ಸ್ಟಾರ್​ ನಟಿ ಆದ್ರೂ ಮಾಧುರಿ ದೀಕ್ಷಿತ್​ಗೆ ತಪ್ಪಲಿಲ್ಲ ಅಮ್ಮನ ಬೈಗುಳು; ಕಾರಣ ತಿಳಿಸಿದ ಧಕ್​ ಧಕ್​ ಸುಂದರಿ

ಸ್ಟಾರ್​ ನಟಿ ಆದ್ರೂ ಮಾಧುರಿ ದೀಕ್ಷಿತ್​ಗೆ ತಪ್ಪಲಿಲ್ಲ ಅಮ್ಮನ ಬೈಗುಳು; ಕಾರಣ ತಿಳಿಸಿದ ಧಕ್​ ಧಕ್​ ಸುಂದರಿ
ಮಾಧುರಿ ದೀಕ್ಷಿತ್​

‘ಶೂಟಿಂಗ್​ ಮುಗಿಸಿ ಮನೆಗೆ ಹೋದಾಗ ಗಂಡ-ಮಕ್ಕಳನ್ನು ನೋಡುತ್ತೇನೆ. ಅದೇ ಬೇರೆ ಜೀವನ. ನನ್ನತನವನ್ನು ನಾನು ಕಳೆದುಕೊಂಡಿಲ್ಲ’ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Feb 26, 2022 | 8:16 AM

ಯಾವುದೇ ವ್ಯಕ್ತಿ ಸ್ಟಾರ್​ ಆಗಿಬಿಟ್ಟರೆ ಅವರ ಲೈಫ್​ ಬದಲಾಗುತ್ತದೆ. ಸಾಮಾನ್ಯ ವ್ಯಕ್ತಿ ಆಗಿದ್ದಾಗ ಸಿಗುವ ಗೌರವವೇ ಬೇರೆ, ಸಿನಿಮಾ ಸೆಲೆಬ್ರಿಟಿ ಆಗಿದ್ದಾಗ ಸಿಗುವ ಗೌರವವೇ ಬೇರೆ. ಸ್ವಂತ ಕುಟುಂಬದವರು ಕೂಡ ಸಖತ್​ ಮರ್ಯಾದೆ ಕೊಡೋಕೆ ಆರಂಭಿಸುತ್ತಾರೆ. ಆದರೆ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ಬೇರೆಯದೇ ಕಥೆ ಹೇಳ್ತಾರೆ. ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಸ್ಟಾರ್​ ನಟಿಯಾಗಿ ಬೆಳೆದ ಬಳಿಕವೂ ಅವರು ಮನೆಯಲ್ಲಿ ಬೈಯಿಸಿಕೊಳ್ಳುವುದು ತಪ್ಪಿರಲಿಲ್ಲ! ಆ ವಿಚಾರವನ್ನು ಅವರು ಈಗ ಬಾಯಿ ಬಿಟ್ಟಿದ್ದಾರೆ. ಮಾಧುರಿ ನಟನೆಯ ‘ದಿ ಫೇಮ್​ ಗೇಮ್​’ ವೆಬ್​ ಸರಣಿ ಬಿಡುಗಡೆ ಆಗಿದೆ. ನೆಟ್​ಫ್ಲಿಕ್ಸ್​ನಲ್ಲಿ (Netflix) ಪ್ರಸಾರ ಆಗುತ್ತಿರುವ ಈ ಸಿರೀಸ್​ನಲ್ಲಿ ಅವರು ಸ್ಟಾರ್​ ನಟಿಯ ಪಾತ್ರ ಮಾಡಿದ್ದಾರೆ. ಭಾರತದ ಫೇಮಸ್​ ನಟಿಯೊಬ್ಬಳು ಕಾಣೆ ಆಗುತ್ತಾಳೆ. ಆಕೆಯನ್ನು ಹುಡುಕುತ್ತಾ ಹೊರಟಾಗ ಸೆಲೆಬ್ರಿಟಿ ಬದುಕಿನ ಕರಾಳ ಸತ್ಯಗಳು ಬಯಲಾಗುತ್ತ ಹೋಗುತ್ತವೆ. ಇದು ‘ದಿ ಫೇಮ್​ ಗೇಮ್​’ (The Fame Game, Web Series) ಕಥೆಯ ಒನ್​ ಲೈನ್​. ರಿಯಲ್​ ಲೈಫ್​ನಲ್ಲಿ ಮಾಧುರಿ ದೀಕ್ಷಿತ್​ ಅವರಿಗೆ ತಮ್ಮ ಜನಪ್ರಿಯತೆಯಿಂದ ತೊಂದರೆ ಆಗಿಲ್ಲ. ಅದಕ್ಕೆ ಕಾರಣ ತಾವು ಬೆಳೆದು ಬಂದ ರೀತಿ ಎಂದು ಅವರು ಹೇಳಿದ್ದಾರೆ.

ಮಾಧುರಿ ದೀಕ್ಷಿತ್​ ಅವರು ಸಿನಿಮಾ ಮತ್ತು ನಿಜ ಜೀವನದ ನಡುವೆ ಒಂದು ಅಂತರವನ್ನು ಕಾಯ್ದುಕೊಂಡಿದ್ದಾರೆ. ಅವರ ಮನೆಯಲ್ಲಿ ವಾತಾವರಣ ಕೂಡ ಅದೇ ರೀತಿ ಇತ್ತು. ಮಾಧುರಿ ದೀಕ್ಷಿತ್​ ದೊಡ್ಡ ಸ್ಟಾರ್​ ನಟಿ ಆದ ನಂತರವೂ ಅವರ ತಾಯಿ ಸ್ನೇಹತಲಾ ದೀಕ್ಷಿತ್​ ಅವರು ಮನೆ ಕೆಲಸದ ವಿಚಾರವಾಗಿ ಮಗಳಿಗೆ ಬೈಯ್ಯುವುದನ್ನು ನಿಲ್ಲಿಸಿರಲಿಲ್ಲ. ‘ಒಂದು ವೇಳೆ ನಾನು ರೂಮ್​ ಸರಿಯಾಗಿ ಇಟ್ಟುಕೊಳ್ಳದೇ ಇದ್ದರೆ ನಮ್ಮ ಅಮ್ಮ ನನಗೆ ಬೈಯ್ಯುತ್ತಿದ್ದರು. ನಾನು ಬಾಲಿವುಡ್​ನಲ್ಲಿ ಫೇಮಸ್​ ಹೀರೋಯಿನ್​ ಆದ ನಂತರವೂ ಅದು ಮುಂದುವರಿದಿತ್ತು. ಅವರು ನಮ್ಮನ್ನು ಆ ರೀತಿ ಬೆಳೆಸಿದ್ದಾರೆ. ಶೂಟಿಂಗ್​ ಮುಗಿಸಿ ಮನೆಗೆ ಹೋದಾಗ ನಾನು ಸಂಪೂರ್ಣ ಬೇರೆ ವ್ಯಕ್ತಿ ಆಗಿರುತ್ತೇನೆ. ಗಂಡ ಮತ್ತು ಮಕ್ಕಳನ್ನು ನೋಡುತ್ತೇನೆ. ಅದೇ ಬೇರೆ ಜೀವನ. ನನ್ನತನವನ್ನು ನಾನು ಕಳೆದುಕೊಂಡಿಲ್ಲ’ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದಾರೆ.

‘ಸಿನಿಮಾವನ್ನು ನಾನು ವೃತ್ತಿಯಾಗಿ ನೋಡುತ್ತೇನೆ, ಕ್ಯಾಮೆರಾ ಮುಂದೆ ನಿಂತಿದ್ದಾಗ ನಾನು ವೃತ್ತಿಪರ ನಟಿ. ನಾನೇನು ಮಾಡುತ್ತೇನೆ ಎಂಬುದು ತಿಳಿದಿರುತ್ತದೆ. ಸ್ಕ್ರಿಪ್ಟ್​ ಓದಿಕೊಂಡು ನಟಿಸುತ್ತೇನೆ. ಕ್ಯಾಮೆರಾ ಸಲುವಾಗಿ ನಾನು ಆ ಪಾತ್ರವೇ ಆಗಿ ಬದಲಾಗುತ್ತೇನೆ. ಆದರೆ ಶೂಟಿಂಗ್​ ಮುಗಿಸಿ ಮನೆಗೆ ಹೋದರೆ ನಾನು ಸಾಮಾನ್ಯ ವ್ಯಕ್ತಿಯಾಗಿ ಇರುತ್ತೇನೆ. ಯಾಕೆಂದರೆ ನಮ್ಮ ಮನೆಯಲ್ಲಿ ನನ್ನನ್ನು ಬೆಳೆಸಿದ್ದೇ ಈ ರೀತಿಯಲ್ಲಿ’ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದಾರೆ.

ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದ ಮಾಧುರಿ ದೀಕ್ಷಿತ್​ ಅವರಿಗೆ ದೇಶಾದ್ಯಂತ ಫ್ಯಾನ್ಸ್​ ಇದ್ದಾರೆ. ‘ಧಕ್​ ಧಕ್​ ಕರ್ನೇ ಲಗಾ..’ ಎಂದು ಕುಣಿಯುವ ಮೂಲಕ ಜನಮನ ಗೆದ್ದ ಅವರು ಈಗ ಒಟಿಟಿ ವೇದಿಕೆಗೂ ಕಾಲಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ವೆಬ್​ ಸಿರೀಸ್​ನಲ್ಲಿ ನಟಿಸಿದ್ದಾರೆ. ‘ದಿ ಫೇಮ್​ ಗೇಮ್​’ ಶೀರ್ಷಿಕೆಯ ಈ ವೆಬ್​ ಸಿರೀಸ್​ ಫೆ.25ರಿಂದ ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:

ಮಾಧುರಿ ದೀಕ್ಷಿತ್ ಜತೆಗಿನ 22 ವರ್ಷ ಹಳೆಯ ಫೋಟೋ ಹಂಚಿಕೊಂಡ ಪತಿ ಶ್ರೀರಾಮ್

ಮಾಧುರಿ ದೀಕ್ಷಿತ್​ ಜನ್ಮದಿನ; ‘ಏಕ್​ ದೋ ತೀನ್​’ ಸುಂದರಿಗೆ ಈಗ ಎಷ್ಟು ವರ್ಷ?

Follow us on

Related Stories

Most Read Stories

Click on your DTH Provider to Add TV9 Kannada