Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ

Roberrt Movie Review: ರಾಬರ್ಟ್​ ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ದರ್ಶನ್​ ಅಭಿನಯ, ಸಿನಿಮಾದ ಕಥೆ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಇಲ್ಲಿದೆ ರಾಬರ್ಟ್​ ಟ್ವಿಟ್ಟರ್​ ವಿಮರ್ಷೆ.

  • TV9 Web Team
  • Published On - 10:44 AM, 11 Mar 2021
Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ
ದರ್ಶನ್​

ರಾಬರ್ಟ್​ ಸಿನಿಮಾ ಇಂದು (ಮಾ.11) ರಿಲೀಸ್​ ಆಗಿದೆ. ಮೊದಲ ದಿನವೇ 650ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆ ಆಗಿದ್ದು, ಅಂದಾಜು 2750 ಶೋ ನಡೆಯಲಿದೆ. ಜತೆಗೆ 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್​ಗಳಲ್ಲಿ ರಾಬರ್ಟ್ ಅಬ್ಬರಿಸಲಿದ್ದಾನೆ. ಮಲ್ಟಿಪ್ಲೆಕ್ಸ್​ ಮತ್ತು ಸಿಂಗಲ್​ ಸ್ಕ್ರೀನ್​ ಚಿತ್ರಮಂದಿರಗಳನ್ನೂ ಸೇರಿಸಿದರೆ 3889 ಶೋಗಳಲ್ಲಿ ರಾಬರ್ಟ್ ಸಿನಿಮಾ ಸೌಂಡು ಮಾಡಲಿದೆ. ರಾಬರ್ಟ್​ ಸಿನಿಮಾ ನೋಡಿದ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಬರ್ಟ್​ ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ದರ್ಶನ್​ ಅಭಿನಯ, ಸಿನಿಮಾದ ಕಥೆ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಆಶಾ ಭಟ್​ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನೂ ಕೆಲವರು ಸಿನಿಮಾ ನೋಡಿದ ನಂತರ ಅನೇಕರು ಸಿನಿಮಾ ಅಷ್ಟೊಂದು ಉತ್ತಮವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Roberrt Kannada Movie Review: ದರ್ಶನ್​ ನಟನೆಯ ರಾಬರ್ಟ್​ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ?