ವಿಚ್ಛೇದನದ ನಂತರ ಮೊದಲ ಬಾರಿಗೆ ಸಿಹಿ ಸುದ್ದಿ ನೀಡಿದ ಸಮಂತಾ

ಎಸ್.​ಆರ್.​ ಪ್ರಕಾಶ್​ ಬಾಬು ಹಾಗು ಎಸ್​.ಆರ್.​ ಪ್ರಭು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಡ್ರೀಮ್​ ವಾರಿಯರ್​ ಪಿಕ್ಚರ್ಸ್​ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

ವಿಚ್ಛೇದನದ ನಂತರ ಮೊದಲ ಬಾರಿಗೆ ಸಿಹಿ ಸುದ್ದಿ ನೀಡಿದ ಸಮಂತಾ
ಸಮಂತಾ

ಸಮಂತಾ ಅವರು ನಾಗ ಚೈತನ್ಯ ಜತೆ ವಿಚ್ಛೇದನ ಪಡೆದುಕೊಳ್ಳುವುದಕ್ಕೂ ಮೊದಲು ಚಿತ್ರದ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡಿದ್ದರು. ಅಷ್ಟೆ ಅಲ್ಲ, ಗೆಳೆಯರ ಜತೆ, ಆಪ್ತರ ಜತೆ ಸುತ್ತಾಟ ನಡೆಸಿದ್ದರು. ಸಣ್ಣ ಬ್ರೇಕ್​ ನಂತರದಲ್ಲಿ ಸಮಂತಾ ಮತ್ತೆ ಸಿನಿಮಾ ಕೆಲಸಗಳಿಗೆ ವಾಪಸ್​ ಆಗಿದ್ದಾರೆ. ಸಮಂತಾ ಅವರು ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸದ್ಯ, ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಸಮಂತಾ ಮುಂದಿನ ಸಿನಿಮಾ ಬಗ್ಗೆ ಚಿತ್ರತಂಡ ಟ್ವೀಟ್​ ಮಾಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಶಾಂತರುಬನ್​ ಜ್ಞಾನಶೇಖರನ್​ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಈ ಘೋಷಣೆ​ ಆಗಿದೆ.

ಎಸ್.​ಆರ್.​ ಪ್ರಕಾಶ್​ ಬಾಬು ಹಾಗು ಎಸ್​.ಆರ್.​ ಪ್ರಭು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಡ್ರೀಮ್​ ವಾರಿಯರ್​ ಪಿಕ್ಚರ್ಸ್​ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ನಾಗ ಚೈತನ್ಯ ಜತೆಗಿನ ವಿಚ್ಛೇದನದ ನಂತರ ಅವರು ಒಪ್ಪಿಕೊಂಡಿರುವ ಮೊದಲ ಸಿನಿಮಾ ಇದಾಗಿದೆ. ಅಂದಹಾಗೆ, ಈ ಸಿನಿಮಾ ಒಂದು ಸುಂದರ ಲವ್​ಸ್ಟೋರಿಯನ್ನು ಹೊಂದಿದೆ ಎನ್ನಲಾಗುತ್ತಿದೆ.

‘ಫ್ಯಾಮಿಲಿ ಮ್ಯಾನ್​ 2’ ಹಿಟ್​ ಆದ ನಂತರದಲ್ಲಿ ಸಮಂತಾಗೆ ಬೇಡಿಕೆ ಹೆಚ್ಚಿದೆ. ಅವರಿಗೆ ಸಾಲು ಸಾಲು ಸಿನಿಮಾ ಆಫರ್​ಗಳು ಬರುತ್ತಿವೆ ಎನ್ನಲಾಗಿದೆ. ಆದರೆ, ಅವರು ಕಥೆ, ಪಾತ್ರ ಎಲ್ಲದನ್ನೂ ಕೇಳಿ, ಅವರಿಗೆ ಅದ್ಭುತ ಎನಿಸಿದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಮಂತಾ ನಟನೆಯ ‘ಶಾಕುಂತಲಮ್​’ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಿಗೆ ಶೀಘ್ರವೇ ಚಾಲನೆ ಸಿಗುತ್ತಿದೆ. ಇದಲ್ಲದೆ, ‘ಕಾದು ವಾಕುಲಾ ರೆಂಡು ಕಾದಲ್​’ ಸಿನಿಮಾದಲ್ಲೂ ಸಮಂತಾ ನಟಿಸುತ್ತಿದ್ದಾರೆ. ನಯನತಾರಾ ಮತ್ತು ವಿಜಯ್​ ಸೇತುಪತಿ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ‘ಇಲ್ಲಿ ಕೂರಲು ಭಯವಾಗುತ್ತಿದೆ’; ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಸಮಂತಾ ಮಾತು

Kotigobba 3 Movie Review: ಕೋಟಿಗೊಬ್ಬನ ಅದ್ದೂರಿತನದಲ್ಲಿ ಒಂದಷ್ಟು ಮಿಂಚಿಂಗ್​, ಮತ್ತೊಂದಿಷ್ಟು ಮಿಸ್ಸಿಂಗ್​

Click on your DTH Provider to Add TV9 Kannada