ಹಲವು ಯುವತಿಯರ ಜತೆ ಒತ್ತಾಯ ಪೂರ್ವಕ ಲೈಂಗಿಕ ಕ್ರಿಯೆ; ಅತ್ಯಾಚಾರ ಆರೋಪದಡಿ ಖ್ಯಾತ ಹೀರೋ ಅರೆಸ್ಟ್

ಹಲವು ಯುವತಿಯರ ಜತೆ ಒತ್ತಾಯ ಪೂರ್ವಕ ಲೈಂಗಿಕ ಕ್ರಿಯೆ; ಅತ್ಯಾಚಾರ ಆರೋಪದಡಿ ಖ್ಯಾತ ಹೀರೋ ಅರೆಸ್ಟ್
ಹಲವು ಯುವತಿಯರ ಜತೆ ಒತ್ತಾಯ ಪೂರ್ವಕ ಲೈಂಗಿಕ ಕ್ರಿಯೆ; ಅತ್ಯಾಚಾರ ಆರೋಪದಡಿ ಖ್ಯಾತ ಹೀರೋ ಅರೆಸ್ಟ್

ಕ್ರಿಸ್​ ವು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ‘ನಾನು ಯಾರಿಗೂ ಮೋಸ ಮಾಡಿಲ್ಲ. ನಾನು ಆ ರೀತಿ ಮಾಡಿದ್ದರೆ ನಾನೇ ಜೈಲಿಗೆ ಹೋಗುತ್ತಿದ್ದೆ’ ಎಂದು ಕ್ರಿಸ್​ ವು ಹೇಳಿದ್ದಾರೆ.

TV9kannada Web Team

| Edited By: Rajesh Duggumane

Aug 02, 2021 | 9:09 PM

ಹಣ ಮತ್ತು ಖ್ಯಾತಿ ಬಂದ ನಂತರದಲ್ಲಿ ಅದನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ಅನೇಕರು ಎಡವುತ್ತಾರೆ. ಈ ಕಾರಣಕ್ಕೆ ಅನೇಕರು ತಪ್ಪು ದಾರಿ ತುಳಿಯುತ್ತಾರೆ. ಈಗ ಅತ್ಯಾಚಾರ ಮಾಡಿದ ಆರೋಪದಡಿ ಚೀನಾದ ಪಾಪ್​ಸ್ಟಾರ್ ​ಹಾಗೂ ನಟ ಕ್ರಿಸ್​ ವು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ. ಲೈಂಗಿಕ ಕ್ರಿಯೆಗೆ ಒಳಪಡುವಂತೆ ಯುವತಿಯರಿಗೆ ಆತ ಒತ್ತಾಯ ಹೇರುತ್ತಿದ್ದ ಎನ್ನಲಾಗಿದೆ.

ಚೀನಾದ ಮನರಂಜನಾ ಕ್ಷೇತ್ರದಲ್ಲಿ ಕ್ರಿಸ್​ ವು ಹೆಸರು ಜನಪ್ರಿಯವಾಗಿದೆ. ಅವರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಚೀನಾದ ಸೋಶಿಯಲ್​ ಮೀಡಿಯಾ ವೀಬೊದಲ್ಲಿ ಟ್ರೆಂಡ್​ ಆಗಿದೆ. ಇನ್ನು, ಕ್ರಿಸ್​ ವು ಪೋರ್ಷೆ ಸೇರಿದಂತೆ ಸಾಕಷ್ಟು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದರು. ಬಂಧನದ ಬೆನ್ನಲ್ಲೇ ಅವರ ಜತೆಗಿನ ಒಪ್ಪಂದವನ್ನು ಕಂಪೆನಿಗಳು ರದ್ದು ಮಾಡಿವೆ.

ಯುವತಿಯರ ಜತೆ ಕ್ರಿಸ್ ಸೆಕ್ಸ್​ ಮಾಡಲು ಬಯಸುತ್ತಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಚೀನಾದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೋರ್ವಳು ಆರೋಪ ಮಾಡಿದ್ದಳು. ‘ಚಾನ್ಸ್ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕ್ರಿಸ್​ ವು ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದರು. ಅವರ ಜತೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದರು. ನಂತರ ಅವರನ್ನು ಕ್ರಿಸ್​ ವು ಭೇಟಿ ಕೂಡ ಮಾಡುತ್ತಿರಲಿಲ್ಲ’ ಎಂಬುದು ಆಕೆಯ ಆರೋಪವಾಗಿತ್ತು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಾಥಮಿಕ ಹಂತದ ತನಿಖೆ ನಡೆಸಿ ಕ್ರಿಸ್​ ವು ಅವರನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿ ಮಾಡಿದ ಪೋಸ್ಟ್ ಬರೋಬ್ಬರಿ 33 ಲಕ್ಷ ಲೈಕ್​ಗಳನ್ನು ಪಡೆದುಕೊಂಡಿದೆ.

ಇನ್ನು, ಕ್ರಿಸ್​ ವು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ‘ನಾನು ಯಾರಿಗೂ ಮೋಸ ಮಾಡಿಲ್ಲ. ನಾನು ಆ ರೀತಿ ಮಾಡಿದ್ದರೆ ನಾನೇ ಜೈಲಿಗೆ ಹೋಗುತ್ತಿದ್ದೆ’ ಎಂದು ಕ್ರಿಸ್​ ವು ಹೇಳಿದ್ದಾರೆ.

ಇದನ್ನೂ ಒದಿ: Rape Case: ಸಂತ್ರಸ್ತೆಯೇ ಮುಂದೆ ಬಂದರೂ ಅತ್ಯಾಚಾರಿ ಜೊತೆ ಮದುವೆಗೆ ಒಪ್ಪಿಗೆ ನೀಡದ ಸುಪ್ರೀಂ ಕೋರ್ಟ್

Follow us on

Related Stories

Most Read Stories

Click on your DTH Provider to Add TV9 Kannada