ಸೂಪರ್​ ಸ್ಟಾರ್​ ಪಟ್ಟಕ್ಕೇರಲು ರಶ್ಮಿಕಾ ಹರಸಾಹಸ, ರಾಮ್‌ ಚರಣ್ ಜೊತೆ ನಟಿಸಲು ಕಷ್ಟಪಟ್ಟು ಡೇಟ್‌ ಹೊಂದಿಸಿಕೊಳ್ತಿದ್ದಾರಂತೆ..

Rashmika Mandanna: ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿರೋದು ಗೊತ್ತಿರೋ ವಿಚಾರ. ಈ ನಡುವೆ ಮತ್ತೊಂದು ಹೊಸ ಪಟ್ಟಕ್ಕೇರಲು ರಶ್ಮಿಕಾ ಅಣಿಯಾಗಿದ್ದಾರೆ. ಅದು ಅಂತಿಂಥಾ ಪಟ್ಟವಲ್ಲ. ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂಥಾ ಪಟ್ಟ. ಇದ್ರ ಕಂಪ್ಲೀಟ್‌ ಡಿಟೇಲ್ಸ್ ಇಲ್ಲಿದೆ.

  • ಭಾಗ್ಯಸಿದ್ದಪ್ಪ
  • Published On - 8:19 AM, 24 Feb 2021
ಸೂಪರ್​ ಸ್ಟಾರ್​ ಪಟ್ಟಕ್ಕೇರಲು ರಶ್ಮಿಕಾ ಹರಸಾಹಸ, ರಾಮ್‌ ಚರಣ್ ಜೊತೆ ನಟಿಸಲು ಕಷ್ಟಪಟ್ಟು ಡೇಟ್‌ ಹೊಂದಿಸಿಕೊಳ್ತಿದ್ದಾರಂತೆ..
ನಟ ರಾಮ್‌ಚರಣ್‌ ಮತ್ತು ನಟಿ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಹೇಳ್ಬೇಕು ಅಂದ್ರೆ ನಾಲ್ಕು ಚಿತ್ರರಂಗದ ಬಗ್ಗೆ ಮಾತನಾಡ್ಬೇಕು. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ತಮ್ಮದೇ ಛಾಪು ಮೂಡಿಸಿದ್ದಾರೆ. ಕನ್ನಡದ ನಂತ್ರ ತೆಲುಗು, ತಮಿಳು, ಹಿಂದಿಯಲ್ಲೂ ಕಮಾಲ್‌ ಮಾಡೋಕೆ ರಶ್ಮಿಕಾ ಮುಂದಾಗಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ಕಿರಿಕ್ ಪಾರ್ಟ್‌ ಸಿನಿಮಾ ನಂತ್ರ ಮಾಡಿದ್ದೇ ಬಹುತೇಕ ಸ್ಟಾರ್ ಸಿನಿಮಾಗಳೇ.. ಗೋಲ್ಡನ್ ಸ್ಟಾರ್ ಗಣೇಶ್‌, ಪವರ್ ಸ್ಟಾರ್‌ ಪುನಿತ್ ರಾಜ್‌ಕುಮಾರ್, ಚಾಲೆಂಜಿಂಗ್‌ ಸ್ಟಾರ್ ದರ್ಶನ್, ಧ್ರುವ ಸರ್ಜಾರಂತಹ ಸ್ಯಾಂಡಲ್‌ವುಡ್‌ ಬಿಗ್ ಸ್ಟಾರ್‌ನೊಂದಿಗೆ ರಶ್ಮಿಕಾ ತೆರೆ ಹಂಚಿಕೊಂಡು ಸ್ಟಾರ್‌ ನಟಿಯಾಗಿದ್ದಾರೆ. ಈಗ ಇದೇ ಸೂತ್ರವನ್ನ ರಶ್ಮಿತ ಇತರೆ ಭಾಷೆಗಳಲ್ಲೂ ಪ್ರಯೋಗ ಮಾಡ್ತಿದ್ದಾರೆ.

ಟಾಲಿವುಡ್​ ಕ್ವೀನ್ ಪಟ್ಟಕ್ಕೇರಲು ಮಾಸ್ಟರ್​ ಪ್ಲ್ಯಾನ್​
ಕರುನಾಡ ಕ್ರಶ್‌ ಆಗಿ ಮಿಂಚುತ್ತಿದ್ದ ರಶ್ಮಿಕಾ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದು ಚಲೋ ಚಿತ್ರದ ಮೂಲಕ. ನಂತ್ರ ಆಕೆ ಕಾಣಿಸಿಕೊಂಡಿದ್ದು, ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ ಜತೆ. ತೆಲುಗಿನಲ್ಲಿ ನಿತಿನ್‌, ನಾನಿ, ವಿಜಯ್‌ ದೇವರಕೊಂಡ, ಮಹೇಶ್‌ ಬಾಬು ನಂತ್ರ ಅಲ್ಲು ಅರ್ಜುನ್‌ ಜತೆಗೂ ಆ್ಯಕ್ಟ್‌ ಮಾಡ್ತಿದ್ದಾರೆ. ಇದೀಗ ರಶ್ಮಿಕಾ ಮುಂದಿನ ಬೇಟೆ ರಾಮ್‌ಚರಣ್‌.

ಆಚಾರ್ಯ ಸಿನಿಮಾದಲ್ಲೇ ರಶ್ಮಿಕಾ, ರಾಮ್‌ ಚರಣ್‌ ತೇಜಗೆ ಜೊತೆಯಾಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಈ ಜಾಗಕ್ಕೆ ಪೂಜಾ ಹೆಗ್ಡೆ ಬಂದಿದ್ದಾರೆ. ಹಾಗಾಗಿ ಹೊಸ ಚಿತ್ರದಲ್ಲಿ ರಾಮ್‌ ಚರಣ್‌ ತೇಜ ಜೊತೆ ನಟಿಸೋಕೆ ರಶ್ಮಿಕಾ ಸೈ ಎಂದಿದ್ದಾರಂತೆ.

ರಶ್ಮಿಕಾ ಸ್ಟಾರ್‌ ನಟರ ಸಿನಿಮಾ ಮಾಡ್ತಿದ್ದಾರೆ ಅನ್ನೋದಕ್ಕಿಂತ ಸ್ಟಾರ್‌ ಸಿನಿಮಾಗಳನ್ನ ಮಿಸ್‌ ಮಾಡಿಕೊಳ್ಳೋದಿಲ್ಲ ಅನ್ನೋದೇ ಸದ್ಯದ ವಿಷ್ಯ. ರಶ್ಮಿಕಾ ತೆಲುಗು, ಬಾಲಿವುಡ್‌ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಸದ್ಯಕ್ಕೆ ಮತ್ಯಾವ ಸಿನಿಮಾಗೂ ಸಮಯ ಕೊಡಲು ಆಗ್ತಿಲ್ಲವಂತೆ. ಆದ್ರೂ ರಾಮ್‌ಚರಣ್‌ ಸಿನಿಮಾ ಬಿಡಬಾರ್ದು ಅನ್ನೋದು. ಹೀಗಾಗಿ ಕಷ್ಟಪಟ್ಟು ಡೇಟ್‌ ಹೊಂದಿಸಿಕೊಳ್ತಿದ್ದಾರಂತೆ. ಅದ್ರಲ್ಲೂ ರಾಮ್​ಚರಣ್​ಗೆ ಶಂಕರ್ ನಿರ್ದೇಶನ ಮಾಡ್ತಿದ್ದು, ಈ ಚಿತ್ರಕ್ಕಾಗಿ ರಶ್ಮಿಕಾ ಹೆಚ್ಚು ದಿನಗಳ ಕಾಲ ಡೇಟ್ ಕೊಡಬೇಕಾಗಿದೆಯಂತೆ.

ಕನ್ನಡದಂತೆಯೇ ರಶ್ಮಿಕಾ ಟಾಲಿವುಡ್‌ನಲ್ಲೂ ಬ್ಯಾಕ್‌ ಟು ಬ್ಯಾಕ್‌ ಸ್ಟಾರ್‌ ಸಿನಿಮಾಗಳನ್ನೇ ಮಾಡ್ತಿದ್ದಾರೆ. ಹಾಗಾಗಿ ಇನ್ನೇನು ಟಾಲಿವುಡ್‌ ಕ್ವೀನ್ ಪಟ್ಟಕ್ಕೇರಲು ಕೆಲವೇ ಸಿನಿಮಾಗಳು ಮಾತ್ರವೇ ಬಾಕಿ ಇವೆ. ಇನ್ನು ಪ್ರಭಾಸ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಜೊತೆಗೆ ರಶ್ಮಿಕಾ ಅಭಿನಯಿಸಿದ್ರೆ ಪಕ್ಕಾ ಟಾಲಿವುಡ್‌ ಕ್ವೀನ್‌ ಅನ್ನಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ‘ಪೊಗರು’, ಅವರು ಮಾಡಿದ ತಪ್ಪನ್ನು ಕನ್ನಡಿಗರು ಕ್ಷಮಿಸ್ತಾರಾ?