಬಾಲಿವುಡ್ ಕ್ಯೂಟ್ ಜೋಡಿ ನಟಿ ಜೆನಿಲಿಯಾ ಹಾಗೂ ನಟ ರಿತೇಶ್ ದೇಶ್‌ಮುಖ್ ಅವರನ್ನು ಭೇಟಿಯಾಗಿದ್ದು ಅವರ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದಾರೆ. ಸದ್ಯ ಡಿನ್ನರ್ ನಂತರ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

  • TV9 Web Team
  • Published On - 9:03 AM, 16 Feb 2021
ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್
ರಿತೇಶ್ ದೇಶ್‌ಮುಖ್, ಜೆನಿಲಿಯಾ ಹಾಗೂ ಕಿಚ್ಚ ಸುದೀಪ್

ಬಾಲಿವುಡ್​ ಕ್ಯೂಟ್ ಜೋಡಿ ನಟಿ ಜೆನಿಲಿಯಾ ಹಾಗೂ ನಟ ರಿತೇಶ್ ದೇಶ್‌ಮುಖ್ ಅವರನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಡಿನ್ನರ್​ಗೆ ಆಹ್ವಾನಿಸಿದ್ದು ಡಿನ್ನರ್ ವೇಳೆ ತೆಗೆಸಿಕೊಂಡ ಫೋಟೋಗಳು ಫುಲ್ ವೈರಲ್ ಆಗಿವೆ. ನಟ ಕಿಚ್ಚ ಸುದೀಪ್ ಹಾಗೂ ನಟ ರಿತೇಶ್ ದೇಶ್‌ಮುಖ್ ಆತ್ಮೀಯ ಗೆಳೆಯರು. ಸದ್ಯ, ಈ ಮೂವರು ಗೆಳೆಯರು ಭೇಟಿಯಾಗಿರುವ ಫೋಟೋಗಳನ್ನು ನಟಿ ಜೆನಿಲಿಯಾ ಡಿಸೋಜಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟ ಸುದೀಪ್ ಅಂಥಹಾ ಅದ್ಭುತ ವ್ಯಕ್ತಿಯೊಂದಿಗೆ ಅದ್ಭುತ ಸಮಯ ಕಳೆದ್ದೀವಿ. ಒಳ್ಳೆಯ ಮಾತುಕತೆ, ಒಳ್ಳೆಯ ಸಂಜೆಗೆ ಧನ್ಯವಾದ. ನಾನೂ ಹಾಗೂ ರಿತೇಶ್ ದೇಶ್‌ಮುಖ್ ನಿಮ್ಮ ಜೊತೆ ಕಳೆದ ಸಮಯವನ್ನು ಬಹಳ ಇಷ್ಟಪಟ್ಟೇವು ಎಂದಿದ್ದಾರೆ.

ಪ್ರಿಯಾ ಸುದೀಪ್ ಹಾಗೂ ಸಾನ್ವಿಯನ್ನು ನೋಡಲು ಮಿಸ್ ಮಾಡಿಕೊಂಡೇವು. ಆದರೆ ಈ ಸಂಜೆ, ಮುಂಬರುವ ಇನ್ನೂ ಇಂತಹ ಹಲವಾರು ಸಂಜೆಗಳಿಗೆ ಮುನ್ನುಡಿಯಾಗಿದೆ. ನಿಮ್ಮ ದಿನನಿತ್ಯದ ಆಹಾರ ಅಭ್ಯಾಸವನ್ನು ಬಿಟ್ಟು ನಮಗಾಗಿ ಪೂರ್ಣ ಸಸ್ಯಹಾರ ಊಟ ಅರೇಂಜ್ ಮಾಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ ಜೆನಿಲಿಯಾ ಡಿಸೋಜಾ. ನಟ ರಿತೇಶ್ ದೇಶ್‌ಮುಖ್ ಹಾಗೂ ನಟ ಕಿಚ್ಚ ಸುದೀಪ್ ಒಟ್ಟಿಗೆ ಹಿಂದಿಯ ‘ರಣ್’ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು.

ನಟ ಸುದೀಪ್ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ನಟ ರಿತೇಶ್ ದೇಶ್‌ಮುಖ್ ಮಾತ್ರವಲ್ಲದೆ ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ, ಅಮಿತಾಬ್ ಬಚ್ಚನ್ ಮತ್ತು ಹಲವಾರು ಬಾಲಿವುಡ್ ಸ್ಟಾರ್‌ಗಳೊಂದಿಗೆ ಗೆಳೆತನ ಹೊಂದಿದ್ದಾರೆ. ಸದ್ಯ, ನಟಿ ಜೆನಿಲಿಯಾ ನಟ ಕಿಚ್ಚ ಸುದೀಪ್ ಅವರ ಸರಳತೆ ನೋಡಿ ಹೊಗಳಿರುವ ವಿಷಯ ನಟ ಸುದೀಪ್ ಸೇರಿದಂತೆ ಅವರ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗಿದೆ.

ಇದನ್ನೂ ಓದಿ: Kiccha Sudeep: ಸುದೀಪ್​ ಜತೆ ಪ್ರೇಮ್ಸ್​ ಮತ್ತೊಂದು ಸಿನಿಮಾ; ಆದರೆ, ಇದು ಸತ್ಯವಲ್ಲ!