ಕಿಚ್ಚ ಸುದೀಪ್ (Kichcha Sudeep) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ಈ ಕಾರಣಕ್ಕೆ ಅವರ ಸಿನಿಮಾಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ಕಳೆದ ವರ್ಷ ತೆರೆಗೆ ಬಂದ ‘ಕೋಟಿಗೊಬ್ಬ 3’ (Kotigobba 3) ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ರಿಲೀಸ್ ಆಗಿತ್ತು. ಪರ ದೇಶಗಳಲ್ಲಿ ಇದ್ದುಕೊಂಡು ಈ ಸಿನಿಮಾ ನೋಡೋಕೆ ಸಾಧ್ಯವಾಗದೆ ಇದ್ದವರು, ಒಟಿಟಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದರು. ಈಗ ಸಿನಿಮಾದಿಂದ ಹೊಸ ಅಪ್ಡೇಟ್ ಒಂದು ಬಂದಿದೆ. ತೆಲುಗಿನಲ್ಲಿ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದಕ್ಕೆ ದಿನಾಂಕ ಕೂಡ ನಿಗದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ.
ಕಿಚ್ಚ ಸುದೀಪ್ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್ ದೃಶ್ಯಗಳನ್ನು ಹೊಂದಿದೆ. ಸುದೀಪ್ ಅವರು ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ನೀಡಿತ್ತು. ಕೆಲವರು ಎರಡು ಬಾರಿ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಈಗ ‘ಕೋಟಿಗೊಬ್ಬ 3’ ತೆಲುಗಿನಲ್ಲಿ ರಿಲೀಸ್ ಆಗೋಕೆ ರೆಡಿ ಆಗಿದೆ. ಫೆಬ್ರವರಿ 4ರಂದು ಸಿನಿಮಾ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
#KicchaSudeep‘s #K3Kotikokkadu Theatre Release on 4th February…#Kotigobba3 #K3 #Sudeep pic.twitter.com/CCA7iM5v2j
— Movie Lovers (@movielovers1021) January 30, 2022
ಕಿಚ್ಚ ಸುದೀಪ್ ಅವರಿಗೂ ಟಾಲಿವುಡ್ಗೂ ಒಳ್ಳೆಯ ನಂಟಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದ ‘ಈಗ’ ಸಿನಿಮಾದಲ್ಲಿ ಸುದೀಪ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ‘ಬಾಹುಬಲಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಕಾರಣಕ್ಕೆ ಟಾಲಿವುಡ್ ಮಂದಿಗೆ ಸುದೀಪ್ ಪರಿಚಯ ಇದೆ. ಹೀಗಾಗಿ, ‘ಕೋಟಿಗೊಬ್ಬ 3’ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.
ಡಬ್ಬಿಂಗ್ ಕಾರ್ಯಗಳು ವಿಳಂಬವಾದ್ದರಿಂದ ‘ಕೋಟಿಗೊಬ್ಬ 3’ ತೆಲುಗು ಅವತರಣಿಕೆಯ ರಿಲೀಸ್ ದಿನಾಂಕ ವಿಳಂಬವಾಗಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಈಗ ತೆಲುಗಿನಲ್ಲಿ ಯಾವುದೇ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದರ ಲಾಭವನ್ನು ಚಿತ್ರತಂಡ ಪಡೆದುಕೊಳ್ಳುತ್ತಿದೆ. ಈ ಸಿನಿಮಾಗೆ ಟಾಲಿವುಡ್ಮಂದಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್ ಒಂದು ದಿನ ವಿಳಂಬವಾದರೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಮೊದಲ ದಿನ ‘ಕೋಟಿಗೊಬ್ಬ 3’ ಬರೋಬ್ಬರಿ 12.5 ಕೋಟಿ ರೂಪಾಯಿ ಗಳಿಸಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೇ ಅಬ್ಬರ ಟಾಲಿವುಡ್ನಲ್ಲೂ ಇರಲಿದೆಯೇ ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ: ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ
ಒಟಿಟಿಯಲ್ಲಿ ರಿಲೀಸ್ ಆದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಬರುತ್ತಿದೆ ಉತ್ತಮ ಪ್ರತಿಕ್ರಿಯೆ