ಸಾಹೋ ನಂತರ ಡೆವಿಲ್ ಆಗಿ ಅಬ್ಬರಿಸುತ್ತಾರಾ ಪ್ರಭಾಸ್?
ಟಾಲಿವುಡ್ ನಟ ಪ್ರಭಾಸ್ ಬಾಹುಬಲಿ ನಂತರ ಸಾಹೋ ಆಗಿ ಅಬ್ಬರಿಸಿ ಈಗ ಜಾನ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಅವತಾರ ತಾಳಿ ಕಮಾಲ್ ಮಾಡ್ತಿರೋ ಪ್ರಭಾಸ್ ಸದ್ಯ ಡೆವಿಲ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಹಾರರ್ ಸಿನಿಮಾಗೆ ಓಕೆ ಅಂತಾರಾ ‘ಡಾಲಿಂಗ್’..? ಅಂದಹಾಗೆ ಪ್ರಭಾಸ್ ಡೆವಿಲ್ ಆಗಿ ಸಿನಿ ರಸಿಕರಿಗೆ ಕಿಕ್ ಕೊಡ್ತಾರಂತೆ. ಡೆವಿಲ್ ಆಗೋಕೆ ಓಕೆ ಅಂತಾರೆ ಅನ್ನೋ ಸುದ್ದಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಡೆವಿಲ್ ಅನ್ನೋದು […]

ಟಾಲಿವುಡ್ ನಟ ಪ್ರಭಾಸ್ ಬಾಹುಬಲಿ ನಂತರ ಸಾಹೋ ಆಗಿ ಅಬ್ಬರಿಸಿ ಈಗ ಜಾನ್ ಆಗಿ ರಂಜಿಸೋಕೆ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನ ಅವತಾರ ತಾಳಿ ಕಮಾಲ್ ಮಾಡ್ತಿರೋ ಪ್ರಭಾಸ್ ಸದ್ಯ ಡೆವಿಲ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಹಾರರ್ ಸಿನಿಮಾಗೆ ಓಕೆ ಅಂತಾರಾ ‘ಡಾಲಿಂಗ್’..?
ಅಂದಹಾಗೆ ಪ್ರಭಾಸ್ ಡೆವಿಲ್ ಆಗಿ ಸಿನಿ ರಸಿಕರಿಗೆ ಕಿಕ್ ಕೊಡ್ತಾರಂತೆ. ಡೆವಿಲ್ ಆಗೋಕೆ ಓಕೆ ಅಂತಾರೆ ಅನ್ನೋ ಸುದ್ದಿ ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಡೆವಿಲ್ ಅನ್ನೋದು ಸದ್ಯ ಬಾಲಿವುಡ್ ನಟ ರಣಬೀರ್ ಕಪೂರ್ಗಾಗಿ ತಯಾರಾಗಿದ್ದ ಕಥೆ. ರಣಬೀರ್ ಕಪೂರ್ಗೆ ಕಥೆ ಹೇಳಿ ನಟಿಸೋದು ಕೂಡ ಕನ್ಫರ್ಮ್ ಆಗಿತ್ತು. ಅರ್ಜುನ್ ರೆಡ್ಡಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಸಿನಿಮಾಗೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳೋಕೆ ಕೂಡ ರೆಡಿಯಾಗಿದ್ರು. ಆದ್ರೀಗ ಕಾರಣಾಂತರದಿಂದ ರಣಬೀರ್ ಕಪೂರ್ ಈ ಸಿನಿಮಾದಲ್ಲಿ ನಟಿಸ್ತಿಲ್ಲ ಅಂತ ಹೇಳಲಾಗ್ತಿದೆ.
ಹೀಗಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಡೆವಿಲ್ ಕತೆಯನ್ನ ಪ್ರಭಾಸ್ ಗೆ ಹೇಳಿದ್ದಾರಂತೆ. ಇನ್ನು ಈ ಕಥೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದ್ದು ಪ್ರಭಾಸ್ ಕೂಡ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಎಲ್ಲಾ ಅಂದ್ಕೊಡಂತೆ ಆದ್ರೆ, ಜಾನ್ ನಂತರ ಪ್ರಭಾಸ್ ಡೆವಿಲ್ ಅವತಾರ ತಾಳಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಲವಾಗಿ ಹರಿದಾಡ್ತಿದೆ.
ಒಟ್ಟಿನಲ್ಲಿ ಟೈಟಲ್ನಲ್ಲಿಯೇ ನೆಗೆಟೀವ್ ಶೇಡ್ ಇದ್ದು, ಡೆವಿಲ್ ಹಾರರ್ ಕಥೆ ಎನ್ನಲಾಗಿದೆ. ಆದ್ರೆ, ಡೆವಿಲ್ ಆಗಿ ಪ್ರಭಾಸ್ ಅಬ್ಬರಿಸುತ್ತಾರಾ..? ಇಲ್ವಾ ಅನ್ನೋದಕ್ಕೆ ಇನ್ನೂ ಅಧಿಕೃತ ಮುದ್ರೆ ಬೀಳಬೇಕಿದೆ.
Published On - 9:26 am, Thu, 26 December 19