ಸಖತ್ ಅಪ್ಸೆಟ್ ಆದ್ರು ನಾಗ ಚೈತನ್ಯ ಫ್ಯಾನ್ಸ್

ನಾಗ ಚೈತನ್ಯ ಹಾಗೂ ರಾಶಿ ಖನ್ನಾ ಅವರು ‘ಥ್ಯಾಂಕ್​ ಯೂ’ ಚಿತ್ರಕ್ಕಾಗಿ ಒಂದಾಗಿದ್ದರು. ಮೊದಲ ದಿನ ನಾಗ ಚೈತನ್ಯ ಅವರ ಅಭಿಮಾನಿ ಬಳಗದವರು ಚಿತ್ರ ವೀಕ್ಷಿಸಿದರು. ಫ್ಯಾನ್ಸ್ ಕಡೆಯಿಂದಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿತು.

ಸಖತ್ ಅಪ್ಸೆಟ್ ಆದ್ರು ನಾಗ ಚೈತನ್ಯ ಫ್ಯಾನ್ಸ್
ನಾಗ ಚೈತನ್ಯ
TV9kannada Web Team

| Edited By: Rajesh Duggumane

Jul 26, 2022 | 6:30 AM

ನಾಗ ಚೈತನ್ಯ (Naga Chaitanya) ಫ್ಯಾನ್ಸ್ ಸಖತ್ ಅಪ್ಸೆಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಗದ್ದಲ ಕಡಿಮೆ ಆಗಿದೆ. ಇದಕ್ಕೆ ಕಾರಣ ಕಳೆದ ವಾರ ರಿಲೀಸ್ ಆದ ನಾಗ ಚೈತನ್ಯ ನಟನೆಯ ‘ಥ್ಯಾಂಕ್ ಯೂ’ ಸಿನಿಮಾ (Thank You Movie). ತೆಲುಗಿನಲ್ಲಿ ತೆರೆಗೆ ಬಂದ ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಇದು ಅವರ ಕರಿಯರ್​ನಲ್ಲೇ ಅತಿ ದೊಡ್ಡ ಫ್ಲಾಪ್ ಸಿನಿಮಾ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ನಾಗ ಚೈತನ್ಯ ಹಾಗೂ ರಾಶಿ ಖನ್ನಾ ಅವರು ‘ಥ್ಯಾಂಕ್​ ಯೂ’ ಚಿತ್ರಕ್ಕಾಗಿ ಒಂದಾಗಿದ್ದರು. ಇವರ ಕೆಮಿಸ್ಟ್ರಿ ಹಾಗೂ ಸಿನಿಮಾದ ಕಥೆ ಎರಡೂ ವರ್ಕ್​ ಆಗಿಲ್ಲ. ಮೊದಲ ದಿನ ನಾಗ ಚೈತನ್ಯ ಅವರ ಅಭಿಮಾನಿ ಬಳಗದವರು ಚಿತ್ರ ವೀಕ್ಷಿಸಿದರು. ಫ್ಯಾನ್ಸ್ ಕಡೆಯಿಂದಲೇ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಸಿಕ್ಕಿತು. ಇದರಿಂದ ಚಿತ್ರಕ್ಕೆ ದೊಡ್ಡ ಹಿನ್ನಡೆ ಆಗಿದೆ.

ಶನಿವಾರ ಹಾಗೂ ಭಾನುವಾರ ಸಿನಿಮಾ ವೀಕ್ಷಣೆಗೆ ಫ್ಯಾನ್ಸ್ ತೆರಳುತ್ತಾರೆ. ಆದರೆ, ಬೇಸರದ ಸಂಗತಿ ಎಂದರೆ ‘ಥ್ಯಾಂಕ್ ಯೂ’ ಚಿತ್ರ ಅನೇಕ ಕಡೆಗಳಲ್ಲಿ ಪ್ರೇಕ್ಷಕರಿಲ್ಲದೆ ವೀಕೆಂಡ್​ನಲ್ಲೂ ಖಾಲಿ ಹೊಡೆದಿದೆ. ಇಂದು (ಜುಲೈ 25) ಅನೇಕ ಕಡೆಗಳಲ್ಲಿ ಸಿನಿಮಾ ನೋಡುವವರೇ ಇಲ್ಲ. ಇದರಿಂದ ನಿರ್ಮಾಪಕರು ಕೈ ಸುಟ್ಟುಕೊಂಡಿದ್ದಾರೆ.

ನಿರ್ಮಾಪಕ ದಿಲ್ ರಾಜು ಅವರು ‘ಥ್ಯಾಂಕ್​ ಯೂ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಿಂದ ಅವರು ಸುಮಾರು 15 ಕೋಟಿ ನಷ್ಟ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ವಿಶ್ವಾದ್ಯಂತ ಈವರೆಗೆ ಕಲೆಕ್ಷನ್ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. ಈ ಚಿತ್ರ ಶೀಘ್ರವೇ ಒಟಿಟಿಗೆ ಕಾಲಿಡುವ ಸಾಧ್ಯತೆ ಇದೆ. ಈ ಚಿತ್ರವನ್ನು ಅಲ್ಲಿಯಾದರೂ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ

ಇದನ್ನೂ ಓದಿ

ನಾಗ ಚೈತನ್ಯ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್​ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಗೆಲುವಿನ ಲಯಕ್ಕೆ ಮರಳುವ ಉದ್ದೇಶದಲ್ಲಿದ್ದಾರೆ ನಾಗ ಚೈತನ್ಯ. ಈ ಚಿತ್ರದಲ್ಲಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada