ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಕೇಂದ್ರದ ಸಮ್ಮತಿ

ಈಜುಕೊಳ, ಪ್ರದರ್ಶನ ಕೇಂದ್ರಗಳಿಗೂ ನಿಯಮ ಸಡಿಲಿಕೆ ಮಾಡಲಾಗಿದೆ. ಇನ್ನು, ಹೊಸ ಮಾರ್ಗಸೂಚಿ​ ಫೆ.28ರವರೆಗೂ ಜಾರಿಯಲ್ಲಿರುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

  • TV9 Web Team
  • Published On - 19:31 PM, 27 Jan 2021
ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಕೇಂದ್ರದ ಸಮ್ಮತಿ
ಚಿತ್ರಮಂದಿರ

ಬೆಂಗಳೂರು: ಕೊರೊನಾ ವೈರಸ್​ ಪ್ರಕರಣಗಳು ಕಡಿಮೆ ಆಗುತ್ತಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಇದರನ್ವಯ, ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರು ಕೂರಲು ಅವಕಾಶ ಇರಲಿದೆ.

ಕೇಂದ್ರ ಸರ್ಕಾರ ಇಂದು ಹೊಸ ಗೈಡ್​ಲೈನ್ಸ್​ ಬಿಡುಗಡೆ ಮಾಡಿದೆ. ಕ್ರೀಡೆ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ , ಮನರಂಜನಾ ಕ್ಷೇತ್ರಗಳಲ್ಲಿನ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಇಷ್ಟು ದಿನ ಶೇ. 50 ಮಂದಿ ಕೂರಲು ಮಾತ್ರ ಚಿತ್ರಮಂದಿರದಲ್ಲಿ ಅವಕಾಶ ಇತ್ತು. ಆದರೆ, ಇದನ್ನು ಈಗ ಹೆಚ್ಚು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈಜುಕೊಳ, ಪ್ರದರ್ಶನ ಕೇಂದ್ರಗಳಿಗೂ ನಿಯಮ ಸಡಿಲಿಕೆ ಮಾಡಲಾಗಿದೆ. ಇನ್ನು, ಹೊಸ ಮಾರ್ಗಸೂಚಿ​ ಫೆ.28ರವರೆಗೂ ಜಾರಿಯಲ್ಲಿರುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

ತಮಿಳುನಾಡು ಬಳಿಕ ಪಶ್ಚಿಮ ಬಂಗಾಳದ ಸರದಿ: ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅನುಮತಿ