ಸಮಂತಾಗೆ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ನಾಗ ಚೈತನ್ಯ ಫ್ಯಾನ್ಸ್​; ಸ್ಯಾಮ್​ ಮಾಡಿದ ತಪ್ಪೇನು?

ನವೆಂಬರ್​ 23 ನಾಗ ಚೈತನ್ಯ ಅವರ ಜನ್ಮದಿನ. ಅವರ ನಟನೆಯ ‘ಥ್ಯಾಂಕ್​ ಯೂ’ ಹಾಗೂ ಬಂಗಾರ್​ರಾಜು ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ. ಇನ್ನು ಅವರಿಗೆ ಸಾಕಷ್ಟು ಜನರು ಶುಭಾಶಯ ಕೋರಿದ್ದಾರೆ.

ಸಮಂತಾಗೆ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ ನಾಗ ಚೈತನ್ಯ ಫ್ಯಾನ್ಸ್​; ಸ್ಯಾಮ್​ ಮಾಡಿದ ತಪ್ಪೇನು?
ಸಮಂತಾ ಅಕ್ಕಿನೇನಿ, ನಾಗ ಚೈತನ್ಯ

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಒಬ್ಬರಿಗೊಬ್ಬರು ಒಪ್ಪಿ ಕಾನೂನಾತ್ಮಕವಾಗಿಯೇ ವಿಚ್ಛೇದನ ಪಡೆದಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಈಗ ತಮ್ಮದೇ ಜೀವನದಲ್ಲಿ ಬ್ಯುಸಿ ಇದ್ದಾರೆ. ಸಮಂತಾ ದೇಶ-ವಿದೇಶಗಳಿಗೆ ಪ್ರವಾಸ ತೆರಳುತ್ತಾ ಹಾಯಾಗಿದ್ದಾರೆ. ಹೊಸಹೊಸ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ಹಳೆಯ ನೆನಪುಗಳನ್ನು ಮರೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಲ್ಲ. ಈ ಮಧ್ಯೆ ಸಮಂತಾಗೆ ನಾಗ ಚೈತನ್ಯ ಫ್ಯಾನ್ಸ್​ ಕಡೆಯಿಂದ ನಿಂದನಾತ್ಮಕ ಮಾತುಗಳು ಎದುರಾಗುತ್ತಿವೆ.

ನವೆಂಬರ್​ 23 ನಾಗ ಚೈತನ್ಯ ಅವರ ಜನ್ಮದಿನ. ಅವರ ನಟನೆಯ ‘ಥ್ಯಾಂಕ್​ ಯೂ’ ಹಾಗೂ ಬಂಗಾರ್​ರಾಜು ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ. ಇನ್ನು ಅವರಿಗೆ ಸಾಕಷ್ಟು ಜನರು ಶುಭಾಶಯ ಕೋರಿದ್ದಾರೆ. ಎಲ್ಲ ಕಡೆಗಳಿಂದಲೂ ಶುಭಾಶಯಗಳು ಹರಿದು ಬಂದವು. ಆದರೆ, ಸಮಂತಾ ಮಾತ್ರ ನಾಗ ಚೈತನ್ಯ ಅವರಿಗೆ ಶುಭಾಶಯ ತಿಳಿಸಿಲ್ಲ. ಇದು ಒಂದು ವರ್ಗದ ನಾಗ ಚೈತನ್ಯ ಫ್ಯಾನ್ಸ್​ಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಸಮಂತಾಗೆ ಕೆಟ್ಟ ಶಬ್ದಗಳಿಂದ ಬಯ್ಯುವ ಕೆಲಸ ಮಾಡಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಕಾನೂನಾತ್ಮಕವಾಗಿ ಬೇರೆ ಆಗಿರುವುದರಿಂದ ಅವರನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಬೇರೆ ಆದ ನಂತರ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗಿದೆ. ಹೀಗಿರುವಾಗ ಅಭಿಮಾನಿಗಳು ಈ ರೀತಿ ನಡೆದುಕೊಳ್ಳುವುದು ತಪ್ಪು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಈ ಜೋಡಿ ಒಟ್ಟಿಗೆ ಇದ್ದಾಗ ಅದ್ದೂರಿಯಾಗಿ ಬರ್ತ್​ಡೇ ಆಚರಣೆ ಮಾಡಿಕೊಂಡಿತ್ತು. ಕೆಲವರು ಈ ನೆನಪನ್ನು ಮೆಲಕು ಹಾಕಿದ್ದಾರೆ. ಅಷ್ಟೇ ಅಲ್ಲ, ಇಬ್ಬರ ನಡುವೆ ಮೂಡಿರುವ ವೈಮನಸ್ಸನ್ನು ಬಗೆ ಹರಿಸಿಕೊಂಡು ಮತ್ತೆ ಒಂದಾಗಿ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ. ಅಕ್ಟೋಬರ್​ ತಿಂಗಳ ಆರಂಭದಲ್ಲಿ ಈ ಜೋಡಿ ಬೇರೆ ಆಗುವ ನಿರ್ಧಾರ ತಿಳಿಸಿತ್ತು. ಇದು ಫ್ಯಾನ್ಸ್​ಗೆ ಬೇಸರ ತರಿಸಿತ್ತು.

ಇದನ್ನೂ ಓದಿ: Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ? 

Samantha: ಮದುವೆ ಹೆಣ್ಣಿಗೆ ಮೇಕಪ್​ ಮಾಡ್ತಾರೆ ಸಮಂತಾ; ಬುಕಿಂಗ್​ ಓಪನ್​ ಆಗಿದೆ ಎಂದ ನಟಿ

Click on your DTH Provider to Add TV9 Kannada