ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ರಿಕ್ಕಿ ಕೇಜ್​; ಸೃಷ್ಟಿ ಆಗಲಿದೆ ಹೊಸ ದಾಖಲೆ?

ರಿಕ್ಕಿ ಕೇಜ್​ ಅವರು ಸ್ಟೀವರ್ಟ್ ಕೋಪ್ಲ್ಯಾಂಡ್ ಜತೆ ಸೇರಿ ‘ಡಿವೈನ್ ಟೈಡ್ಸ್’ ಎಂಬ ಹೊಸ ಆಲ್ಬಂ ಮಾಡಿದ್ದರು. ಇದು ಸಾಕಷ್ಟು ಖ್ಯಾತಿ ಗಳಿಸಿಕೊಂಡಿದೆ. ಈ ಆಲ್ಬಂ ಕಂಪೋಸ್​ ಮಾಡಿದ್ದಕ್ಕಾಗಿ ಅವರ ಹೆಸರು 64ನೇ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ.

ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ರಿಕ್ಕಿ ಕೇಜ್​; ಸೃಷ್ಟಿ ಆಗಲಿದೆ ಹೊಸ ದಾಖಲೆ?
ರಿಕ್ಕಿ ಕೇಜ್

ಭಾರತದ ಸಂಗೀತ ಸಂಯೋಜಕ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್​ ಅವರು ಸಾಕಷ್ಟು ಕೀರ್ತಿ ಹೊಂದಿದ್ದಾರೆ. ವಿಶೇಷ ಎಂದರೆ ಅವರು ಈಗ ಮತ್ತೊಮ್ಮೆ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಈ ಮೂಲಕ ಮತ್ತೊಂದು ಪ್ರತಿಷ್ಠಿತ ಅವಾರ್ಡ್​​ಅನ್ನು ಬಾಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಒಂದೊಮ್ಮೆ ಅವರು ಮತ್ತೊಂದು ಗ್ರ್ಯಾಮಿ ಪ್ರಶಸ್ತಿ ಪಡೆದರೆ ಭಾರತದ ಪಾಲಿಗೆ ಇದು ನಿಜಕ್ಕೂ ಹೆಮ್ಮೆ ತರುವ ವಿಚಾರ ಆಗಲಿದೆ.

ರಿಕ್ಕಿ ಕೇಜ್​ ಅವರು ಸ್ಟೀವರ್ಟ್ ಕೋಪ್ಲ್ಯಾಂಡ್ ಜತೆ ಸೇರಿ ‘ಡಿವೈನ್ ಟೈಡ್ಸ್’ ಎಂಬ ಹೊಸ ಆಲ್ಬಂ ಮಾಡಿದ್ದರು. ಇದು ಸಾಕಷ್ಟು ಖ್ಯಾತಿ ಗಳಿಸಿಕೊಂಡಿದೆ. ಈ ಆಲ್ಬಂ ಕಂಪೋಸ್​ ಮಾಡಿದ್ದಕ್ಕಾಗಿ ಅವರ ಹೆಸರು 64ನೇ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ರಿಕ್ಕಿ ಅವರು 2015ರಲ್ಲಿ ಗ್ರ್ಯಾಮಿ ಅವಾರ್ಡ್ ಬಾಚಿಕೊಂಡಿದ್ದರು. ‘ವಿಂಡ್ಸ್​ ಆಫ್​ ಸಂಸಾರ’ ಹಾಡಿಗೆ ಈ ಅವಾರ್ಡ್​ ಬಂದಿತ್ತು. ಮಹಾತ್ಮ ಗಾಂಧಿ ಹಾಗೂ ನೆಲ್ಸನ್​ ಮಂಡೇಲ ಅವರ ಚಿಂತನೆಗಳನ್ನು ಇಟ್ಟುಕೊಂಡು ಈ ಹಾಡು ಕಂಪೋಸ್​ ಮಾಡಲಾಗಿತ್ತು ಅನ್ನೋದು ವಿಶೇಷ. ಅತಿ ಸಣ್ಣ ವಯಸ್ಸಿಗೆ ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ ಎಂಬ ಖ್ಯಾತಿ ರಿಕ್ಕಿಗೆ ಇದೆ. ಭಾರತದಲ್ಲಿ ಈ ಪ್ರಶಸ್ತಿ ಪಡೆದುಕೊಂಡ ನಾಲ್ಕನೇ ವ್ಯಕ್ತಿ ಇವರಾಗಿದ್ದಾರೆ.

ಈ ಬಾರಿ ಮಾಡಲಾದ ‘ಡಿವೈನ್​ ಟೈಡ್​’ನಲ್ಲಿ ನಮ್ಮ ನೈಸರ್ಗಿಕ ಜಗತ್ತು ಮತ್ತಿತರ ವಿಚಾರಗಳನ್ನು ಹೇಳಲಾಗಿದೆ. ಈ ಆಲ್ಬಂನಲ್ಲಿ 9 ಹಾಡುಗಳು ಹಾಗೂ 8 ಮ್ಯೂಸಿಕ್​ ವಿಡಿಯೋ ಇದೆ. ಭಾರತದ ಹಿಮಾಲಯ ಪ್ರದೇಶಗಳಲ್ಲಿ ಇದನ್ನು ಶೂಟ್​ ಮಾಡಲಾಗಿದೆ. ವಿಶ್ವದ ನಾನಾ ಕಡೆಗಳಲ್ಲಿ ಈ ಹಾಡು ಪ್ರದರ್ಶನ ಕಂಡು ಅವಾರ್ಡ್​ ಪಡೆದುಕೊಂಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಿಕ್ಕಿ, ‘ನಮ್ಮ ಆಲ್ಬಂ ‘ಡಿವೈನ್ ಟೈಡ್ಸ್’ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಖುಷಿ ನೀಡಿದೆ. ನನ್ನ ಸಂಗೀತವು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಈ ನಾಮನಿರ್ದೇಶನದಿಂದ ನನಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ರಿಲೀಸ್​ಗೂ ಮೊದಲೇ ಸಾವಿರ ಕೋಟಿ ಸಮೀಪಿಸಿತು ‘ಆರ್​ಆರ್​ಆರ್​’ ಗಳಿಕೆ; ರಾಜಮೌಳಿ ಹೊಸ ದಾಖಲೆ

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

Click on your DTH Provider to Add TV9 Kannada