36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ

Lata Mangeshkar Death: 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿ, ಜನರಿಂದ ಅಪಾರ ಪ್ರೀತಿ ಸಂಪಾದಿಸಿದ್ದ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ. ಇಂದೋರ್​ನಿಂದ ಪಯಣ ಆರಂಭಿಸಿದ ಲತಾ, ತಮ್ಮ ಹಾಡುಗಳ ಮೂಲಕ ವಿಶ್ವದ ಮೂಲೆ ಮೂಲೆ ತಲುಪಿದರು. ಅವರ ಸಾರ್ಥಕ ಬದುಕಿನ ಮೆಲುಕು ಇಲ್ಲಿದೆ.

36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ
ಗಾಯನದಲ್ಲಿ ತಲ್ಲೀನರಾಗಿರುವ ಲತಾ ಮಂಗೇಶ್ಕರ್
Follow us
TV9 Web
| Updated By: shivaprasad.hs

Updated on:Feb 06, 2022 | 10:30 AM

‘ಬಾಲಿವುಡ್ ನೈಟಿಂಗೇಲ್’ (Bollywood Nightingale) ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಇಂದು (ಭಾನುವಾರ, ಫೆ.06) ನಿಧನರಾಗಿದ್ದಾರೆ. ಅವರ ನಿಧನಕ್ಕೆ ದೇಶ ಕಂಬನಿ ಮಿಡಿಯುತ್ತಿದೆ. 92 ವರ್ಷಗಳ ತುಂಬು ಜೀವನದಲ್ಲಿ ಲತಾ ಅವರ ಸಾಧನೆ ಅಪರಿಮಿತ ಎಂದರೆ ತಪ್ಪಿಲ್ಲ. ಅವರ ಯಶಸ್ವಿ ಜೀವನಯಾನದ ಮೆಲುಕು ಇಲ್ಲಿದೆ. ಸಂಗೀತ ಕ್ಷೇತ್ರದಲ್ಲಿ ಲತಾ ಮಂಗೇಶ್ಕರ್ ಸಾಧನೆ ಅನನ್ಯವಾದದ್ದು. ಸುಮಾರು ಮೂರು ತಲೆಮಾರಿನ ಕಲಾವಿದರ ಚಿತ್ರಗಳಿಗೆ ತಮ್ಮ ಹಿನ್ನೆಲೆ ಗಾಯನದಿಂದ ಅವರು ಜೀವ ತುಂಬಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಲತಾ ಅವರು ಜೀವ ತುಂಬಿದ್ದು ಸುಮಾರು 25,000ಕ್ಕೂ ಅಧಿಕ ಹಾಡುಗಳಿಗೆ. ದೇಶ ವಿದೇಶದ ಸುಮಾರು 36ಕ್ಕೂ ಅಧಿಕ ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಗಾಯನದ ಮೋಡಿ ಮಾಡಿದ್ದರು. ಇದೇ ಕಾರಣದಿಂದ ಅವರನ್ನು ಅಭಿಮಾನಿಗಳು ‘ಬಾಲಿವುಡ್ ನೈಟಿಂಗೇಲ್’, ‘ಕ್ವೀನ್ ಆಫ್ ದಿ ಮೆಲೋಡಿ’, ‘ವಾಯ್ಸ್ ಆಫ್ ದಿ ನೇಷನ್’, ‘ವಾಯ್ಸ್ ಆಫ್ ದಿ ಮಿಲೇನಿಯಮ್’ ಮೊದಲಾದ ವೈಶಿಷ್ಟ್ಯಪೂರ್ಣ ಬಿರುದುಗಳಿಂದ ಗುರುತಿಸಿ ಗೌರವಿಸಿದ್ದರು. ಹಿಂದಿ ಹಾಗೂ ಮರಾಠಿ ಚಿತ್ರಗಳ ಗೀತೆಗಳಿಗೆ ಲತಾ ಮಂಗೇಶ್ಕರ್ ಹೆಚ್ಚಾಗಿ ಗಾಯನ, ಸಂಗೀತ ಸಂಯೋಜನೆ ಮಾಡಿದ್ದರು. ಸುಮಾರು ಸಾವಿರಕ್ಕೂ ಅಧಿಕ ಬಾಲಿವುಡ್ ಚಿತ್ರಗಳಲ್ಲಿ ಹಾಡಿದ ಕೀರ್ತಿ ಲತಾ ಅವರದ್ದಾಗಿತ್ತು.

