Nagarjuna: ಮರದಲ್ಲಿ ಹಣ್ಣಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ; ವದಂತಿಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ನಾಗಾರ್ಜುನ

Nagarjuna: ಮರದಲ್ಲಿ ಹಣ್ಣಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ; ವದಂತಿಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ನಾಗಾರ್ಜುನ
ಸಮಂತಾ, ನಾಗಾರ್ಜುನ, ನಾಗ ಚೈತನ್ಯ

Samantha | Naga Chaitanya: ಸಮಂತಾ ಹಾಗೂ ನಾಗ ಚೈತನ್ಯ ಬ್ರೇಕಪ್ ಸಂದರ್ಭದಲ್ಲಿ ಹಲವು ವದಂತಿಗಳು ಹಬ್ಬಿದ್ದವು. ಸಮಂತಾ ಈಗಾಗಲೇ ಅಂಥವುಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ನಾಗ ಚೈತನ್ಯ ಹಾಗೂ ನಾಗಾರ್ಜುನ ಅಂಥವುಗಳಿಗೆ ಉತ್ತರಿಸಿದ್ದಾರೆ.

TV9kannada Web Team

| Edited By: shivaprasad.hs

Jan 22, 2022 | 1:20 PM

ಟಾಲಿವುಡ್​ನ ಸೂಪರ್ ಜೋಡಿ ಎಂದು ಕರೆಸಿಕೊಳ್ಳುತ್ತಿದ್ದ ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ (Samantha) 2021ರ ಅಕ್ಟೋಬರ್​ನಲ್ಲಿ ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಇದು ಅವರ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಬಹಳ ಕಾಲದ ನಂತರ ಇತ್ತೀಚೆಗೆ ನಾಗ ಚೈತನ್ಯ ಬ್ರೇಕಪ್ ಕುರಿತು ಮಾತನಾಡಿದ್ದರು. ನಾಗ ಚೈತನ್ಯ ತಂದೆ ನಾಗಾರ್ಜುನ ಕೂಡ ಬ್ರೇಕಪ್ ಕುರಿತು ಮಾತನಾಡಿ, ಆ ಸಂದರ್ಭದ ಒತ್ತಡ, ಕಷ್ಟಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಬ್ರೇಕಪ್ ಸಂದರ್ಭದಲ್ಲಿ ಹೆಚ್ಚು ಚರ್ಚೆಯಾಗಿದ್ದು, ಅದಕ್ಕಿರಬಹುದಾದ ಕಾರಣಗಳ ಕುರಿತು. ಆ ಸಂದರ್ಭದಲ್ಲಿ ಹಲವು ಯುಟ್ಯೂಬ್ ಚಾನಲ್​ಗಳು ಸಮಂತಾರ ಪಾತ್ರದ ಆಯ್ಕೆ, ಬೋಲ್ಡ್ ಸೀನ್​ಗಳಲ್ಲಿ ನಟಿಸುವುದು ನಾಗ ಚೈತನ್ಯ ಅವರಿಗೆ ಇಷ್ಟವಾಗಿರಲಿಲ್ಲ. ಇದೇ ಬ್ರೇಕಪ್​ಗೆ ಕಾರಣ ಎಂದು ಸುದ್ದಿ ಬಿತ್ತರಿಸಿದ್ದವು. ಕೆಲವು ವರದಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಸಮಂತಾ ನಿರ್ಧಾರದಿಂದ ಮಾವ ನಾಗಾರ್ಜುನ ಕೂಡ ಅಸಮಾಧಾನಗೊಂಡಿದ್ದರು ಎಂದಿದ್ದವು. ಇಂತಹ ವರದಿಗಳ ವಿರುದ್ಧ ಸಮಂತಾ ಕೂಡ ಕಿಡಿಕಾರಿದ್ದರು. ಇದೀಗ ನಾಗಾರ್ಜುನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಬಬಲ್ ಜತೆ ಮಾತನಾಡಿರುವ ನಾಗಾರ್ಜುನ, ಬ್ರೇಕಪ್ ಸಂದರ್ಭದಲ್ಲಿ ವದಂತಿಗಳು ಹರಡಿದ್ದರ ಬಗ್ಗೆ ಉತ್ತರಿಸಿದ್ದಾರೆ. ‘‘ನನಗೆ ಆ ಸಂದರ್ಭದಲ್ಲಿ ತಲೆಬಿಸಿಯಾಗಿದ್ದು ಕುಟುಂಬದ ಬಗ್ಗೆ ತಪ್ಪು ಮಾಹಿತಿಗಳು ಪ್ರಸಾರಾವಾದಾಗ. ಅದೊಂದೇ ವಿಚಾರ ನನಗೆ ಅರಗಿಸಿಕೊಳ್ಳಲು ಕಷ್ಟವಾಗಿದ್ದು.. ನನ್ನ ಬಗ್ಗೆ ಬರೆದುಕೊಳ್ಳಲಿ. ಅದು ಪರವಾಗಿಲ್ಲ’’ ಎಂದು ನಾಗಾರ್ಜುನ ಹೇಳಿದ್ದಾರೆ.

ಯಾವಾಗಲೂ ತೆಲುಗಿನ ಒಂದು ಮಾತನ್ನು ನೆನಪಿಸಿಕೊಳ್ಳುತ್ತೇನೆ. ‘ಒಂದು ಮರದಲ್ಲಿ ಹಣ್ಣಿದ್ದರೆ ಮಾತ್ರ ಕಲ್ಲು ಹೊಡೆಯುತ್ತಾರೆ’ ಎಂದು. ಜೀವನದಲ್ಲೂ ಈ ಮಾತು ಅನ್ವಯವಾಗುತ್ತದೆ. ಆದರೆ ಕುಟುಂಬದ ಬಗ್ಗೆ ಬರೆದಾಗ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಈಗೀಗ ಯುಟ್ಯೂಬ್ ಚಾನಲ್​ಗಳು ವೈಯಕ್ತಿಕ ತೇಜೋವಧೆಗೆ ಇಳಿಯುತ್ತವೆ..’’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ನಾಗಾರ್ಜುನ.

ನಾಗ ಚೈತನ್ಯ ಹೇಳಿದ್ದೇನು? ನಾಗ ಚೈತನ್ಯ ಕೂಡ ಇದೇ ವಿಚಾರ ಮಾತನಾಡಿದ್ದು, ‘‘ಮಾಧ್ಯಮಗಳು ಸುದ್ದಿ ಮಾಡುವುದು ಅವರ ಕರ್ತವ್ಯ. ಅದೇ ರೀತಿ ಅದಕ್ಕೆ ಪ್ರತಿಕ್ರಿಯೆ ನೀಡುವುದು ನನ್ನ ಆಯ್ಕೆ. ಒಂದು ವೇಳೆ ತಪ್ಪು ಮಾಹಿತಿ ಹೋಗುತ್ತಿದ್ದರೆ ಅದನ್ನು ಸರಿಪಡಿಸಬೇಕು. ಅದರ ಹೊರತಾಗಿ ಪ್ರತಿಕ್ರಿಯಿಸುವ ಅಗತ್ಯ ಇಲ್ಲ’’ ಎಂದಿದ್ದಾರೆ.

ಸಮಂತಾ ಬ್ರೇಕಪ್ ಕುರಿತು ಈಗಾಗಲೇ ಹಲವು ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ಬ್ರೇಕಪ್ ಸಂದರ್ಭದಲ್ಲಿ ಸಮಂತಾ ಬಗ್ಗೆ ಹಲವು ಬಗೆಯಲ್ಲಿ ತೇಜೋವಧೆಯನ್ನು ಕೆಲ ಯುಟ್ಯೂಬ್ ಚಾನಲ್​ಗಳು ಮಾಡಿದ್ದವು. ಅವುಗಳ ವಿರುದ್ಧ ಸಮಂತಾ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಅಂತಹ ವರದಿಗಳಲ್ಲಿ ‘ಸಮಂತಾಗೆ ಬೇರೆ ಸಂಬಂಧವಿತ್ತು. ತಾಯಿಯಾಗುವ ಬಯಕೆ ಇರಲಿಲ್ಲ. ಅಬಾರ್ಷನ್ ಆಗಿತ್ತು..’ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು. ಈ ಕುರಿತು ಕಿಡಿಕಾರಿದ್ದ ಸಮಂತಾ, ಕಠಿಣ ಕ್ರಮಕ್ಕೆ ಮುಂದಾಗಿದ್ದರು.

ಸಮಂತಾ ಹಾಗೂ ನಾಗಚೈತನ್ಯ 2021ರ ಅಕ್ಟೋಬರ್ 2ರಂದು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ಈ ಕುರಿತು ಈರ್ವರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇತ್ತೀಚೆಗೆ ಬ್ರೇಕಪ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದ ನಾಗ ಚೈತನ್ಯ, ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರ ಇದು. ಸಮಂತಾ ಖುಷಿಯಾಗಿದ್ದರೆ ನನಗೂ ಖುಷಿ ಎಂದು ಉತ್ತರಿಸಿದ್ದರು.

ಇದನ್ನೂ ಓದಿ:

ನಿಖಿಲ್​ ಹೊಸ ಸಿನಿಮಾ ಹೆಸರು ‘ಯದುವೀರ’; ಖಡಕ್​ ಲುಕ್​ ಮೂಲಕ ಹುಟ್ಟುಹಬ್ಬದ ಗಿಫ್ಟ್​

ಅಸ್ತವ್ಯಸ್ತಗೊಂಡ ವಾರ್ಡ್​ರೋಬ್ ಸರಿಪಡಿಸಿ ಕೈತುಂಬಾ ಸಂಪಾದನೆ ಮಾಡುತ್ತಿರುವ 19 ವರ್ಷದ ಯುವತಿ; ತಿಂಗಳಿಗೆ ಗಳಿಸುವ ಹಣವೆಷ್ಟು?

Follow us on

Related Stories

Most Read Stories

Click on your DTH Provider to Add TV9 Kannada