ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಈಗ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಬರುವ ದೃಶ್ಯವೊಂದರ ಶೂಟಿಂಗ್​ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಮಂತಾ ಆ್ಯಕ್ಷನ್​ ದೃಶ್ಯಗಳಿವೆ.

ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ದಿ ಫ್ಯಾಮಿಲಿ ಮ್ಯಾನ್ 2 - ಸಮಂತಾ ಅಕ್ಕಿನೇನಿ

ದಿ ಫ್ಯಾಮಿಲಿ ಮ್ಯಾನ್​ 2 ವೆಬ್​ ಸೀರಿಸ್​ ರಿಲೀಸ್​ ಆಗಿ ದೊಡ್ಡ ಮಟ್ಟದ ಹೈಪ್​ ಪಡೆದುಕೊಂಡಿದೆ. ಅದರಲ್ಲೂ ಈ ವೆಬ್​ ಸೀರಿಸ್​ನಲ್ಲಿ ಸಮಂತಾ ನಟನೆ ನೋಡಿ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇನ್ನು ಸಮಂತಾ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್​ ಮಾಡಿದ್ದರು. ಸದ್ಯ, ಸಮಂತಾ ನಟನೆ ನೋಡಿ ಸಾಕಷ್ಟು ಮಂದಿ ಹೊಗಳುತ್ತಿದ್ದಾರೆ.

ಸೀಸನ್​ 2 ರಿಲೀಸ್​ಗೂ ಮೊದಲೇ ಸಮಂತಾ ಅಕ್ಕಿನೇನಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರು ರಾಜಲಕ್ಷ್ಮಿ ಚಂದ್ರನ್​ (ರಾಜಿ) ಆಗಿ ಕಾಣಿಸಿಕೊಂಡಿದ್ದಾರೆ. ಪ್ರತಿ ಬಾರಿ ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಂತಾ ಈ ಬಾರಿ ಅವತಾರ ಬದಲಿಸಿದ್ದಾರೆ. ಚೆನ್ನೈನ ಗಾರ್ಮೆಂಟ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ರಾಜಿ (ಸಮಂತಾ) ತುಂಬಾನೇ ಮುಗ್ಧೆ. ನಂತರ ಅವರ ನಿಜವಾದ ಅವತಾರ ಬಯಲಾಗುತ್ತದೆ. ರಾಜಿ ಪಾತ್ರ ನೋಡಿ ಎಲ್ಲರೂ ಅಕ್ಷರಶಃ ದಂಗಾಗಿದ್ದರು.

ಈಗ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಬರುವ ದೃಶ್ಯವೊಂದರ ಶೂಟಿಂಗ್​ ತುಣುಕನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸಮಂತಾ ಆ್ಯಕ್ಷನ್​ ದೃಶ್ಯಗಳಿವೆ. ಈ ವಿಡಿಯೋ ನೋಡಿದ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಕೂಡ ಈ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ. ಈ ವಿಡಿಯೋ ನೋಡಿದ ರಶ್ಮಿಕಾ ಬೆಂಕಿ ಸ್ಮೈಲಿ ಹಾಕಿ ಸಮಂತಾ ಅವರನ್ನು ಹೊಗಳಿದ್ದಾರೆ. ಇನ್ನು, ಈ ವಿಡಿಯೋ ನೋಡಿದ ಅನುಪಮಾ ಪರಮೇಶ್ವರನ್​ ಕೂಡ ವಿಡಿಯೋ ಬಗ್ಗೆ ಅಚ್ಚರಿ ಹೊರ ಹಾಕಿದ್ದಾರೆ.

‘ರಾಜಿ ಪಾತ್ರ ಕಾಲ್ಪನಿಕವೇ ಆಗಿರಬಹುದು. ಆದರೆ ಅಸಮಾನತೆಯ ಯುದ್ಧದಲ್ಲಿ ಮಡಿದ ಹಾಗೂ ಇಂದಿಗೂ ಆ ಯುದ್ಧದ ನೆನಪಿನಲ್ಲಿ ನೋವು ಅನುಭವಿಸುತ್ತಿರುವ ಎಲ್ಲರಿಗೂ ಈ ಪಾತ್ರ ನಮನ ಸಲ್ಲಿಸುತ್ತದೆ ಎಂಬುದು ನನ್ನ ಅಭಿಪ್ರಾಯ. ರಾಜಿ ಪಾತ್ರವನ್ನು ತುಂಬ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಬಿಂಬಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಒಂದು ವೇಳೆ ವಿಫಲವಾಗಿದ್ದರೆ, ಅಂತಹ ಅಸಂಖ್ಯಾತ ಜನರು ತಿರಸ್ಕಾರಕ್ಕೆ ಒಳಗಾಗುತ್ತಿದ್ದರು’ ಎಂದು ಸೋಶಿಯಲ್​ ಮೀಡಿಯಾ ಮೂಲಕ ಸಮಂತಾ ಪಾತ್ರದ ಬಗ್ಗೆ ತಿಳಿಸಿದ್ದರು.

ಇದನ್ನೂ ಓದಿ: ಸಮಂತಾ ರಾಜಿ ಆಗಲು ಒಪ್ಪಿಕೊಂಡಿದ್ದು ಏಕೆ? ಭಾರಿ ವಿವಾದದ ಬಳಿಕ ಬಾಯ್ಬಿಟ್ಟ ನಟಿ