ವಧುಗಾಗಿ ಬಿಲ್ಲಾ ಫ್ಯಾಮಿಲಿ ತಲಾಶ್: ಹೊಸ ವರ್ಷದಲ್ಲಾದ್ರೂ ಕೂಡಿ ಬರುತ್ತಾ ಕಂಕಣ ಭಾಗ್ಯ!

ವಧುಗಾಗಿ ಬಿಲ್ಲಾ ಫ್ಯಾಮಿಲಿ ತಲಾಶ್: ಹೊಸ ವರ್ಷದಲ್ಲಾದ್ರೂ ಕೂಡಿ ಬರುತ್ತಾ ಕಂಕಣ ಭಾಗ್ಯ!

ಬಾಹುಬಲಿ ನಟ ಪ್ರಭಾಸ್ ಕಲ್ಯಾಣದ ಬಗ್ಗೆ ಆಗಾಗ ಚರ್ಚೆ ಆಗ್ತಾನೇ ಇರುತ್ತೆ. ಅಂದ ಹಾಗೆ ಈಗ ಮತ್ತೆ ಪ್ರಭಾಸ್ ವೈವಾಹಿಕ ಜೀವನಕ್ಕೆ ಕಾಲಿಡೋ ಬಗ್ಗೆ ಹೊಸ ಸುದ್ದಿ ಸಂಚಲನ ಮೂಡಿಸ್ತಿದೆ. ಹಾಗಾದ್ರೆ, ಯಾವ ರೀತಿಯ ಹುಡುಗಿ ತಲಾಷ್​ನಲ್ಲಿದೆ ಅನ್ನೋದೇ ಇಂಟ್ರೆಸ್ಟಿಂಗ್. ಟಾಲಿವುಡ್ ನಟ ಪ್ರಭಾಸ್​ರ ಇಮೇಜ್​ನ್ನೇ ಬಾಹುಬಲಿ ನಂತರ ಬದಲಾಗಿ ಹೋಗಿದೆ. ಹೀಗಾಗಿ, ಪ್ರಭಾಸ್ ನಡೆ ನುಡಿ. ಸಂಚಲನದ ಮೇಲೆ ಟಾಲಿವುಡ್ ಅಂಗಳದಲ್ಲಿ ಮಾತ್ರವಲ್ಲಾ, ಎಲ್ಲಾ ಸಿನಿಮಾಸಕ್ತರಿಗೂ ಕುತೂಹಲ ಹೆಚ್ಚಿಸಿದೆ. ಅಂದ ಹಾಗೆ ಪ್ರಭಾಸ್ ಸಿನಿಮಾಗಳಿಂದ ಒಂದು […]

sadhu srinath

| Edited By: Skanda

Nov 24, 2020 | 7:53 AM

ಬಾಹುಬಲಿ ನಟ ಪ್ರಭಾಸ್ ಕಲ್ಯಾಣದ ಬಗ್ಗೆ ಆಗಾಗ ಚರ್ಚೆ ಆಗ್ತಾನೇ ಇರುತ್ತೆ. ಅಂದ ಹಾಗೆ ಈಗ ಮತ್ತೆ ಪ್ರಭಾಸ್ ವೈವಾಹಿಕ ಜೀವನಕ್ಕೆ ಕಾಲಿಡೋ ಬಗ್ಗೆ ಹೊಸ ಸುದ್ದಿ ಸಂಚಲನ ಮೂಡಿಸ್ತಿದೆ. ಹಾಗಾದ್ರೆ, ಯಾವ ರೀತಿಯ ಹುಡುಗಿ ತಲಾಷ್​ನಲ್ಲಿದೆ ಅನ್ನೋದೇ ಇಂಟ್ರೆಸ್ಟಿಂಗ್.

