ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಮಹೇಶ್ ಬಾಬು; ಶೂಟಿಂಗ್ ಯಾವಾಗ?

ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಮಹೇಶ್ ಬಾಬು; ಶೂಟಿಂಗ್ ಯಾವಾಗ?
ಮಹೇಶ್ ಬಾಬು

ತ್ರಿವಿಕ್ರಂ ನಿರ್ದೇಶನದ ಮುಂದಿನ ಸಿನಿಮಾಗೆ ಮಹೇಶ್ ಬಾಬು ಹೀರೋ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಮೊದಲು ಆರಂಭಗೊಳ್ಳಲಿದೆ.

TV9kannada Web Team

| Edited By: Rajesh Duggumane

May 08, 2022 | 5:17 PM

ನಟ ಮಹೇಶ್ ಬಾಬು (Mahesh Babu) ಅಭಿನಯದ ‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata) ರಿಲೀಸ್​ಗೆ ರೆಡಿ ಇದೆ. ಈ ಚಿತ್ರ ಮೇ 12ರಂದು ತೆರೆಗೆ ಬರುತ್ತಿದ್ದು, ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಸಿನಿಮಾ ಹಾಡುಗಳು ಈಗಾಗಲೇ ಸಖತ್ ಹಿಟ್ ಆಗಿವೆ. ಚಿತ್ರದ ಟ್ರೇಲರ್ ಕೂಡ ಮೆಚ್ಚುಗೆ ಪಡೆದುಕೊಂಡಿದೆ. ಮಹೇಶ್ ಬಾಬು ಅವರು ಭಿನ್ನ ಗೆಟಪ್​​ನಲ್ಲಿ ಮಿಂಚಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಹೊರಬಿದ್ದಿದೆ. ಸ್ವತಃ ಮಹೇಶ್ ಬಾಬು ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ.

ಮಹೇಶ್ ಬಾಬು ಹಾಗೂ ರಾಜಮೌಳಿ ಅವರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಆದರೆ, ಈ ಚಿತ್ರ ಸೆಟ್ಟೇರುವುದಕ್ಕೂ ಮೊದಲು ಮತ್ತೊಂದು ಸಿನಿಮಾದ ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ ಮಹೇಶ್ ಬಾಬು. ಹೌದು, ತ್ರಿವಿಕ್ರಂ ನಿರ್ದೇಶನದ ಮುಂದಿನ ಸಿನಿಮಾಗೆ ಮಹೇಶ್ ಬಾಬು ಹೀರೋ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಮೊದಲು ಆರಂಭಗೊಳ್ಳಲಿದೆ.

ಮಹೇಶ್ ಬಾಬು ಅವರು ಸದ್ಯ, ‘ಸರ್ಕಾರಿ ವಾರು ಪಾಟ’ ಸಿನಿಮಾದ ಅಂತಿಮ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ನಾನಾ ಕಡೆಗಳಿಗೆ ತೆರಳುತ್ತಿದ್ದಾರೆ. ಈ ಸಿನಿಮಾ ತೆರೆಕಂಡ ಬಳಿಕ ಅವರು ಒಂದು ಸಣ್ಣ ಬ್ರೇಕ್​ ತೆಗೆದುಕೊಳ್ಳಲಿದ್ದಾರೆ. ಇದಾದ ಬಳಿಕ ಜೂನ್​ ತಿಂಗಳಲ್ಲಿ ಹೊಸ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಸಿನಿಮಾ ಕೆಲಸಗಳು ಆರಂಭಗೊಂಡ ನಂತರದಲ್ಲಿ ಟೈಟಲ್​ ಅನಾವರಣ ಆಗುವ ಸಾಧ್ಯತೆ ಇದೆ.

ಮಹೇಶ್ ಬಾಬು 28ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಪೂಜಾ ಹೆಗ್ಡೆ ಅವರಿಗೆ ಈಗಾಗಲೇ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಹಲವು ಸ್ಟಾರ್​​ಗಳಿಗೆ ಅವರು ನಾಯಕಿ ಆಗಿ ನಟಿಸಿದ್ದಾರೆ. ಈಗ ಅವರು ಮಹೇಶ್ ಬಾಬು ಚಿತ್ರಕ್ಕೆ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ

ಸದ್ಯ, ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಇನ್ನು ಕೆಲವೇ ದಿನಗಳಲ್ಲಿ ಆ ಕೆಲಸಗಳು ಪೂರ್ಣಗೊಳ್ಳಲಿವೆ. ಎಸ್​. ಥಮನ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾದ ರಿಲೀಸ್ ಡೇಟ್​​ ಅನೌನ್ಸ್ ಆಗಲಿದೆ.  ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ. ಈ ಸಿನಿಮಾವನ್ನು ಪರಶುರಾಮ್ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada