‘777 ಚಾರ್ಲಿ’ ಬಗ್ಗೆ ಹೊಸ ಅಪ್​ಡೇಟ್​; ಡಿಸೆಂಬರ್​ 31ಕ್ಕೆ ಸಿನಿಮಾ ರಿಲೀಸ್​ ಆಗಲ್ಲ ಎಂದ ರಕ್ಷಿತ್ ಶೆಟ್ಟಿ

‘777 ಚಾರ್ಲಿ’ ಬಗ್ಗೆ ಹೊಸ ಅಪ್​ಡೇಟ್​; ಡಿಸೆಂಬರ್​ 31ಕ್ಕೆ ಸಿನಿಮಾ ರಿಲೀಸ್​ ಆಗಲ್ಲ ಎಂದ ರಕ್ಷಿತ್ ಶೆಟ್ಟಿ
ರಕ್ಷಿತ್​

ರಕ್ಷಿತ್ ಶೆಟ್ಟಿ ವೃತ್ತಿಜೀವನಕ್ಕೆ ಬಹುದೊಡ್ಡ ಬ್ರೇಕ್ ​ನೀಡಿದ ಸಿನಿಮಾ ಕಿರಿಕ್​ ಪಾರ್ಟಿ. ಆ ಚಿತ್ರ ಕೂಡ ಡಿಸೆಂಬರ್​ ಅಂತ್ಯಕ್ಕೆ (ಡಿ.30) ತೆರೆಕಂಡು ಧೂಳೆಬ್ಬಿಸಿತ್ತು. ಈಗ ಅದೇ ಸಮಯಕ್ಕೆ ‘777 ಚಾರ್ಲಿ’ ಮೂಲಕ ರಕ್ಷಿತ್​ ಶೆಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾಗುವವರಿದ್ದರು.

TV9kannada Web Team

| Edited By: Rajesh Duggumane

Dec 12, 2021 | 7:08 PM

ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ದೊಡ್ಡಮಟ್ಟದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಬಿಡುಗಡೆ ಆಗಿದ್ದ ಟೀಸರ್​, ಪೋಸ್ಟರ್, ಸಾಂಗ್​​​ಗಳಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಿತ್ತು. ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ಉಳಿದುಕೊಂಡಿದ್ದವು. ಇತ್ತೀಚೆಗೆ ಅದನ್ನು ಪೂರ್ಣಗೊಳಿಸಿತ್ತು. ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲೂ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ಇವುಗಳ ಕೆಲಸಗಳು ಈಗ ಭರದಿಂದ ಸಾಗುತ್ತಿದೆ. ಡಿಸೆಂಬರ್​ 31ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಚಿತ್ರ ವಿಳಂಬವಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ರಕ್ಷಿತ್ ಶೆಟ್ಟಿ ವೃತ್ತಿಜೀವನಕ್ಕೆ ಬಹುದೊಡ್ಡ ಬ್ರೇಕ್ ​ನೀಡಿದ ಸಿನಿಮಾ ಕಿರಿಕ್​ ಪಾರ್ಟಿ. ಆ ಚಿತ್ರ ಕೂಡ ಡಿಸೆಂಬರ್​ ಅಂತ್ಯಕ್ಕೆ (ಡಿ.30) ತೆರೆಕಂಡು ಧೂಳೆಬ್ಬಿಸಿತ್ತು. ಈಗ ಅದೇ ಸಮಯಕ್ಕೆ ‘777 ಚಾರ್ಲಿ’ ಮೂಲಕ ರಕ್ಷಿತ್​ ಶೆಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾಗುವವರಿದ್ದರು. ಆದರೆ, ಚಿತ್ರದ ಕೆಲಸಗಳು ವಿಳಂಬವಾಗಿರುವುದರಿಂದ ಸಿನಿಮಾ ರಿಲೀಸ್​ ದಿನಾಂಕ ವಿಳಂಬವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ರಕ್ಷಿತ್​ ಶೆಟ್ಟಿ ಬರೆದುಕೊಂಡಿದ್ದಾರೆ.

‘777 ಚಾರ್ಲಿಯ ಈ ಸುದೀರ್ಘ ಪಯಣದಲ್ಲಿ ನೀವು ನಮಗೆ ತೋರಿರುವ ಪ್ರೀತಿ ಹಾಗು ಬೆಂಬಲಕ್ಕೆ ನಾವು ಆಭಾರಿ. ನಾವು ಈ ಮೂಲಕ ತಿಳಿಸ ಬಯಸುವುದೇನೆಂದರೆ, ನಮ್ಮ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಮೊದಲು ನಿಗದಿಪಡಿಸಲಾಗಿದ್ದ ದಿನಾಂಕವಾದ 31 ಡಿಸೆಂಬರ್ 2021 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿಲ್ಲ. ಕೆಲವು ವಿಳಂಬಗಳು ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ. ಅತೀ ಶೀಘ್ರದಲ್ಲಿ ಹೊಸ ಪ್ರಕಟಣೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ. ಅಲ್ಲಿಯವರೆಗೂ, ಹರಸಿ.. ಹಾರೈಸಿ’ ಎಂದು ಬರೆದುಕೊಂಡಿದ್ದಾರೆ.

ಕಿರಣ್​ ರಾಜ್​ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ. ಶೆಟ್ಟಿ, ದಾನಿಶ್​ ಸೇಟ್​ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪರಮ್​ವಾ ಸ್ಟುಡಿಯೋ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ. ಹೊಸ ರಿಲೀಸ್ ಡೇಟ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಕಿರಿಕ್​ ಪಾರ್ಟಿ ರೀತಿ ಡಿಸೆಂಬರ್​ನಲ್ಲಿ ರಕ್ಷಿತ್​ ಶೆಟ್ಟಿ ಅದೃಷ್ಟ ಪರೀಕ್ಷೆ; ‘777 ಚಾರ್ಲಿ’ ಟಾರ್ಚರ್​ಗೆ ಧರ್ಮ ಸುಸ್ತೋ ಸುಸ್ತು​

‘777 ಚಾರ್ಲಿ’ ಸಿನಿಮಾ ಶೂಟಿಂಗ್​ ಮುಕ್ತಾಯ; ಕುಂಬಳಕಾಯಿ ಒಡೆದ ಸಂಭ್ರಮದಲ್ಲಿ ರಕ್ಷಿತ್​

Follow us on

Related Stories

Most Read Stories

Click on your DTH Provider to Add TV9 Kannada