ಲತಾ ಮಂಗೇಶ್ಕರ್ ಬಾಲ್ಯ: ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಪಂಡಿತ್ ದೀನನಾಥ್ ಮಂಗೇಶ್ಕರ್ ಹಾಗೂ ಸೇವಂತಿ ಅವರ ಪುತ್ರಿಯಾಗಿ ಮಧ್ಯಪ್ರದೇಶದ ಇಂದೋರ್​ನಲ್ಲಿ ಜನಿಸಿದ ಲತಾ ಅವರ ಮೊದಲ ಹೆಸರು ಹೇಮಾ ಮಂಗೇಶ್ಕರ್. ಪಂಡಿತ್ ದೀನನಾಥ್ ಅವರು ಸಂಗೀತಗಾರ ಹಾಗೂ ನಾಟಕಕಾರರಾಗಿದ್ದರು. ಅವರ ಒಂದು ನಾಟಕ ‘ಭಾವ್​ಬಂಧನ್​’ನ ಒಂದು ಪಾತ್ರ ಲತಿಕಾ. ಅದೇ ಹೆಸರನ್ನು ಹೇಮಾಗೂ ಇಡಲು ನಿರ್ಧರಿಸಿದ ಪೋಷಕರು- ಲತಾ ಮಂಗೇಶ್ಕರ್ ಎಂದು ಹೆಸರನ್ನು ಮರುನಾಮಕರಣ ಮಾಡಿದರು. ಲತಾ ಅವರ ಪೂರ್ವಜರು ಗೋವಾ ಮೂಲದವರು. ಮೂಲಸ್ಥಳವಾದ ‘ಮಂಗೇಶಿ’ಯ ನೆನಪಿಗೆ ಲತಾ ತಂದೆ ದೀನನಾಥ್ ಅವರು ತಮ್ಮ ನಾಮಧೇಯದಲ್ಲಿ ‘ಮಂಗೇಶ್ಕರ್’ ಎಂದು ಸೇರಿಸಿಕೊಂಡಿದ್ದರು.

ದೀನನಾಥ್ ಹಾಗೂ ಸೇವಂತಿ ಅವರ ಮಕ್ಕಳಲ್ಲಿ ಲತಾ ಹಿರಿಯವರು. ಮೀನಾ ಖದಿಕಾರ್, ಆಶಾ ಭೋಸ್ಲೆ, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್ ಎಲ್ಲರೂ ಲತಾ ಅವರ ಒಡಹುಟ್ಟಿದವರು. ವಿಶೇಷವೆಂದರೆ ಎಲ್ಲರೂ ನಿಪುಣ ಗಾಯಕರು ಮತ್ತು ಸಂಗೀತಗಾರರು.

ಲತಾ ಮಂಗೇಶ್ಕರ್ ಸಂಗೀತ ಪಯಣ: ಲತಾ ಮಂಗೇಶ್ಕರ್ ಅವರ ಸಂಗೀತ ಪಯಣ ಆರಂಭವಾಗಿದ್ದು ಬಹಳ ಸಣ್ಣ ವಯಸ್ಸಿನಲ್ಲಿ. ತಂದೆ ದೀನನಾಥ್ ಮಂಗೇಶ್ಕರ್ ಅವರೇ ಲತಾ ಅವರಿಗೆ ಗುರುವಾಗಿದ್ದರು. ಐದನೇ ವಯಸ್ಸಿಗೆ ಸಂಗೀತ ಪ್ರಧಾನ ನಾಟಕಗಳಲ್ಲಿ ಲತಾ ಬಣ್ಣ ಹಚ್ಚಲು ಆರಂಭಿಸಿದ್ದರು.

1942ರಲ್ಲಿ ತಮ್ಮ 13ನೇ ವಯಸ್ಸಿಗೆ ಲತಾ ಮಂಗೇಶ್ಕರ್ ಮರಾಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಗಾಯಕಿಯಾಗಿ ಪದಾರ್ಪಣೆ ಮಾಡಿದರು. 1943ರಲ್ಲಿ ಮರಾಠಿ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಹಿಂದಿ ಹಾಡಿಗೆ ಧ್ವನಿಯಾದರು. 1945ರಲ್ಲಿ ಮುಂಬೈಗೆ ತೆರಳಿದ ಲತಾ ಉಸ್ತಾದ್ ಅಮನ್ ಅಲಿ ಖಾನ್ ಅವರ ಗರಡಿಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆ ಆರಂಭಿಸಿದರು. ಜತೆಜತೆಗೆ ಹಿಂದಿ ಚಿತ್ರಗಳಲ್ಲೂ ಹಾಡತೊಡಗಿದರು. ಅಲ್ಲಿಂದ ಲತಾ ಮಂಗೇಶ್ಕರ್ ಹಿಂದಿರುಗಿ ನೋಡಿದ್ದೇ ಇಲ್ಲ. ಮಧುಬಾಲಾರಿಂದ ಇತ್ತೀಚಿನ ಪ್ರಿಯಾಂಕಾ ಚೋಪ್ರಾರವರೆಗೂ ಗಾಯನ ಮಾಡಿದ ಖ್ಯಾತಿ ಲತಾ ಅವರದ್ದು. ತಮ್ಮ ಧ್ವನಿಯಿಂದಾಗಿಯೇ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದ ಲತಾ ಮಂಗೇಶ್ಕರ್ ಘಜಲ್, ಪಾಪ್​ ಮೊದಲಾದ ಪ್ರಕಾರಗಳಲ್ಲೂ ಹಾಡಿದ್ದರು.

ಪ್ರಶಸ್ತಿಗಳು: ಸಂಗೀತ ಕ್ಷೇತ್ರದಲ್ಲಿನ ಸಾಧನೆಗೆ ಲತಾ ಮಂಗೇಶ್ಕರ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿತ್ತು. ರಾಯಲ್ ಆಲ್ಬರ್ಟ್ ಹಾಲ್​ನಲ್ಲಿ ಪ್ರದರ್ಶನ ನೀಡಿದ ಭಾರತದ ಮೊದಲ ಗಾಯಕಿ ಅವರಾಗಿದ್ದರು. ಲತಾ ಅವರಿಗೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಬೆಂಗಾಲ್ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು, ನಾಲ್ಕು ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು, ಎರಡು ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳು, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಲತಾ ಮಂಗೇಶ್ಕರ್ ಅವರಿಗೆ 1989 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2001 ರಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು. ಫ್ರಾನ್ಸ್ ಸರ್ಕಾರವು 2007 ರಲ್ಲಿ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು (ಆಫೀಸರ್ ಆಫ್ ದಿ ಲೀಜನ್ ಆಫ್ ಆನರ್) ನೀಡಿ ಗೌರವಿಸಿತ್ತು.

ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅದರ ವಿರುದ್ಧ ಹೋರಾಡಿ ಗುಣಮುಖರಾಗಿದ್ದರು. ವೆಂಟಿಲೇಟರ್​ನಿಂದಲೂ ಹೊರಬಂದಿದ್ದರು. ಆದರೆ ಶನಿವಾರ (ಫೆ.05) ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅವರು ಇಂದು ನಿಧನ ಹೊಂದಿದರು. ಇಂದೋರ್​ನಿಂದ ಗಾಯನದ ಪಯಣ ಆರಂಭಿಸಿದ ಲತಾ ಮಂಗೇಶ್ಕರ್, ತಮ್ಮ ಹಾಡುಗಳ ಮೂಲಕ ವಿಶ್ವದ ಮೂಲೆಮೂಲೆಗಳನ್ನು ತಲುಪಿದರು. ಅವರ ಗಾಯನ ಜನರ ಮನದಲ್ಲಿ ಚಿರಸ್ಥಾಯಿಯಾಗಿದೆ. ಅವರ ಜೀವನಯಾನ, ನಿಷ್ಕಲ್ಮಶ ನಗು ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ.

ಇದನ್ನೂ ಓದಿ:

Lata Mangeshkar Death: ಲತಾ ಮಂಗೇಶ್ಕರ್​ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ

Lata Mangeshkar Passes Away: ಗಾಯನ ನಿಲ್ಲಿಸಿದ ಭಾರತ ರತ್ನ ಲತಾ ಮಂಗೇಶ್ಕರ್

Published On - 10:11 am, Sun, 6 February 22

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