ಹೇಗಿದೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೊದಲಾರ್ಧ? ಇಲ್ಲಿದೆ ಮಾಹಿತಿ

ಹೇಗಿದೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೊದಲಾರ್ಧ? ಇಲ್ಲಿದೆ ಮಾಹಿತಿ
ಮಹೇಶ್-ಕೀರ್ತಿ

Sarkaru Vaari Paata Movie: ಗೀತ ಗೋವಿಂದಂ’ ನಿರ್ದೇಶಕ ಪರಶುರಾಮ್ ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ಮಾಹಿತಿ.

TV9kannada Web Team

| Edited By: Madan Kumar

May 12, 2022 | 7:26 AM

ಮಹೇಶ್ ಬಾಬು (Mahesh Babu) ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾ 2020ರಲ್ಲಿ ತೆರೆಗೆ ಬಂದಿತ್ತು. ಎರಡು ವರ್ಷದ ಬಳಿಕ ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ತೆರೆಗೆ ಬಂದಿದೆ. ಮಹೇಶ್ ಬಾಬು ಅವರ ಭಿನ್ನ ಲುಕ್​​ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಸಾಕಷ್ಟು ಹಿಟ್ ಆಗಿದೆ. ‘ಕಲಾವತಿ..’ ಹಾಡು (Kalaavathi  Song) ಸಿನಿಮಾದ ಜನಪ್ರಿಯತೆಯನ್ನು ಹೆಚ್ಚಿಸಿದೆ. ಮಹೇಶ್ ಬಾಬುಗೆ ಜತೆಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಬ್ಯಾಕ್​ ಟು ಬ್ಯಾಕ್ ಸೋಲು ಅನುಭವಿಸಿರುವ ಅವರಿಗೆ ಈ ಚಿತ್ರ ತುಂಬಾನೇ ಮುಖ್ಯವಾಗಿದೆ. ‘ಗೀತ ಗೋವಿಂದಂ’ ನಿರ್ದೇಶಕ ಪರಶುರಾಮ್ ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧ ಹೇಗಿದೆ? ಈ ಚಿತ್ರದಲ್ಲಿ ಏನೆಲ್ಲ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  1. ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಮಹೇಶ್​ ಬಾಬು ಅವರು ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸ್ಪೆಷಲ್​ ಟ್ರೀಟ್​ ಎನ್ನಬಹುದು.
  2. ‘ಪ್ರಿನ್ಸ್​’ ಮಹೇಶ್​ ಬಾಬು ಅವರ ಎಂಟ್ರಿಯೇ ಫೈಟಿಂಗ್​ ದೃಶ್ಯದಿಂದ ಆಗುತ್ತದೆ. ಈ ಸಾಹಸ ದೃಶ್ಯ ಸಖತ್​ ಮಾಸ್​ ಮೂಡಿ ಬಂದಿದೆ. ಅಭಿಮಾನಿಗಳಿಗೆ ಖುಷಿ ನೀಡುತ್ತದೆ.
  3. ಜನರಿಗೆ ಹೆಚ್ಚು ಇಷ್ಟ ಆಗಿರುವ ‘ಕಲಾವತಿ..’ ಹಾಡು ಚಿತ್ರದ ಫಸ್ಟ್​ ಹಾಫ್​ನಲ್ಲಿಯೇ ಬರುತ್ತದೆ. ಮಹೇಶ್​ ಬಾಬು ಮತ್ತು ಕೀರ್ತಿ ಸುರೇಶ್​ ಕಾಂಬಿನೇಷನ್​ ಚೆನ್ನಾಗಿ ಮೂಡಿಬಂದಿದೆ.
  4. ಮೊದಲಾರ್ಧದ ಕಥೆ ಕಾಮಿಡಿಯಾಗಿ ಸಾಗುತ್ತದೆ. ಆದರೆ ಮಧ್ಯಂತರ ಬರುವ ವೇಳೆಗೆ ಬೇರೆ ರೀತಿಯಾದ ತಿರುವು ಪಡೆದುಕೊಳ್ಳುತ್ತದೆ.
  5. ಫಸ್ಟ್​ ಹಾಫ್​ ಮುಗಿಯುವಾಗ ನಿರ್ದೇಶಕರು ಒಂದು ಸಖತ್​ ಟ್ವಿಸ್ಟ್ ನೀಡಿದ್ದಾರೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು. ದ್ವಿತೀಯಾರ್ಧದ ಮೇಲೆ ನಿರೀಕ್ಷೆ ಮೂಡುವಂತೆ ಈ ಟ್ವಸ್ಟ್​ ನೀಡಲಾಗಿದೆ.
  6. ಹೀರೋ-ಹೀರೋಯಿನ್​ ನಡುವಿನ ಕಹಾನಿ ಕೂಡ ಭಿನ್ನವಾಗಿದೆ. ಇದು ಮಾಮೂಲಿ ಲವ್​ ಸ್ಟೋರಿ ರೀತಿ ಇಲ್ಲ. ಇದು ಕೀರ್ತಿ ಸುರೇಶ್​ ಮತ್ತು ಮಹೇಶ್​ ಬಾಬು ಫ್ಯಾನ್ಸ್​ಗೆ ಇಷ್ಟವಾಗಲಿದೆ.
  7. ಕಾಮಿಡಿ ನಟ ಕಿಶೋರ್​ ಅವರು ಮೊದಲಾರ್ಧದಲ್ಲಿ ಹೆಚ್ಚು ಹೈಲೈಟ್​ ಆಗಿದ್ದಾರೆ. ಪ್ರೇಕ್ಷಕರನ್ನು ನಗಿಸುವಲ್ಲಿ ಅವರು ಯಶಸ್ವಿ ಆಗಿದ್ದಾರೆ.
  8. ಫಸ್ಟ್​ ಹಾಫ್​ ಅಂತ್ಯದಲ್ಲಿ ವಿಲನ್​ ಎಂಟ್ರಿ ಆಗಿದೆ. ಆ ಮೂಲಕ ಸೆಕೆಂಡ್​ ಹಾಫ್​ನಲ್ಲಿ ಕಥೆ ಬೇರೆ ತಿರುವು ಪಡೆದುಕೊಳ್ಳುವ ಸೂಚನೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada