‘ಕಾಂತಾರ: ಚಾಪ್ಟರ್ 1’ ಅದೆಷ್ಟು ಬೃಹತ್ ಸಿನಿಮಾ ಗೊತ್ತೆ?
Kantara Chapter 1: ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಕೆರಾಡಿ, ಕುಂದಾಪುರ, ಪಶ್ಚಿಮ ಘಟ್ಟಸಾಲು, ಕರಾವಳಿ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಸ್ಥಳೀಯವಾಗಿ ಚಿತ್ರೀಕರಣಗೊಂಡಿದೆ ಎಂಬ ಮಾತ್ರಕ್ಕೆ ಇದು ಸಾಮಾನ್ಯ ಸಿನಿಮಾ ಅಲ್ಲ. ಸಿನಿಮಾನಲ್ಲಿ ಅತ್ಯದ್ಭುತವಾದ ಹಿಂದೆಂದೂ ನೋಡಿದರ ಪ್ರಪಂಚವನ್ನೇ ಸೃಷ್ಟಿ ಮಾಡಲಾಗಿದೆ. ಸಿನಿಮಾ ಅದೆಷ್ಟು ಬೃಹತ್ ಆಗಿದೆ ಗೊತ್ತೆ?

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಟೋಬರ್ 2 ರಂದು ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ. ಸಿನಿಮಾದ ಚಿತ್ರೀಕರಣ ರಿಷಬ್ ಅವರ ಹುಟ್ಟೂರು ಕೆರಾಡಿ, ಕುಂದಾಪುರ, ಪಶ್ಚಿಮ ಘಟ್ಟಸಾಲು, ಕರಾವಳಿ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ಸ್ಥಳೀಯವಾಗಿ ಚಿತ್ರೀಕರಣಗೊಂಡಿದೆ ಎಂಬ ಮಾತ್ರಕ್ಕೆ ಇದು ಸಾಮಾನ್ಯ ಸಿನಿಮಾ ಅಲ್ಲ. ಸಿನಿಮಾನಲ್ಲಿ ಅತ್ಯದ್ಭುತವಾದ ಹಿಂದೆಂದೂ ನೋಡಿದರ ಪ್ರಪಂಚವನ್ನೇ ಸೃಷ್ಟಿ ಮಾಡಲಾಗಿದೆ. ಸಿನಿಮಾ ಅದೆಷ್ಟು ಬೃಹತ್ ಆಗಿದೆ ಎಂದು ಸಿನಿಮಾಕ್ಕೆ ಹಗಲಿರುಳು ದುಡಿದಿರುವ ಪ್ರೊಡಕ್ಷನ್ ಡಿಸೈನರ್ ಹೇಳಿದ್ದಾರೆ.
ಪರಭಾಷೆಯ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಕೆಲಸ ಮಾಡಿರುವ ಬಂಗ್ಲನ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಪ್ರೊಡಕ್ಷನ್ ಡಿಸೈನ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಕಲ್ಪನೆಯಲ್ಲಿದ್ದ ದೃಶ್ಯಗಳಿಗೆ ನಿಜರೂಪಕ್ಕೆ ಇಳಿಸಿರುವುದು ಇದೇ ಬಂಗ್ಲನ್. ಸಂದರ್ಶನವೊಂದರಲ್ಲಿ ಮಾತನಾಡಿರುವ ಬಂಗ್ಲನ್, ‘ಕಾಂತಾರ: ಚಾಪ್ಟರ್ 1’ ಸಿನಿಮಾ ನನ್ನ ಈ ವರೆಗಿನ ವೃತ್ತಿ ಜೀವನದಲ್ಲಿಯೇ ಅತ್ಯಂತ ಮಹತ್ವದ ಮತ್ತು ಸವಾಲಿನ ಸಿನಿಮಾ ಆಗಿತ್ತು ಎಂದಿದ್ದಾರೆ.