ಟಾಲಿವುಡ್ ನಟ ಪ್ರಭಾಸ್​ರ ಇಮೇಜ್​ನ್ನೇ ಬಾಹುಬಲಿ ನಂತರ ಬದಲಾಗಿ ಹೋಗಿದೆ. ಹೀಗಾಗಿ, ಪ್ರಭಾಸ್ ನಡೆ ನುಡಿ. ಸಂಚಲನದ ಮೇಲೆ ಟಾಲಿವುಡ್ ಅಂಗಳದಲ್ಲಿ ಮಾತ್ರವಲ್ಲಾ, ಎಲ್ಲಾ ಸಿನಿಮಾಸಕ್ತರಿಗೂ ಕುತೂಹಲ ಹೆಚ್ಚಿಸಿದೆ. ಅಂದ ಹಾಗೆ ಪ್ರಭಾಸ್ ಸಿನಿಮಾಗಳಿಂದ ಒಂದು ಕಡೆ ಸುದ್ದಿಯಾದ್ರೆ, ಆಗಾಗ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಸುದ್ದಿಯಾಗ್ತಿರ್ತಾರೆ. ಪ್ರಭಾಸ್​ಗೆ ಬರೋಬ್ಬರಿ 40 ವರ್ಷವಾದ್ರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿಲ್ಲ. ಹೀಗಾಗಿ, ಪ್ರಭಾಸ್ ಮದುವೆ ಬಗ್ಗೆ ಎಲ್ಲಿಂದಲೇ ಆಗಲಿ ಸಣ್ಣ ಸುದ್ದಿ ಹರಡಿದರೂ ದೊಡ್ಡ ಸಂಚಲನ ಮೂಡಿಸುತ್ತವೆ.

ವಧುಗಾಗಿ ಪ್ರಭಾಸ್ ಫ್ಯಾಮಿಲಿ ಹುಡುಕಾಟ: ಸದ್ಯ ಪ್ರಬಾಸ್ ಮದುವೆ ಬಗ್ಗೆ ಹರಡಿರೋ ಮಾಹಿತಿ ನೋಡಿದ್ರೆ, ಅನುಷ್ಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡ್ತಾರೆ ಅನ್ನೋ ಸುದ್ದಿಗೆ ಬ್ರೇಕ್ ಬಿದ್ದಿದೆ. ಯಾಕಂದ್ರೆ, ಪ್ರಭಾಸ್ ಕುಟುಂಬದ ಆಪ್ತ ಮೂಲಗಳಿಂದ ಹೊರ ಬಿದ್ದಿರೋ ಮಾಹಿತಿ ಪ್ರಕಾರ, ಸದ್ಯ ಪ್ರಭಾಸ್ ಜೊತೆ ಸಪ್ತಪದಿ ತುಳಿಯೋ ಹುಡುಗಿಗಾಗಿ ಹುಟುಕಾಟ ನಡೆದಿದೆಯಂತೆ. ಇವರದ್ದು ದೊಡ್ಡ ಕುಟುಂಬವಾಗಿದ್ದು, ಮನೆಯಲ್ಲಿ ಎಲ್ಲರ ಜೊತೆ ಹೊಂದಿಕೊಂಡು ನಡೆಯೋ ಹುಡುಗಿಗಾಗಿ ಹುಡುಕಾಟ ನಡೆಸ್ತಿದ್ದಾರಂತೆ.

2020ಕ್ಕೆ ಪ್ರಭಾಸ್ ಕಲ್ಯಾಣ ಫಿಕ್ಸ್ ? ಇನ್ನು ಡಿಸೆಂಬರ್ 31ರ 2019ರಂದು ಪ್ರಭಾಸ್ ತಮ್ಮ ಮದುವೆ ಕುರಿತು ಒಂದು ಸ್ಪಷ್ಟನೆಯನ್ನೂ ಕೊಡ್ತಾರೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಸದ್ಯ ಕುಟುಂಬದವರೆಲ್ಲರಿಗೂ ಹೊಂದಿಕೊಳ್ಳೋ ಹುಡುಗಿ ಹುಡುಕ್ತಿದ್ದೀವಿ ಅಂತಾ ಪ್ರಭಾಸ್​ರ ಆಂಟಿ ಕೃಷ್ಣಮ್ಮ ಕ್ಲ್ಯೂ ಕೊಟ್ಟಿದ್ದಾರೆ. ಒಟ್ನಲ್ಲಿ, 2020ಕ್ಕೆ ಪ್ರಭಾಸ್ ಕಲ್ಯಾಣ ಆಗೋಕೆ ಮುಹೂರ್ತ ಫಿಕ್ಸ್ ಆಗಿದೆ. ವೈವಾಹಿಕ ಜೀವನಕ್ಕೆ ಕಾಲಿಡೋ ಸುದ್ದಿಗೆ ಸದ್ಯದಲ್ಲೇ ಬ್ರೇಕ್ ಬೀಳೋದೂ ಪಕ್ಕಾ ಆಗಿದೆ. ಹಾಗಾದ್ರೆ, ಬಾಹುಬಲಿ ಜೊತೆ ಸಪ್ತಪದಿ ತುಳಿದು ವಿವಾಹ ಬಂಧನಕ್ಕೆ ಒಳಗಾಗೋ ಹುಡುಗಿ ಯಾರು ಅನ್ನೋದನ್ನು ಕಾದು ನೋಡಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada