Rishab Shetty | ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಈ ಬೆಂಕಿ ತಗುಲಿದೆ. ನಟ ರಿಷಬ್ ಶೆಟ್ಟಿ ತಲೆ ಕೂದಲು ಸುಟ್ಟು, ಬೆನ್ನಿಗೆ ಗಾಯವಾಗಿದೆ. ಜಿಲ್ಲೆಯ ಬೇಲೂರಿನಲ್ಲಿ ‘ಹೀರೋ’ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

  • TV9 Web Team
  • Published On - 10:02 AM, 1 Mar 2021
Rishab Shetty | ಶೂಟಿಂಗ್​ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ
ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

ಹಾಸನ: ಚಿತ್ರೀಕರಣದ ವೇಳೆ ನಟ ರಿಷಬ್ ಶೆಟ್ಟಿಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ನಟ, ನಿರ್ದೇಶಕ ರಿಷಬ್ ಶೆಟ್ಟ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಕೊಂಚವೇ ಯಾಮಾರಿದ್ದರೂ ಅವರ ಪ್ರಾಣಕ್ಕೆ ಅಪಾಯವಿತ್ತು. ಅದೃಷ್ಟವಶಾತ್ ನಟ ರಿಷಬ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ. ಗಾನಾವಿ ಲಕ್ಷ್ಮಣ್ ಅವರು ಚಿತ್ರದ ನಾಯಕಿ ಪಾತ್ರದಲ್ಲಿದ್ದಾರೆ.​

ಚಿತ್ರೀಕರಣಕ್ಕಾಗಿ ಪೆಟ್ರೋಲ್ ಬಾಂಬ್ ಸಿಡಿಸುವ ವೇಳೆ ಈ ಬೆಂಕಿ ತಗುಲಿದೆ. ನಟ ರಿಷಬ್ ಶೆಟ್ಟಿ ತಲೆ ಕೂದಲು ಸುಟ್ಟು, ಬೆನ್ನಿಗೆ ಗಾಯವಾಗಿದೆ. ಜಿಲ್ಲೆಯ ಬೇಲೂರಿನಲ್ಲಿ ‘ಹೀರೋ’ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.

petrol bomb explodes during hero shooting in belur

ಹೀರೊ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ

petrol bomb explodes during hero shooting in belur

ಹೀರೊ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸ್ಫೋಟ ಸಿಡಿದು ನಟ ರಿಷಬ್ ಶೆಟ್ಟಿಗೆ ಬೆನ್ನು, ತಲೆಗೆ ಬೆಂಕಿ

ರಿಷಬ್​ ಶೆಟ್ಟಿ ಅಭಿನಯದ ಹೀರೋ ಸಿನಿಮಾ ಮಾರ್ಚ್​ 5ರಂದು ತೆರೆಗೆ ಬರುತ್ತಿದೆ. ಗಾನವಿ ಲಕ್ಷ್ಮಣ್​ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಎಂ ಭರತ್​ ರಾಜ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.