ಈ ಸಿನಿಮಾದ ಕಲಾ ವಿಭಾಗಕ್ಕಾಗಿಯೇ ಸುಮಾರು 600 ಜನರ ತಂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದೆಯಂತೆ. ಬೆಂಗಳೂರು, ಚೆನ್ನೈ, ಕೊಚ್ಚಿ, ಮುಂಬೈಗಳಿಂದ ನುರಿತ ಕುಶಲಕರ್ಮಿಗಳನ್ನು ಕರೆಸಿ ಸಿನಿಮಾದ ಸೆಟ್ ಡಿಸೈನ್ ಮಾಡಿಸಲಾಗಿದೆ. ಸಿನಿಮಾದಲ್ಲಿ ಕಾಣುವ ಪ್ರತಿ ವಸ್ತುವನ್ನೂ ಸಹ ಬಲು ಜಾಗೃತೆಯಿಂದ ನಿರ್ಮಿಸಲಾಗಿದೆಯಂತೆ. ಸುಮಾರು 1000 ವರ್ಷ ಪುರಾತನವಾದ ಪ್ರಪಂಚವನ್ನು ಅವರು ಮರು ಸೃಷ್ಟಿಸಿದ್ದಾರೆ.
ಇದನ್ನೂ ಓದಿ:‘ಕಾಂತಾರ’, ‘ಟಾಕ್ಸಿಕ್’ ಚಿತ್ರಗಳಿಗೆ ಅಷ್ಟಾಗಿ ಆಗಲ್ಲ ಟಿಕೆಟ್ ಪ್ರೈಸ್ ಕಟ್ ಎಫೆಕ್ಟ್?
‘ಈ ಸಿನಿಮಾಕ್ಕಾಗಿ ಪ್ರತಿ ಗಿಡ, ಮರಗಳನ್ನು ಸಹ ನಾನು ಅಭ್ಯಾಸ ಮಾಡಿದ್ದೇನೆ. ಸಿನಿಮಾಕ್ಕೆ ಬೇಕಾದ ವಸ್ತುಗಳನ್ನು ತರಲು ಹಲವು ಊರುಗಳನ್ನು ಸುತ್ತಿದ್ದೇನೆ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಹಲವು ಕಡೆಗಳಿಂದ ನಾವು ಪ್ರಾಪ್ಗಳನ್ನು ತರಿಸಿಕೊಂಡು ಅವನ್ನು ಬದಲಾವಣೆ ಮಾಡಿ ಅವುಗಳನ್ನು ಈ ಸಿನಿಮಾಕ್ಕೆ ಬಳಸಿಕೊಂಡಿದ್ದೇವೆ. ಸಿನಿಮಾನಲ್ಲಿ ಬಳಕೆ ಆಗುವ ಪ್ರತಿ ವಸ್ತುವನ್ನೂ ತಿಂಗಳುಗಟ್ಟಲೆ ಅಧ್ಯಯನ ಮಾಡಿ ಅದನ್ನು ತಯಾರು ಮಾಡಿದ್ದೀವಿ’ ಎಂದಿದ್ದಾರೆ ಬಂಗ್ಲನ್.
ಸಿನಿಮಾದ ಕಲಾ ವಿಭಾಗದಲ್ಲಿಯೇ 600 ಕ್ಕೂ ಹೆಚ್ಚು ಮಂದಿ ಕೆಲಸ ಮಾಡಿದ್ದಾರೆ. ಇನ್ನು ಸಿನಿಮಾದ ಆಕ್ಷನ್ ದೃಶ್ಯಗಳದ್ದು ಬೇರೆಯದ್ದೇ ಕತೆ. ಯುದ್ಧದ ಸನ್ನಿವೇಶಗಳಿಗೆ ಸಾವಿರಾರು ಮಂದಿಯನ್ನು ಬಳಸಿಕೊಳ್ಳಲಾಗಿದೆಯಂತೆ. ಸಿನಿಮಾದ ಆಕ್ಷನ್ ದೃಶ್ಯಗಳಿಗೆ ಹಾಲಿವುಡ್ನ ಖ್ಯಾತ ಸ್ಟಂಟ್ ಕೊರಿಯೋಗ್ರಾಫರ್ಗಳ ನೆರವು ಪಡೆಯಲಾಗಿದೆ. ರಿಷಬ್ ಶೆಟ್ಟಿ ಸ್ವತಃ ಕಳರಿಪಯಟ್ಟು ಸಮರಕಲೆ ಕಲಿತು ಆಕ್ಷನ್ ಸನ್ನಿವೇಶಗಳಲ್ಲಿ ಭಾಗವಹಿಸಿದ್ದಾರೆ. ಡ್ಯೂಪ್ಗಳಿಲ್ಲದೆ ತಾವೇ ಆಕ್ಷನ್ ದೃಶ್ಯಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




