Samantha: 30 ಸಾವಿರ ಬೆಲೆಯ ಸ್ವಿಮ್​ವೇರ್​ ಪ್ರಮೋಷನ್​ಗೆ 90 ಲಕ್ಷ ರೂ. ಪಡೆದ ಸಮಂತಾ

ಸಮಂತಾ ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಸ್ವಿಮ್​ವೇರ್​ನಲ್ಲಿ ಅವರು ಗಮನ ಸೆಳೆದಿದ್ದರು. ಎಲ್ಲರೂ ಇದೊಂದು ಸಾಮಾನ್ಯ ಫೋಟೋಶೂಟ್ ಎಂದು ಭಾವಿಸಿದ್ದರು. ಆದರೆ, ವಿದೇಶಿ ಬ್ರ್ಯಾಂಡ್​ಗೋಸ್ಕರ ಮಾಡಿಸಿದ ಫೋಟೋಶೂಟ್ ಇದಾಗಿತ್ತು.

Samantha: 30 ಸಾವಿರ ಬೆಲೆಯ ಸ್ವಿಮ್​ವೇರ್​ ಪ್ರಮೋಷನ್​ಗೆ 90 ಲಕ್ಷ ರೂ. ಪಡೆದ ಸಮಂತಾ
ಸಮಂತಾ
TV9kannada Web Team

| Edited By: Rajesh Duggumane

Jun 08, 2022 | 6:32 PM

ನಟಿ ಸಮಂತಾ (Samantha) ಅವರು ನಾಗ ಚೈತನ್ಯ (Naga Chaitanya) ಜತೆ ವಿಚ್ಛೇದನ ಪಡೆದ ನಂತರ ವೃತ್ತಿ ಜೀವನದ ಆಯ್ಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರು. ಮದುವೆ ನಂತರದಲ್ಲಿ ಸಮಂತಾ ಪಾತ್ರಗಳ ಆಯ್ಕೆಯಲ್ಲಿ ನಿರ್ಬಂಧ ಹೇರಿಕೊಂಡಿದ್ದರು. ಹಾಟ್​ ಪಾತ್ರಗಳಿಗೆ ಅವರು ನೋ ಎನ್ನುತ್ತಿದ್ದರು. ವಿಚ್ಛೇದನಕ್ಕೂ ಮುನ್ನ ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಸಮಂತಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡರು. ಆ ಬಳಿಕ ‘ಪುಷ್ಪ’ ಚಿತ್ರದ (Pushpa Movie) ‘ಹೂ ಅಂತೀಯಾ ಮಾವ..’ ಹಾಡಿನಲ್ಲಿ ಸಖತ್ ಬೋಲ್ಡ್​ ಆಗಿ ಕಾಣಿಸಿಕೊಂಡರು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸುವ ಸಾಕಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಮಂತಾ ಇತ್ತೀಚೆಗೆ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಸ್ವಿಮ್​ವೇರ್​ನಲ್ಲಿ ಅವರು ಗಮನ ಸೆಳೆದಿದ್ದರು. ಎಲ್ಲರೂ ಇದೊಂದು ಸಾಮಾನ್ಯ ಫೋಟೋಶೂಟ್ ಎಂದು ಭಾವಿಸಿದ್ದರು. ಆದರೆ, ವಿದೇಶಿ ಬ್ರ್ಯಾಂಡ್​ಗೋಸ್ಕರ ಮಾಡಿಸಿದ ಫೋಟೋಶೂಟ್ ಇದಾಗಿತ್ತು. ಈ ಡ್ರೆಸ್​ ತೊಟ್ಟು ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಸ್ವಿಮ್​ವೇರ್​ನ ಬೆಲೆ ಬರೋಬ್ಬರಿ 30 ಸಾವಿರ ರೂಪಾಯಿ. ಇದರ ಪ್ರಮೋಷನ್​ಗೆ ಸಮಂತಾ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಯಾವುದಾದರೂ ಬ್ರ್ಯಾಂಡ್ ಪ್ರಮೋಷನ್ ಮಾಡಬೇಕು ಎಂದರೆ ಸೆಲೆಬ್ರಿಟಿಗಳು ಹಣ ಪಡೆಯುತ್ತಾರೆ. ಅವರ ಪಾಪ್ಯುಲಾರಿಟಿ ಮೇಲೆ ಮೊತ್ತ ನಿಗದಿ ಆಗುತ್ತದೆ. ಸಮಂತಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಖ್ಯಾತಿ ಹೆಚ್ಚುತ್ತಿದೆ. ಹಾಟ್ ಅವತಾರ ತಾಳಲು ಅವರಿಗೆ ಮುಜುಗರ ಇಲ್ಲ. ಈ ಕಾರಣಕ್ಕೆ ವಿದೇಶಿ ಬಟ್ಟೆ ಬ್ರ್ಯಾಂಡ್​​ನವರು​​ ಸಮಂತಾ ಬಳಿ ಪ್ರಮೋಷನ್ ಮಾಡಿಸಿದ್ದಾರೆ. ಅವರು ಈ ಸ್ವಿಮ್​ವೇರ್ ತೊಟ್ಟು ಫೋಟೋ ಹಾಕಲು 90 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ವರದಿ ಆಗಿದೆ. ಆದರೆ, ಈ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಇದನ್ನೂ ಓದಿ: ಸಮಂತಾ ಹಾಟ್​ನೆಸ್​ಗೆ ಮಿತಿಯೇ ಇಲ್ಲ; ಟೆಂಪ್ರೇಚರ್ ಹೆಚ್ಚಿಸಿದ ಹೊಸ ಫೋಟೋ

ಸಮಂತಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಹಾಲಿವುಡ್​ನಿಂದಲೂ ಆಫರ್ ಬಂದಿದೆ. ಟಾಲಿವುಡ್ ಮಾತ್ರವಲ್ಲದೆ, ಕಾಲಿವುಡ್ ಹಾಗೂ ಬಾಲಿವುಡ್​ನಲ್ಲೂ ಅವರು ತೊಡಗಿಕೊಂಡಿದ್ದಾರೆ. ಪ್ರತಿ ಸಿನಿಮಾಗೆ ಭಿನ್ನ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಅವರು ಸುತ್ತಾಟ ಕೂಡ ಮಾಡುತ್ತಿರುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada