ಬಾಲಿವುಡ್ ಬಗ್ಗೆ ಮಹೇಶ್ ಬಾಬು ಹೇಳಿಕೆ; ಹಿಂದಿಯ ಖ್ಯಾತ ನಿರ್ಮಾಪಕ ಕೊಟ್ರು ಉತ್ತರ

ಬಾಲಿವುಡ್ ಬಗ್ಗೆ ಮಹೇಶ್ ಬಾಬು ಹೇಳಿಕೆ; ಹಿಂದಿಯ ಖ್ಯಾತ ನಿರ್ಮಾಪಕ ಕೊಟ್ರು ಉತ್ತರ
ಮಹೇಶ್ ಬಾಬು

ಮುಕೇಶ್ ಬಾಲಿವುಡ್​ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಮಹೇಶ್ ಬಾಬು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ್ದಾರೆ. ಅವರು ಹೇಳಿದ ಮಾತಲ್ಲಿ ಕೊಂಕಿದೆಯೇ ಎನ್ನುವುದನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.

TV9kannada Web Team

| Edited By: Rajesh Duggumane

May 11, 2022 | 8:20 PM

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟ ರೀತಿಯ ಪರಿಸ್ಥಿತಿ ಇತ್ತೀಚೆಗೆ ನಿರ್ಮಾಣ ಆಗಿದೆ. ಬಾಲಿವುಡ್ ಮಂದಿ ದಕ್ಷಿಣ ಭಾರತದ ಚಿತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲ ಬಾಲಿವುಡ್ (Bollywood) ಮಂದಿ ಈ ಬಗ್ಗೆ ಅಸೂಯೆ ಪಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಮಧ್ಯೆ ಮಹೇಶ್ ಬಾಬು (Mahesh Babu) ಅವರು ತಾವು ಟಾಲಿವುಡ್ (Tollywood) ಬಿಟ್ಟು ಮತ್ತೆಲ್ಲೂ ತೆರಳುವುದಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅಷ್ಟೇ ಅಲ್ಲ ‘ಬಾಲಿವುಡ್​ಗೆ ನನ್ನನ್ನು ಭರಿಸುವ ಶಕ್ತಿ ಇಲ್ಲ’ ಎಂದು ನೇರವಾಗಿಯೇ ಹೇಳಿದ್ದರು. ಇದಕ್ಕೆ ಬಾಲಿವುಡ್​ನ ಖ್ಯಾತ ನಿರ್ಮಾಪಕ ಮುಕೇಶ್ ಭಟ್ ಉತ್ತರಿಸಿದ್ದಾರೆ.

ಮುಕೇಶ್ ಬಾಲಿವುಡ್​ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ‘ಆಶಿಕಿ 2’ (2013), ‘ಲವ್​ ಗೇಮ್ಸ್​’ (2016), ‘ಸಡಕ್’ (2020) ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ಮಹೇಶ್ ಬಾಬು ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ್ದಾರೆ. ಅವರು ಹೇಳಿದ ಮಾತಲ್ಲಿ ಕೊಂಕಿದೆಯೇ ಎನ್ನುವುದನ್ನು ಅಭಿಮಾನಿಗಳು ಹುಡುಕುತ್ತಿದ್ದಾರೆ.

‘ಬಾಲಿವುಡ್​​ಗೆ ಅವರನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂದರೆ ತುಂಬಾ ಒಳ್ಳೆಯದು. ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಅವರು ಮಾಡಿದ ಹೆಸರಿಗೆ ತಮ್ಮದೇ ಆದ ಮೌಲ್ಯ ಹೊಂದಿದ್ದಾರೆ. ಅವರು ಅತ್ಯಂತ ಯಶಸ್ವಿ ನಟ. ಅವರ ನಿರೀಕ್ಷೆಗಳಿಗೆ ಬಾಲಿವುಡ್ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು ಅವರಿಗೆ ಶುಭ ಹಾರೈಸುತ್ತೇನೆ’ ಎಂದು ಉತ್ತರಿಸಿದ್ದಾರೆ ಮುಕೇಶ್ ಭಟ್.

ಮಹೇಶ್ ಬಾಬು ಹೇಳಿದ್ದೇನು?

‘ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಬಾಲಿವುಡ್​ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಸಮಯವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ದಕ್ಷಿಣದಲ್ಲಿ ನಾನು ಪಡೆಯುವ ಸ್ಟಾರ್‌ಡಮ್ ಮತ್ತು ಗೌರವವು ದೊಡ್ಡದು. ಹಾಗಾಗಿ ನಾನು ಇಲ್ಲಿಯವರನ್ನು ಬಿಟ್ಟು ಬೇರೆ ಉದ್ಯಮಕ್ಕೆ ಹೋಗುವ ಬಗ್ಗೆ ನಾನು ಎಂದಿಗೂ ಯೋಚಿಸಲಿಲ್ಲ. ಸಿನಿಮಾ ಮಾಡುತ್ತಾ ಬೆಳೆಯುವ ಆಲೋಚನೆ ನನ್ನದು. ನನ್ನ ಕನಸು ಈಗ ನನಸಾಗುತ್ತಿದೆ’ ಎಂದಿದ್ದರು ಅವರು.

ಮೇ 12ಕ್ಕೆ ‘ಸರ್ಕಾರು ವಾರಿ ಪಾಟ’

‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ​ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಹೇಶ್​ ಬಾಬು ಭಿನ್ನ ಗೆಟಪ್​ ತಾಳಿದ್ದಾರೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಹಾಡುಗಳು, ಟ್ರೇಲರ್ ಹಿಟ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada