ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

ದಿ ಫ್ಯಾಮಿಲಿ ಮ್ಯಾನ್​ ಸರಣಿ ಹಿಟ್​ ಆದ ನಂತರದಲ್ಲಿ ಮನೋಜ್​ ಬಾಜಪೇಯಿ ಅವರಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ನಿರ್ದೇಶಕರು ಅವರ ಕಾಲ್​ಶೀಟ್​ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ.

ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​
ಫ್ಯಾಮಿಲಿ ಮ್ಯಾನ್ ಹೀರೋಗೋಸ್ಕರ ಓಪನ್​ ಆಗಿಯೇ ಕಾಲೆಳೆದುಕೊಂಡ ಅಮೇಜಾನ್​-ನೆಟ್​ಫ್ಲಿಕ್ಸ್​

ಮನೋಜ್​ ಬಾಜಪೇಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಅಮೇಜಾನ್​ ಪ್ರೈಮ್​ನಲ್ಲಿ ಈ ವೆಬ್​ ಸೀರಿಸ್​ ರಿಲೀಸ್​ ಆಗಿ ಒಂದು ವಾರ ಕಳೆದರೂ ಇದರ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಹೀಗಿರುವಾಗಲೇ ಮನೋಜ್​ ಬಾಜಪೇಯಿ ವಿಚಾರದಲ್ಲಿ ಅಮೇಜಾನ್​ ಮತ್ತು ನೆಟ್​ಫ್ಲಿಕ್ಸ್​ ಓಪನ್​ ಆಗಿಯೇ ಒಬ್ಬರಿಗೊಬ್ಬರು ಟಾಂಗ್​ ನೀಡಿವೆ.

ದಿ ಫ್ಯಾಮಿಲಿ ಮ್ಯಾನ್​ ಸರಣಿ ಹಿಟ್​ ಆದ ನಂತರದಲ್ಲಿ ಮನೋಜ್​ ಬಾಜಪೇಯಿ ಅವರಿಗೆ ಬೇಡಿಕೆ ಹೆಚ್ಚಿದೆ. ಸಾಕಷ್ಟು ನಿರ್ದೇಶಕರು ಅವರ ಕಾಲ್​ಶೀಟ್​ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ನೆಟ್​ಫ್ಲಿಕ್ಸ್​ನ ವೆಬ್​ ಸೀರಿಸ್​ ಒಂದರಲ್ಲಿ ನಟಿಸೋಕೆ ಮನೋಜ್​ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಅಮೇಜಾನ್​ಗೆ ಕೌಂಟರ್​ ನೀಡುವ ರೀತಿಯಲ್ಲಿ ನೆಟ್​​ಫ್ಲಿಕ್ಸ್ ಟ್ವೀಟ್​ ಮಾಡಿದೆ.

‘ಮನೋಜ್​ ನೆಟ್​ಫ್ಲಿಕ್ಸ್​ ಸೀರಿಸ್​ಗೆ ಬರುತ್ತಿದ್ದಾರೆ. ಮ್ಯಾನ್​, ನೀವು ನಮ್ಮ ಫ್ಯಾಮಿಲಿಯ ಭಾಗವಾಗುತ್ತಿರುವುದನ್ನು ನಾವು ಇಷ್ಟಪಡುತ್ತಿದ್ದೇವೆ’ ಎಂದು ನೆಟ್​ಫ್ಲಿಕ್ಸ್​ ಟ್ವೀಟ್​ ಮಾಡಿದೆ.

ನೆಟ್​ಫ್ಲಿಕ್ಸ್​ ಮಾಡಿರುವ ಟ್ವೀಟ್​ ಅನ್ನು ಅಮೇಜಾನ್ ಪ್ರೈಮ್​ ವಿಡಿಯೋ​ ರಿಟ್ವೀಟ್​ ಮಾಡಿ ಉತ್ತರಿಸಿದೆ. ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎಂದು ಪ್ರಶ್ನಿಸಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಶ್ರೀಕಾಂತ್ (ಮನೋಜ್​ ಬಾಜಪೇಯಿ)​ ಕೆಲಸ ಬದಲಿಸುತ್ತಾನೆ. ಆದರೆ, ಅವನಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ಹಳೆಯ ಕೆಲಸಕ್ಕೆ ಮರಳಬೇಕೆಂದು ಹಾತೊರೆಯುತ್ತಿರುತ್ತಾನೆ. ಈ ವೇಳೆ ಆತನಿ​ಗೆ ‘ಶ್ರೀಕಾಂತ್, ಉದ್ಯೋಗ ಬದಲಾಯಿಸಿದ್ದರಿಂದ ದೊಡ್ಡ ಬದಲಾವಣೆಯಾಗಿರಬೇಕು, ಅಲ್ಲವೇ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದೇ ಘಟನೆಯನ್ನು ಇಟ್ಟುಕೊಂಡು ನೆಟ್​ಫ್ಲಿಕ್ಸ್​ ಅಮೇಜಾನ್ ಟಾಂಗ್​ ಕೊಟ್ಟಿದೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ, ಹೆಂಡತಿ ಬಿಟ್ಟುಹೋದ ನೋವು; ಇದು ಮನೋಜ್​ ಬಾಜ​​ಪೇಯಿ ಜೀವನದ ಕಥೆ

Samantha Akkineni: ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಸಮಂತಾ, ಮನೋಜ್ ಬಾಜಪೇಯಿ ಪಡೆದ ಸಂಭಾವನೆ ಎಷ್ಟು?