Meghana Raj: ಚಿರು, ಮೇಘನಾ ರೀತಿಯಲ್ಲೇ ಬೆಳೆಯುತ್ತಿರುವ ರಾಯನ್; ಹೇಗೆ? ವಿಶೇಷ ವಿಡಿಯೋ ಮೂಲಕ ವಿವರಿಸಿದ ನಟಿ

Selfie Mummy Google Daddy | Raayan Raj Sarja: ‘ಮೊಬೈಲ್ ಬಿಡಿ, ಮೈದಾನಕ್ಕೆ ಬನ್ನಿ’ ಎಂದು ಸಂದೇಶ ನೀಡಿದ್ದಾರೆ ಮೇಘನಾ ರಾಜ್. ರಾಯನ್ ರಾಜ್ ಸರ್ಜಾ ಆಟವಾಡುತ್ತಿರುವ ವಿಶೇಷ ವಿಡಿಯೋ ಮೂಲಕ ನಟಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

Meghana Raj: ಚಿರು, ಮೇಘನಾ ರೀತಿಯಲ್ಲೇ ಬೆಳೆಯುತ್ತಿರುವ ರಾಯನ್; ಹೇಗೆ? ವಿಶೇಷ ವಿಡಿಯೋ ಮೂಲಕ ವಿವರಿಸಿದ ನಟಿ
ಸುತ್ತಮುತ್ತ ಮನೆಯ ಮಕ್ಕಳೊಂದಿಗೆ ರಾಯನ್​ ಸರ್ಜಾ ಆಟವಾಡುತ್ತಿರುವುದು (ಎಡ), ಚಿರು-ಮೇಘನಾ ಹಾಗೂ ರಾಯನ್​ (ಬಲ)
TV9kannada Web Team

| Edited By: shivaprasad.hs

May 22, 2022 | 9:17 PM

ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಸದ್ಯ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಸಿನಿಮಾ ಕೆಲಸಗಳ ನಡುವೆಯೇ ಅವರು ಪ್ರಮುಖವಾಗಿ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಬೆಳವಣಿಗೆಯ ಮೇಲೆ ವಿಶೇಷ ಗಮನವಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ನಟಿ ರಾಯನ್ ತುಂಟಾಟಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದರೊಂದಿಗೆ ಚಿರಂಜೀವಿ ಸರ್ಜಾರ (Chiranjeevi Sarja) ನೆನಪುಗಳನ್ನೂ ಮೇಘನಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮೇಘನಾ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಚಿರು ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡಿರುವ ನಟಿ, ರಾಯನ್​ ಈಗ ಹೇಗೆ ಬೆಳೆಯುತ್ತಿದ್ದಾನೆ ಎನ್ನುವುದನ್ನೂ ವಿವರಿಸಿದ್ದಾರೆ. ಮನೆಯ ಸುತ್ತಮುತ್ತಲಿನ ಬಾಲಕರೊಂದಿಗೆ ರಾಯನ್ ಆಟವಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ನಟಿ, ‘ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ’ ಎಂದು ಕರೆ ನೀಡಿದ್ದಾರೆ.

ಮೇಘನಾ ರಾಜ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆದಿದ್ದಾರೆ. ‘ಮೊಬೈಲ್ ಬಿಡಿ’ ಎಂದು ಕರೆ ನೀಡಿರುವುದರ ಜತೆಗೆ ಹಿಂದಿನ ಕಾಲದಲ್ಲಿ ಮಕ್ಕಳು ಹೇಗೆ ಬೆಳೆಯುತ್ತಿದ್ದರು ಎನ್ನುವುದನ್ನೂ ನಟಿ ನೆನಪಿಸಿಕೊಂಡಿದ್ದಾರೆ. ಇದಕ್ಕೆ ತಮ್ಮದೇ ಉದಾಹರಣೆ ಕೊಟ್ಟಿರುವ ಮೇಘನಾ ‘‘ನಾನು ಹಾಗೂ ಚಿರು ಬೆಳೆದಂತೆಯೇ ರಾಯನ್​ ಕೂಡ ನಮ್ಮ ಏರಿಯಾದ ಮಕ್ಕಳೊಂದಿಗೆ ಆಟವಾಡುತ್ತಾ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ’’ ಎಂದು ಹೇಳಿದ್ದಾರೆ.

‘‘ಸಣ್ಣ ವಯಸ್ಸಿನಲ್ಲಿ ಕಾರ್ಟೂನ್​ಗಳೊಂದಿಗೆ ಆತ ಸಮಯ ಕಳೆಯಬೇಕು ಎನ್ನುವುದನ್ನು ಒಪ್ಪುತ್ತೇನೆ’’ ಎಂದಿರುವ ಮೇಘನಾ, ‘‘ಆದರೆ ರಾಯನ್​ ಹಳೆಯ ಮಾದರಿಯಲ್ಲಿ ಬೆಳೆಯುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಅಂದರೆ ಸುತ್ತಮುತ್ತಲಿನ ಮಕ್ಕಳೊಂದಿಗೆ ಆಟವಾಡುತ್ತಾ, ಆತನದ್ದೇ ವಯಸ್ಸಿನವರೊಂದಿಗೆ ಬೆರೆಯುತ್ತಾ ಬೆಳೆಯಬೇಕು’’ ಎಂದು ತಿಳಿಸಿದ್ದಾರೆ. ಈ ಪೋಸ್ಟ್​ಗೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಎಂದು ಹ್ಯಾಶ್ ಟ್ಯಾಗ್​ ನೀಡಿದ್ದಾರೆ ನಟಿ.

ಮೇಘನಾ ರಾಜ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

View this post on Instagram

A post shared by Meghana Raj Sarja (@megsraj)

ಇದನ್ನೂ ಓದಿ: ರಾಯನ್​ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್​; ಇಲ್ಲಿದೆ ವಿಡಿಯೋ

ಮೇಘನಾ ರಾಜ್​ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ವಿಚಾರವನ್ನು ಪ್ರಸ್ತಾಪಿಸಲೂ ಕಾರಣವಿದೆ. ಮೇ 13ರಂದು ಆ ಚಿತ್ರ ತೆರೆಕಂಡಿತ್ತು. ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಬೀರುವ ಪರಿಣಾಮವನ್ನು ಕಟ್ಟಿಕೊಟ್ಟಿದ್ದ ಈ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಮೇಘನಾ ಹಾಗೂ ಸೃಜನ್ ಲೋಕೇಶ್ ಅಭಿನಯಿಸಿದ್ದರು. ಆ ಚಿತ್ರದ ವಿಚಾರವನ್ನೇ ತಮ್ಮ ಪೋಸ್ಟ್​ನಲ್ಲೂ ಪ್ರಸ್ತಾಪಿಸಿದ್ದಾರೆ ಮೇಘನಾ. ಸದ್ಯ ಮೇಘನಾ ಅವರ ಕಾಳಜಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada