Naga Chaitanya Birthday: ನಾಗ ಚೈತನ್ಯ ನಟನೆಯ ಈ ಐದು ಚಿತ್ರಗಳನ್ನು ಮಿಸ್ ಮಾಡಲೇಬಾರದು

ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಘೋಷಣೆ ಆಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.  ಅನೇಕರು ಅವರ ವೃತ್ತಿ ಜೀವನದ ಪ್ರಮುಖ ಚಿತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

Naga Chaitanya Birthday: ನಾಗ ಚೈತನ್ಯ ನಟನೆಯ ಈ ಐದು ಚಿತ್ರಗಳನ್ನು ಮಿಸ್ ಮಾಡಲೇಬಾರದು
ನಾಗ ಚೈತನ್ಯ-ಸಮಂತಾ
TV9kannada Web Team

| Edited By: Rajesh Duggumane

Nov 23, 2022 | 8:42 AM

ನಾಗ ಚೈತನ್ಯ (Naga Chaitanya) ಅವರು ಇಂದು (ನವೆಂಬರ್ 23) 36ನೇ ವರ್ಷದ ಬರ್ತ್​ಡೇ (Naga Chaitanya Birthaday) ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಾಗ ಚೈತನ್ಯಗೆ ಬರ್ತ್​ಡೇ ವಿಶ್ ಮಾಡುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾ ಘೋಷಣೆ ಆಗಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.  ಅನೇಕರು ಅವರ ವೃತ್ತಿ ಜೀವನದ ಪ್ರಮುಖ ಚಿತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಯೇ ಮಾಯಾ ಚೇಸಾವೆ

ನಾಗ ಚೈತನ್ಯ ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ನೀಡಿದ ಸಿನಿಮಾ ‘ಯೇ ಮಾಯಾ ಚೇಸಾವೆ’. ಈ ಚಿತ್ರ ಬ್ಲಾಕ್​​ಬಸ್ಟರ್ ಹಿಟ್ ಆಯಿತು. ಗೌತಮ್ ವಾಸುದೇವ್​ ಮೆನನ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಸಮಂತಾ ನಾಯಕಿ ಆಗಿದ್ದರು. ಈ ಚಿತ್ರವನ್ನು ಫ್ಯಾನ್ಸ್ ಈಗಲೂ ನೆನಪಿಸಿಕೊಳ್ಳುತ್ತಾರೆ. ನಾಗ ಚೈತನ್ಯ ಪಾಲಿಗೂ ಈ ಸಿನಿಮಾ ವಿಶೇಷ ಆಗಿದೆ.

ಸಾಹಸಂ ಶ್ವಾಸಗಾ ಸಾಗಿಪೋ

ನಾಗ ಚೈತನ್ಯ ವೃತ್ತಿ ಬದುಕಿನಲ್ಲಿ ಈ ಚಿತ್ರ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದಲ್ಲಿ ಅವರ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಈ ಚಿತ್ರಕ್ಕೂ ಗೌತಮ್ ವಾಸುದೇವ್ ಮೆನನ್ ನಿರ್ದೇಶನ ಮಾಡಿದ್ದರು. ಮಂಜಿಮಾ ಮೋಹನ್ ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದರು.

ಪ್ರೇಮಂ

ಮಲಯಾಳಂನ ಸೂಪರ್ ಹಿಟ್ ‘ಪ್ರೇಮಂ’ ಚಿತ್ರವನ್ನು ಅದೇ ಹೆಸರಲ್ಲಿ ರಿಮೇಕ್ ಮಾಡಿದ್ದರು ನಾಗ ಚೈತನ್ಯ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿತ್ತು. ಮಲಯಾಳಂನ ‘ಪ್ರೇಮಂ’ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಈ ಚಿತ್ರಕ್ಕೆ ಕೊಂಚ ಹಿನ್ನಡೆ ತಂದಿತ್ತು. ಆದಾಗ್ಯೂ ಇದು ನಾಗ ಚೈತನ್ಯ ವೃತ್ತಿ ಜೀವನದ ಪ್ರಮುಖ ಚಿತ್ರಗಳಲ್ಲಿ ಒಂದು.

ಮನಂ

ಮನಂ ಚಿತ್ರ ಫ್ಯಾಂಟಸಿ ಡ್ರಾಮಾ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್, ಅಕ್ಕಿನೇನಿ ನಾಗಾರ್ಜುನ, ಅಕ್ಕಿನೇನಿ ಅಖಿಲ್ ಮೊದಲಾದವರು ನಟಿಸಿದ್ದರು. ಟೈಮ್ ಟ್ರಾವೆಲ್ ಕಥೆ ಚಿತ್ರದಲ್ಲಿ ಹೈಲೈಟ್ ಆಗಿತ್ತು. ಅಕ್ಕಿನೇನಿ ಕುಟುಂಬವನ್ನು ಒಂದೇ ಚಿತ್ರದಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು.

ಮಜಿಲಿ

ಸಾಲು ಸಾಲು ಸೋಲು ಕಾಣುತ್ತಿದ್ದ ನಾಗ ಚೈತನ್ಯಗೆ ಒಂದು ದೊಡ್ಡ ಹಿಟ್ ನೀಡಿದ ಸಿನಿಮಾ ಎಂದರೆ ‘ಮಜಿಲಿ’. ಪ್ರೀತಿ ಕಥಾ ಹಂದರದ ಈ ಚಿತ್ರ ಸೂಪರ್ ಹಿಟ್ ಆಗಿದೆ. ಸಮಂತಾ ಅವರು ಈ ಚಿತ್ರದಲ್ಲಿ ನಟಿಸಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada